ಶಾಲಾ ಕಟ್ಟಡವಾದ ಎಡ್ಮಂಡ್ ಹಿಲರಿ ಮನೆ
ಆಕ್ಲೆಂಡ್,
ಮೇ 12 : ಹಿಮಾಲಯ ಪರ್ವತದ ಉತ್ತುಂಗ ಏರಿದ ಮೊದಲ ಸಾಹಸಿ ಸರ್ ಎಡ್ಮಂಡ್ ಹಿಲರಿ ಅವರ ಆಕ್ಲೆಂಡ್ ನಿವಾಸ ಇನ್ನು ಮುಂದೆ ಒಂದು ಶಾಲಾ ಕಟ್ಟಡವಾಗಿ ಮಾರ್ಪಡಲಿದೆ. ಈ ಮೂಲಕ ನ್ಯೂಜಿಲೆಂಡಿಗೆ ಶಾಶ್ವತ ಕೀರ್ತಿ ತಂದ ಪರ್ವತಾರೋಹಿಯ ನೆನಪನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಿದ ಹೆಗ್ಗಳಿಕೆ ಇವತ್ತಿನ ಆಕ್ಲೆಂಡ್ ನಾಗರಿಕರ ಪಾಲಾಗಲಿದೆ. id="toptextpromo">ಎಡ್ಮಂಡ್
ಮತ್ತು ಅವರ ಪತ್ನಿ ಲೇಡಿ ಲೂಸಿ ಹಿಲರಿ ಅವರು ಈ ಮನೆಯನ್ನು 1959ರಲ್ಲಿ ಕಟ್ಟಿಸಿದ್ದರು. ಇದನ್ನು ಆಕ್ಲೆಂಡಿನ ಉದ್ಯಮಿ ಟೆರ್ರಿ ಜಾರ್ವಿಸ್ 2009ರಲ್ಲಿ ಒಂದೂವರೆ ದಶಲಕ್ಷ ಅಮೆರಿಕನ್ ಡಾಲರು ಕೊಟ್ಟು ಖರೀದಿಸಿದ್ದರು. ಈಗ ಮನೆಯನ್ನು ಜಾರ್ವಿಸ್ ಶಾಲೆಗೆ ಕಟ್ಟಡ ದೇಣಿಗೆಯಾಗಿ ಕೊಟ್ಟಿರುತ್ತಾರೆ. id='are-slot-1' class='oiad oi-axt oiadv'> id='top-searched-articles'>ಆಕ್ಲೆಂಡಿನಿಂದ
20 ಕಿಲೋಮೀಟರ್ ದೂರವಿರುವ ಶಾಲೆಯನ್ನು ನವೀಕರಿಸಿ ಅದಕ್ಕೆ Sir Edmund Hillary Leadership Centre ಎಂದು ಪುನರ್ ನಾಮಕರಣ ಮಾಡಲಾಗುತ್ತದೆ.











Click it and Unblock the Notifications