ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ ಸಮ್ಮೇಳನ:ನೊಂದಾಯಿಸಿಕೊಳ್ಳಿ,ಡಾಲರು ಉಳಿಸಿ

By Staff
|
Google Oneindia Kannada News

WKC -5ಬೆಂಗಳೂರು, ಮಾ. 10 : ಉತ್ತರ ಅಮೆರಿಕ ಕನ್ನಡ ಕೂಟಗಳ ಆಗರ ( ಅಕ್ಕ) ಹಾಗೂ ಶಿಕಾಗೋ ರಾಜ್ಯದ ವಿದ್ಯಾರಣ್ಯಕನ್ನಡ ಸಂಘದ ಆಶ್ರಯದಲ್ಲಿ ಜರುಗಲಿರುವ 5ನೆ ವಿಶ್ವ ಕನ್ನಡ ಸಮ್ಮೇಳನಕ್ಕೆ ಅತಿಥಿಗಳ ನೊಂದಾವಣೆ ಭರದಿಂದ ಸಾಗಿದೆ. 2008 ರ ಆಗಸ್ಟ್ 29 ರಿಂದ 31ರ ವರೆಗೆ ನಡೆಯಲಿರುವ ಸಮ್ಮೇಳನಕ್ಕೆ ಪ್ರತಿನಿಧಿಗಳಾಗಿ ನೊಂದಾವಣೆ ಮಾಡಿಕೊಳ್ಳುವವರಿಗೆ ಆಕರ್ಷಕ ರಿಯಾಯಿತಿ ದರಗಳನ್ನು ಆಯೋಜಕರು ಪ್ರಕಟಿಸಿದ್ದಾರೆ.

"ಅರ್ಲಿ ಬರ್ಡ್" ಭಾರೀ ರಿಯಾಯಿತಿ ಕೊಡುಗೆಯಲ್ಲಿ ಲಭ್ಯವಾಗುತ್ತಿರುವ ನೊಂದಾವಣೆ ದರ USD $ 175. ಈ ಕೊಡುಗೆ ಇದೇ ಮಾರ್ಚ್ 15ನೆ ತಾರೀಖಿನವರೆಗೆ ಲಭ್ಯವಿದ್ದು ಕನ್ನಡಿಗರು ಈ ಅವಕಾಶದ ಪೂರ್ಣಲಾಭ ಪಡೆದುಕೊಳ್ಳಬೇಕೆಂದು ಸಮ್ಮೇಳನದ ನೊಂದಾವಣೆ ಸಮಿತಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಅಮೆರಿಕಾದ ಕೇಂದ್ರ ಭಾಗದಲ್ಲಿ ವ್ಯವಸ್ಥೆಯಾಗಿರುವ ಪ್ರಥಮ ವಿಶ್ವ ಕನ್ನಡ ಸಮ್ಮೇಳನ ಇದಾಗಿದೆ. ಇದಕ್ಕೂ ಮುನ್ನ ಸಮ್ಮೇಳನಗಳು ಹ್ಯೂಸ್ಟನ್, ಡೆಟ್ರಾಯಿಟ್, ಫ್ಲಾರಿಡಾ ಹಾಗೂ 2006ಲ್ಲಿ ಪೂರ್ವ ಕರಾವಳಿಯ ವಾಷಿಂಗ್ಟನ್ ಡಿಸಿ ಪ್ರದೇಶದ ಬಾಲ್ಟಿಮೋರ್ ನಗರದಲ್ಲಿ ಏರ್ಪಾಟಾಗಿದ್ದವು. ಈಗಾಗಲೇ 1000 ಕ್ಕೂ ಹೆಚ್ಚು ಮಂದಿ ಕನ್ನಡ ಕುಟುಂಬಗಳು ಶಿಕಾಗೋ ಸಮ್ಮೇಳನಕ್ಕೆ ನೊಂದಾಯಿಸಿಕೊಂಡಿದ್ದು ಒಟ್ಟಾರೆ, ಸುಮಾರು 5000 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯನ್ನು ವಿದ್ಯಾರಣ್ಯ ಕನ್ನಡ ಸಂಘ ಹೊಂದಿದೆ.

ನೊಂದಾವಣೆಗೆ ಇಲ್ಲಿ ಕ್ಲಿಕ್ಕಿಸಿ :

( ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X