ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧ್ಯಾಯ 7 : ಎದೆಯ ಕೂಗು ಮೀರಿ...

By Staff
|
Google Oneindia Kannada News

ಅನು ಮನದಲ್ಲಿ ಅಂದು ಲೈಂಗಿಕ ಉದ್ವೇಗಆ ರಾತ್ರಿ ಅನು ಅಷ್ಟೇನೂ ಚೆನ್ನಾಗಿ ನಿದ್ದೆ ಮಾಡಲಿಲ್ಲ. ಆಕೆಯ ಮನಸ್ಸಿನ ಕಣ್ಣಿಗೆ ಡ್ಯಾನ್‌ ಧೀರೋದಾತ್ತನಾದ ಅತಿಮಾನುಷನಂತೆ ಕಂಡ: ಅವಳು ಲೆಕ್ಕವಿಲ್ಲದಷ್ಟು ಸಲ ಸಂತೋಷದಿಂದ ಜೊತೆಯಲ್ಲಿ ಹೋಗಬಹುದಾದ ನಿಶ್ಚಿಂತ, ಸುಲಭವಾಗಿ ಹೊಂದಿಕೊಂಡು ಹೋಗುವ ಮನುಷ್ಯ.

ಇಬ್ಬರೂ ಜೊತೆಯಾಗಿ ಸಿನೆಮಾಗಳಿಗೆ ಹೋಗುತ್ತಿರುವ, ಸಮುದ್ರದಂಡೆಯಲ್ಲಿ ಸೂರ್ಯಸ್ನಾನ ಮಾಡುತ್ತಿರುವ, ಜೊತೆಯಾಗಿ ಬೆಟ್ಟ ಹತ್ತುತ್ತಿರುವ, ಆ ಪಾಶ್ಚಿಮಾತ್ಯ ಸಂಸ್ಕೃತಿ ಖುಷಿಗಾಗಿ ಮಾಡುವ ಎಲ್ಲಾ ತರಹದವನ್ನು ತಾವೂ ಕೊನೆಯಿಲ್ಲದಷ್ಟು ಸಲ ಮಾಡುತ್ತಿರುವುದನ್ನು ಊಹಿಸಿಕೊಂಡಳು. ಆದಾಗ್ಯೂ, ಅಂತಿಮವಾಗಿ, ಕೇವಲ ನಿಷ್ಕಾಮ ಸಂಬಂಧಕ್ಕಿಂತ ಹೆಚ್ಚಿನದನ್ನು ಆತ ಬಯಸುತ್ತಾನೆ ಎಂಬ ಅರಿವಾಯಿತು ಅವಳಿಗೆ.

ಕಾಲೇಜಿನಲ್ಲಿದ್ದ ತನ್ನ ಭಾರತೀಯ ಸ್ನೇಹಿತರ ಜೊತೆ ಭಾರತದಲ್ಲಿ, ಹಾಗೂ ಇಲ್ಲಿಯೂ ಸಹ, ಇಂತಹ ಲೈಂಗಿಕ ಉದ್ವೇಗಕ್ಕೆ ಅವಳು ಈ ಮುಂಚೆ ಒಳಗಾಗಿರಲಿಲ್ಲ. ಜಾತಿ, ಭಾಷೆ, ಪೋಷಕರ ನಿರೀಕ್ಷೆಗಳಂತಹ ಅಡೆತಡೆಗಳು ಸ್ನೇಹಕ್ಕಿಂತ ಹೆಚ್ಚಿನದಕ್ಕೆ ಅನುಮತಿ ಕೊಡಲು ಸಾಧ್ಯವಿರಲಿಲ್ಲ.

ಹೆತ್ತವರನ್ನು ಅವರು ಬದುಕಿರುವ ತನಕವೂ ನೋಡಿಕೊಳ್ಳುವ ಜವಾಬ್ದಾರಿಯನ್ನು ಗಂಡುಮಕ್ಕಳಿಂದ ಬಯಸುತ್ತಿದ್ದರಿಂದ ಹುಡುಗರು ಅವರ ಪೋಷಕರು ಆಯ್ಕೆ ಮಾಡುತ್ತಿದ್ದ ಹುಡುಗಿಯರನ್ನು ಮಾತ್ರ ಮದುವೆಯಾಗುತ್ತಿದ್ದರು. ಆದರೆ ಅನುಳಿಗೆ ಅದು ಭಿನ್ನವಾಗಿತ್ತು. ಅವಳ ಪೋಷಕರು ಇವೆಲ್ಲವುಗಳನ್ನು ಮೀರಿದ್ದರು. ಅವಳು ಆಯ್ಕೆ ಮಾಡಿಕೊಳ್ಳುವ ಯಾರನ್ನೂ, ಎಂದಿಗೂ ಅವರು ಆಕ್ಷೇಪಿಸುವುದಿಲ್ಲ.

1950ರ ದಶಕದಷ್ಟು ಹಿಂದೆಯೆ ಅವರು ಒಬ್ಬರನ್ನೊಬ್ಬರು ಕಂಡುಕೊಂಡಿದ್ದರು. ಬೇರೆಬೇರೆ ಜಾತಿಯಾಗಿದ್ದರೂ ಮದುವೆಯಾಗಿ, ಕೋಲಾಹಲ ಸೃಷ್ಟಿಸಿದ್ದರು. ಅನುಳಿಗೆ ಪವನ್‌ ಒಂದು ದಶಕಕ್ಕಿಂತ ಹೆಚ್ಚುಕಾಲದಿಂದ ಹಿನ್ನೆಲೆಯಲ್ಲಿಯೇ ಇದ್ದು, ಅವಳ ಆಲೋಚನೆಗಳಲ್ಲಿ ಉಳಿದುಬಿಟ್ಟಿದ್ದ. ಅವಳು ಬೇರೆ ಮನುಷ್ಯನಿಗೆ ಬದ್ಧಳಾಗುವುದಕ್ಕಿಂತ ಮುಂಚೆ ಕನಿಷ್ಠ ಒಮ್ಮೆಯಾದರೂ ಅವಳು ಪವನ್‌ನನ್ನು ಕಾಣಲೇಬೇಕು.

(ಸಶೇಷ)

ಅಧ್ಯಾಯ - 6 ಅಧ್ಯಾಯ - 8

(c) ಹಕ್ಕುಗಳು : ಲೇಖಕರದು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X