ಅಮೆರಿಕನ್ ಐಡಲ್‌ನಲ್ಲಿ ಭಾರತೀಯರಿಗೆ ಅವಮಾನ!
ಪರೋಕ್ಷವಾಗಿ ಗುಲಾಮಗಿರಿ ಕೆಲವೆಡೆ ಇದೆ! ಒಂದು ನೇರ ಪ್ರಸಾರದ ಅಮೆರಿಕದ ಧಾರಾವಾಹಿಯಲ್ಲಿ ಅದನ್ನು ನೋಡಬಹುದು ಎಂದಾಗ ನಿಮಗೆ ಸೋಜಿಗ ಎನಿಸುವುದಿಲ್ಲವೇ? ಆ ಧಾರಾವಾಹಿಯ ಹೆಸರು American idol
- ಶ್ರೀನಾಥ್ ಭಲ್ಲೆ, ರಿಚ್ಮಂಡ್
ಗುಲಾಮಗಿರಿಯ ಕಾಲವೊಂದಿತ್ತು. ಅಂದು ಗುಲಾಮರನ್ನು ಅಖಾಡದಲ್ಲಿ ಬಿಟ್ಟು ಅವರುಗಳಲ್ಲೊಬ್ಬ ಸಾಯುವವರೆಗೂ ಸೆಣಸಾಡುವುದನ್ನೋ ಅಥವಾ ಕ್ರೂರ ಮೃಗದೊಡನೆ ಸೆಣಸಾಡುವ ಆಟಗಳನ್ನು, ಮೋಜಿಗಾಗಿ ನಡೆಸುತ್ತಿದ್ದರು. ತನ್ನ ಸಮಾನನಲ್ಲದವನನ್ನು ಹೀಯಾಳಿಸಲು ಅವರಿಗೆ ಅದೊಂದು ರಂಗ ಅಥವಾ ಒಂದು ಅವಕಾಶ, ಅಥವಾ ಏನು ಬೇಕಾದರೂ ಕರೆಯಬಹುದು.
ಗಾಂಧೀಜಿ, ಮಾರ್ಟಿನ್ ಲೂಥರ್ ಕಿಂಗ್, ಲಿಂಕನ್ ಇತ್ಯಾದಿ ಹಿರಿಯರು ಗುಲಾಮಗಿರಿಯ ವಿರುದ್ದ ಹೋರಾಡಿ ನೇರವಾಗಿ ಗುಲಾಮರನ್ನು ಹೊಂದಲು ಸಾಧ್ಯವಿಲ್ಲದಂತೆ ಮಾಡಿದ್ದಾರೆ. ಆದರೆ ಪರೋಕ್ಷವಾಗಿ ಗುಲಾಮಗಿರಿ ನಡೆಸಬಹುದಲ್ಲವೆ? ಕರ್ನಾಟಕದ ಯಾವುದೋ ಮೂಲೆಯ ಒಂದು ಹಳ್ಳಿಯಲ್ಲಿ ಇದು ಇಂದಿಗೂ ನಡೆಯುತ್ತಿರುವುದನ್ನು ವಾರ್ತೆಗಳಲ್ಲಿ ಇತ್ತೀಚೆಗೆ ನೋಡಿದೆ. ಆದರೆ ಒಂದು ನೇರ ಪ್ರಸಾರದ ಅಮೆರಿಕದ ಧಾರಾವಾಹಿಯಲ್ಲಿ ನೋಡಬಹುದು ಎಂದಾಗ ನಿಮಗೆ ಸೋಜಿಗ ಎನಿಸುವುದಿಲ್ಲವೇ? ಆ ಧಾರಾವಾಹಿಯ ಹೆಸರು American idol
ದೇಶದ ಕೆಲವು ಮಹಾನಗರಗಳಲ್ಲಿ ಸಂಚರಿಸಿ, ಉತ್ತಮ ಹಾಡುಗಾರರನ್ನು ಆಯ್ಕೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶ. ಬಹಳ ಸಂತೋಷ . ಆದರೆ ಬೇಸರದ ಸಂಗತಿ ಎಂದರೆ ಕಾರ್ಯಕ್ರಮದಲ್ಲಿ ವರ್ಣಭೇದ ಎದ್ದು ಕಾಣುತ್ತದೆ.
ಒಬ್ಬ ಹದಿನಾರು ವಯಸ್ಸಿನ ಭಾರತೀಯ ಹುಡುಗನನ್ನು ಟಾಪ್-11ವರೆಗೂ ಸುಮ್ಮನೆ ವೋಟು ಹಾಕಿ ಕರೆ ತಂದು ನಿಲ್ಲಿಸಿ ಹಾಡು ಹೇಳಿಸಿ ಅವಮಾನಿಸುತ್ತಿರುವುದು ಎಷ್ಟು ಸರಿ?
ತೀರ್ಪುಗಾರಲ್ಲಿ ಒಬ್ಬರು ಹೇಳುತ್ತಾರೆ ‘ಸಂಜಯ ಅಮೆರಿಕನ್ ಐಡಲ್ ಆದರೆ, ನಾನು ಈ ಕಾರ್ಯಕ್ರಮದ ತೀರ್ಪುಗಾರ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ’ ಎಂದು. ಮತ್ತೊಬ್ಬ ತೀರ್ಪುಗಾರ್ತಿ ಹೇಳುತ್ತಾರೆ -‘ರಾಸ್’ಳಂತೆ ತಲೆಗೂದಲು ಬಿಟ್ಟ ಮಾತ್ರಕ್ಕೆ ನೀನು ದೊಡ್ಡ ಹಾಡುಗಾರನಾಗಲಾರೆ’ ಎಂದು.
ಇದು ಸಾಲದು ಎಂಬಂತೆ ಒಬ್ಬ ಹಾಡುಗಾರನ್ನು ಕುರಿತು ಹೇಳಿದ ಮಾತು ತೀರ್ಪುಗಾರನ ಸ್ಥಾನಕ್ಕೆ ಅನುಚಿತವಾದ ಮಾತು. ‘ನಿನ್ನ ಮುಖ ನೋಡಿದರೆ ನನಗೆ ಯಾವುದೋ ಕಾಡು ಪ್ರಾಣಿಯ ನೆನಪಾಗುತ್ತದೆ’ ಎಂದು. ಇದು ಹಾಡುಗಾರಿಕೆ ಸ್ಪರ್ಧೆಯೇ ಹೊರತು, ಸೌಂದರ್ಯ ಸ್ಪರ್ಧೆಯಲ್ಲ ಎಂದು ತೀರ್ಪುಗಾರರಿಗೆ ಮನವರಿಕೆ ಮಾಡಿಕೊಡಬೇಕಿದೆ.
ಸಂಜಯ ಚೆನ್ನಾಗಿ ಹಾಡುತ್ತಿಲ್ಲ ಎಂದು ಮುಂಚೆಯೇ ಅನ್ನಿಸಿದ್ದರೆ ಇಲ್ಲಿಯವರೆಗೂ ಸುಮ್ಮನಿರುವುದು ಏಕೆ? ಪ್ರಥಮ ರೌಂಡ್‌ನಲ್ಲಿಯೇ ಬೇಡ ಎನ್ನಬಹುದಿತ್ತು. ಪ್ರತಿ ಬಾರಿ ಆತನನ್ನು ಗೆಲ್ಲಿಸಿ, ನಂತರ ಹಾಡಿಸಿ ಅವಮಾನಿಸುವುದು ಸರಿಯೇ?
ಸಂಜಯನನ್ನು ಗೆಲ್ಲಿಸುತ್ತಿರುವವರು ಯಾರು ಎಂದಿರಾ? ಇಲ್ಲಿ ನೋಡಿ : http://www.votefortheworst.com/












Click it and Unblock the Notifications