ಮನಿಲಾದಲ್ಲಿ ಶ್ರೀ ಸುಗಣೇಂದ್ರ ತೀರ್ಥ ಸ್ವಾಮೀಜಿ


ವಿಶ್ವಸಂಸ್ಥೆಯ ಐತಿಹಾಸಿಕ ನಿರ್ಣಯಕ್ಕೆ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಶ್ಲಾಘನೆ..

Udupi Puthige mutt Swamijis visits Manilaಐವತ್ತು ದೇಶಗಳ ಪ್ರೋತ್ಸಾಹಕರ ಬೆಂಬಲದೊಂದಿಗೆ ಧಾರ್ಮಿಕ ಕ್ಷೇತ್ರಕ್ಕೆ ವಿಶೇಷ ಪ್ರಾಶಸ್ತ್ಯ ನೀಡುವ ವಿಶ್ವಸಂಸ್ಥೆಯ ಐತಿಹಾಸಿಕ ನಿರ್ಣಯ ಇತ್ತೀಚೆಗೆ ಹೊರಬಿದ್ದಿದೆ. ಈ ನಿರ್ಣಯವನ್ನು ಅಮೆರಿಕ ಮೂಲದ ವಿಶ್ವಶಾಂತಿ ಧರ್ಮಸಂಸ್ಥೆಯ ಅಂತಾರಾಷ್ಟ್ರೀಯ ಅಧ್ಯಕ್ಷರು, ಶ್ರೀಪುತ್ತಿಗೆ ಮಠದ ಅಧಿಪತಿಗಳು ಆದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸ್ವಾಗತಿಸಿದರು.

ಅವರು ಫಿಲಿಫೈನ್ಸ್‌ನ ಮನಿಲಾ ಮಹಾನಗರದಲ್ಲಿ ನಡೆಯುತ್ತಿರುವ ವಿಶ್ವಶಾಂತಿ ಧರ್ಮ ಸಂಸ್ಥೆಯ ಏಷ್ಯಾ ವಲಯದ ಪದಾಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಧಾರ್ಮಿಕ ರಂಗಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಬಯಸುವ ವಿಶ್ವಸಂಸ್ಥೆಯ

ನೂತನ ನಿರ್ಣಯದಿಂದ ಜಾಗತಿಕಶಾಂತಿ ವಿಷಯದಲ್ಲಿ ವಿಶ್ವಸಂಸ್ಥೆಯು ಇನ್ನು ಮುಂದೆ ಪರಿಣಾಮಕಾರಿ ಪಾತ್ರವನ್ನು ನಿರ್ಣಯಿಸಲು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಈ ಮೂಲಕ ಕೊನೆಗೂ ಧಾರ್ಮಿಕತೆಯು ತನ್ನ ಪ್ರಾಮುಖ್ಯತೆಯನ್ನು ತೋರಿಸಿಕೊಟ್ಟಿದೆ. ದೀರ್ಘ ಬಾಳಿಕೆಯುಳ್ಳ ಸುಸ್ಥಿರವಾದ ಅಭಿವೃದ್ಧಿಯನ್ನು ಕಾಯ್ದುಕೊಳ್ಳುವ ಧರ್ಮದ ಆವಶ್ಯಕತೆಯ ಮನವರಿಕೆಯು ಕೊನೆಗೂ ಧರ್ಮದ ಸನಾತನತೆಯನ್ನು ದೃಢೀಕರಿಸಿದೆ ಎಂದು ಅವರು ನುಡಿದರು.

ದಕ್ಷಿಣ ಕೊರಿಯಾ ರಕ್ಷಣಾ ಸಚಿವಾಲಯದ ಪ್ರಾಯೋಜಕತ್ವದಲ್ಲಿ , ಏಷ್ಯಾ ವಲಯದ ಧಾರ್ಮಿಕ ನಾಯಕರ ಈ ಚಿಂತನಾ ಸಭೆ ನಡೆಯಿತು. ಏಷ್ಯಾ ವಲಯದ ಧಾರ್ಮಿಕ ನಾಯಕರ ನೂತನ ಮಂಡಳಿಯ ರಚನೆ ಬಗ್ಗೆ ಚರ್ಚೆ ನಡೆದವು. ಸಿಯೋಲ್‌ನಲ್ಲಿ ವಿಶ್ವಸಂಸ್ಥೆಗೆ ಪೋಷಕವಾದ ಜಾಗತಿಕ ಧಾರ್ಮಿಕ ನಾಯಕರ ಸಂಯುಕ್ತ ವಿಶ್ವಸಂಸ್ಥೆಯ ಸ್ಥಾಪನೆ ಬಗ್ಗೆ ಗಂಭೀರ ಚರ್ಚೆಗಳು ನಡೆದಿದ್ದು , ಏಷ್ಯಾವಲಯದ ಹದಿನೆಂಟು ರಾಷ್ಟ್ರಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದರು.

ದಕ್ಷಿಣ ಕೊರಿಯಾದ ರಾಷ್ಟ್ರೀಯ ರಕ್ಷಣಾಸಮಿತಿಯ ಅಧ್ಯಕ್ಷ ಡಾ. ತಂಗಮ್‌ ಕಿಮ್‌ ಸ್ವಾಗತವನ್ನು ಕೋರಿದರು. ಸಿಂಗಾಪುರದ ಕಾಯೀಸ್ಟ್‌ ಮಿಷನಿನ ಅಧ್ಯಕ್ಷ ಮಾಸ್ಟರ್‌ ಲೀಹಿವಾಂಗ್‌, ಜಪಾನಿನ ಕಬ್ಸುಜಿ ಸುಝುಕಿ, ಪಾಕಿಸ್ಥಾನದ ಮೀರ್‌ ನವಾಜ್‌ ಖಾನ್‌ ಮರಾವತ್‌, ಥೈಲ್ಯಾಂಡ್‌ ನ ಡಾ. ಪರ್ವತ್‌ ರೆಡ್‌ ಅರಾನ್‌, ಫಿಲಿಪ್ಪೈನ್ಸ್‌ ನ ಬಿಷಪ್‌ ಆಂಟೊನಿಯೋ ಟೊಬಿಯಾತ್‌ ಮೊದಲಾದ ಏಷ್ಯಾದ ಧಾರ್ಮಿಕ ನಾಯಕರು ಈ ಸಂದರ್ಭದಲ್ಲಿ ವಿಚಾರ ವಿನಿಮಯ ನಡೆಸಿದರು.

ಏಷ್ಯಾವಲಯದ ಕಾರ್ಯದರ್ಶಿ ಹನ್‌ ಮೀ ಫೂಕ್‌, ಡಾ. ಲಿಲಿಯನ್‌ ಸುಸಾನ್‌, ಪ್ರೊ.ಯೀ ಸನ್‌ ಸೂನ್‌, ಮತ್ತು ರೆವರೆಂಡ್‌ ಕಿಮ್‌ ಫೇ ಸುಂಗ್‌ ಅವರು ಸಮಾವೇಶದ ಯಶಸ್ಸಿಗಾಗಿ ಧನ್ಯವಾದವಿತ್ತರು.

ಇದೇ ಸಂದರ್ಭದಲ್ಲಿ ಅಧಿಕ ಸಂಖ್ಯೆಯಲ್ಲಿ ನೆರೆದ ಮನಿಲಾದ ಭಾರತೀಯ ಸಮುದಾಯವು ಮನಿಲಾ ಮಹಾನಗರದಲ್ಲಿರುವ ಹಿಂದೂ ಮಂದಿರದಲ್ಲಿ ವಾಸ್ತವ್ಯ ಮಾಡಿರುವ ಶ್ರೀ ಶ್ರೀ ಗಳನ್ನು ಅಭಿನಂದಿಸುತ್ತಾ ಗೌರವ ಸಭೆಯನ್ನು ಏರ್ಪಡಿಸಿತ್ತು. ಅಲ್ಲದೆ ಶ್ರೀ ಶ್ರೀ ಗಳ ಆಗಮನದ ಬಗ್ಗೆ ತುಂಬು ಹೃದಯದ ಹರ್ಷವನ್ನು ವ್ಯಕ್ತಪಡಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+