ಡಾ.ಕೃಷ್ಣಮೂರ್ತಿ ಜೋಯಿಸ್‌ಗೆ ಇಂಡೋ-ಥಾಯ್ ಪ್ರಶಸ್ತಿ

ಭಾರತ ಮತ್ತು ಥೈಲ್ಯಾಂಡ್ ದೇಶಗಳ ಮೈತ್ರಿಕೂಟವೊಂದರ ಸಮಾವೇಶ ಮಾರ್ಚ್ 26ರಂದು ಬ್ಯಾಂಕಾಕ್ ನಗರದಲ್ಲಿ ನಡೆದ ಸಂದರ್ಭದಲ್ಲಿ ಉಭಯ ದೇಶಗಳ ಸಂಸ್ಕೃತಿ ಪ್ರಚಾರಕ ಮತ್ತು ಸಮಾಜ ಸೇವಕ ವ್ಯಕ್ತಿಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ಕೊಡಲಾಗಿದೆ. ಥೈಲ್ಯಾಂಡ್‌ನ ಮಾಜಿ ಉಪಪ್ರಧಾನಿ ಕಾರ್ನ್ ದಬ್ರಾಂಸಿ ಪ್ರಶಸ್ತಿಯನ್ನು ವಿತರಿಸಿದರು.
ಮೂಲತಃ ಬೆಂಗಳೂರಿನ ಶೇಷಾದ್ರಿಪುರಂನವರಾದ ಡಾ. ಕೃಷ್ಣಮೂರ್ತಿ ಕಳೆದ 35 ವರ್ಷಗಳಿಂದ ಅಮೆರಿಕದಲ್ಲಿ ವಾಸವಾಗಿದ್ದಾರೆ. ಪ್ರಸ್ತುತ ಅಮೆರಿಕ ಸರಕಾರದ ಕೃಷಿ ಇಲಾಖೆಯ ವಾಷಿಂಗ್ಟನ್ ಡಿಸಿ ಕಚೇರಿಯಲ್ಲಿ ಉನ್ನತ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಾರಾಂತ್ಯಗಳಲ್ಲಿ ದೇವಸ್ಥಾನದ ಅರ್ಚಕ ವೃತ್ತಿಯನ್ನೂ ಮಾಡುತ್ತಾರೆ. ವರ್ಜೀನಿಯಾ ಸಂಸ್ಥಾನದಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿರುವ ಡಾ.ಕೃಷ್ಣಮೂರ್ತಿ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಯಂಸೇವಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಥೈಲ್ಯಾಂಡ್‌ನಲ್ಲಿ ಈಗಲೂ ಸನಾತನ ಧರ್ಮ ಊರ್ಜಿತದಲ್ಲಿದೆ. ಆ ದೇಶದ ಅರಸು ಮನೆತನದವರು ಸನಾತನ ಧರ್ಮೀಯರೇ ಆಗಿದ್ದಾರೆ. ಸನಾತನ ಧರ್ಮದ ಏಳಿಗೆಗೆ ದುಡಿಯುತ್ತ ಸಮಾಜಸೇವೆಗೈಯುವ ವ್ಯಕ್ತಿಗಳನ್ನು ಪ್ರೋತ್ಸಾಹಿಸಲೆಂದೇ ಈ ಪ್ರಶಸ್ತಿ ಕೊಡಮಾಡಲಾಗುತ್ತದೆ ಎಂದು ಇಂಡೋ-ಥಾಯ್ ಮೈತ್ರಿಕೂಟ ತಿಳಿಸಿದೆ.












Click it and Unblock the Notifications