ಕುವೈತ್‌ನಲ್ಲಿ ಜಯತೀರ್ಥ ಮೇವುಂಡಿ ಅಭಂಗವಾಣಿ
ಜಿ.ಎಸ್.ಬಿ.ಸಭಾ ಕುವೈತ್‌ನ ಆಶ್ರಯದಲ್ಲಿ ಇಲ್ಲಿನ ಭಾರತೀಯ ಸಮುದಾಯ ಶಾಲೆಯ ಸಭಾಭವನದಲ್ಲಿ ಧಾರವಾಡದ ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ಜಯತೀರ್ಥ ಮೇವುಂಡಿ ಅವರ ಅಭಂಗವಾಣಿ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಸಭಾದ ದಶಮಾನೋತ್ಸವ ಸಮಿತಿಯ ಅದ್ಯಕ್ಷ ಡಾ.ಸುರೇಂದ್ರ ನಾಯಕ್ ಕಾಪಾಡಿ ಸ್ವಾಗತಿಸಿದರು. ಮೇವುಂಡಿ ಅವರಿಗೆ ಹಾರ್ಮೋನಿಯಂನಲ್ಲಿ ಮಂಗಳೂರಿನ ನರೇಂದ್ರ ಎಲ್ ನಾಯಕ್ ಹಾಗೂ ತಬಲದಲ್ಲಿ ಧಾರವಾಡದ ಕೇಶವ್ ಜೋಷಿ ಸಾಥ್ ನೀಡಿದರು.
ಸಭಾದ ಅದ್ಯಕ್ಷ ಹರಿದಾಸ್ ಆಚಾರ್ಯ, ಕೋಶಾಧಿಕಾರಿ ದಿನೇಶ್ ಕಾಮತ್, ರಾಜಾರಾಮ್ ಪೈ ಕಟೀಲ್, ಸುರೇಂದ್ರ ಕಾಮತ್, ಸುರೇಶ ಪೈ, ರಾಮಚಂದ್ರ ಬಾಳಿಗ ಅತಿಥಿ ಕಲಾವಿದರನ್ನು ಸನ್ಮಾನಿಸಿದರು. ಕಾರ್ಯದರ್ಶಿ ಶ್ರೀನಿವಾಸ್ ಪ್ರಭುವಂದಿಸಿದರು.

ಶ್ರೀನಾಥ್ ಭಟ್, ಗಿರೀಶ್ ಶೆಣೈ, ರಮಾನಂದ ಕಾಮತ್, ಗೋಕುಲದಾಸ್ ಭಟ್, ಸುಧೀರ್ ಶೆಣೈ, ಎಂ.ಮೋಹನದಾಸ್ ಕಾಮತ್, ಗಣೇಶ್ ಪ್ರಭು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಜೆಪ್ಪು ಪುರುಷೋತ್ತಮ್ ನಾಯಕ್, ನಾಗರಾಜ್ ಶಾನಭಾಗ್, ನಾಗೇಶ್ ಕಾಮತ್, ಶೈಲಜಾ ನಾಯಕ್, ನಿಶಾ ಶಾನಭಾಗ್, ರಾಜೇಶ್ವರಿ ಕಾಮತ್ ಭೋಜನ ವ್ಯವಸ್ಥೆಯನ್ನು ಮಾಡಿದರು.
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಕಿರಾಣಾ ಘರಾನಾದ ಪಂಡಿತ್ ಜಯತೀರ್ಥ ಮೇವುಂಡಿ ಅವರು ಸಿಂಗಪುರ ಪ್ರವಾಸವನ್ನು ಕೈಗೊಂಡು ಅಲ್ಲಿಯೂ ಹಿಂದೂಸ್ತಾನಿ ಸಂಗೀತ ಸುಧೆಯನ್ನು ಹರಿಸಿದ್ದರು. ಆ ಸಂದರ್ಭದಲ್ಲಿ ನಡೆಸಲಾದ ಸಂದರ್ಶನದ ಪೂರ್ಣಪಾಠ ಇಲ್ಲಿದೆ, ಓದಿರಿ.











Click it and Unblock the Notifications