ಆಜ್ ಕಹೇಂಗೆ ದಿಲ್‌ಕಾ ಫಸಾನಾ... ಜಾನ್‌ಭಿ ಲೇಲೇ...
ಹಣ ಕೂಡುತ್ತಿತ್ತು. ಖ್ಯಾತಿ ಬೆಳೆಯುತ್ತಿತ್ತು. 1949ರಲ್ಲಿ ಕಮಲ್ ಅಮ್ರೋಹಿ ನಿರ್ದೇಶಿಸಿದ ಅಶೋಕ್‌ಕುಮಾರ್ ಜೊತೆ ನಟಿಸಿದ ‘ಮಹಲ್’ ಸೂಪರ್ ಹಿಟ್ ಆಯಿತು. ಮಧುಬಾಲಾಳ ಸಿನಿಮಾ ಯಾತ್ರೆಯ ಮಹಲನ್ನು ಕಟ್ಟಿತ್ತು. ‘ಆಯೇಗಾ, ಆಯೆಗಾ ಆನೆವಾಲ ಆಯೆಗಾ’ ಹಾಡಿದ ಲತಾ ಮಂಗೇಶ್ಕರ್ ಮತ್ತು ಮಧುಬಾಲಾಳನ್ನು ರಸಿಕರ ಮನದಲ್ಲಿ ಮಹಲ್ ಕಟ್ಟಿತು.
ಹಿಟ್ ಮೇಲೆ ಹಿಟ್!
1951 ರಲ್ಲಿ ತೆರೆಕಂಡ ‘ತರಾನ’ ಮಧುಬಾಲ-ದಿಲೀಪರ ಹಿಟ್ ಜೋಡಿ. ಪ್ರೇಮಿಗಳಾದ ಈ ಜೋಡಿ ನಿಜ ಜೀವನದಲ್ಲೂ ಹಿಟ್ ಆಯಿತು. ನಂತರ ದಿಲೀಪ್ ಜೊತೆಗೆ ನಟಿಸಿದ ಸಂಗ್‌ದಿಲ್(1952) ಹಾಗೂ ಮೆಹಬೂಬ್ ಖಾನ್ ನಿರ್ದೇಶನದ ‘ಅಮರ್’(1953) ನೆಲಕಚ್ಚಿತು. ಇತ್ತ ದಿಲೀಪ್-ಮಧುಬಾಲರ ಪ್ರೇಮ ಮದುವೆಯ ತೆಕ್ಕೆಗೆ ಬೀಳಲು ಸಿದ್ಧವಾಗಿತ್ತು. ಇವರೀರ್ವರ ಈ ಇಚ್ಛೆಗೆ ತಂದೆ ಅತೌವುಲ್ಲಖಾನನ ಅಸಮ್ಮತಿಯಿತ್ತು. ದಿಲೀಪನೊಂದಿಗೆ ಮಗಳ ಸಂಬಂಧ ಕಣ್ಣು ಚುಚ್ಚಿತು. ಮದುವೆಯ ಬಂಧನದಲಿ ಒಂದಾಗ ಬಯಸಿದ ಈ ಪ್ರೇಮಿಗಳು ಕ್ಷುಲ್ಲಕ ಜಗಳದಲಿ ವಿವಾದಕ್ಕೊಳಗಾಗಿ ಕೋರ್ಟಿನ ಕಟಕಟೆ ಏರಿ ‘ಮೊಹಬ್ಬತ್ ಕೀ ಝೂಟಿ ಕಹಾನೀ ಪೆ ರೋಯೇ, ಬಡೀ ಛೋಟ್ ಕಾಯಿ ಜವಾನೀ ಪೆ ರೋಯೇ’ ಎಂದಾಗಿದ್ದು ವಿಪರ್ಯಾಸ.
ಫ್ಲಾಪ್ ಕ್ವೀನ್!
50ರ ದಶಕದ ಪ್ರಾರಂಭದಲ್ಲಿ ತೆರೆಕಂಡ ಮಧುಬಾಲಾಳ ಕೆಲವು ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಸೋಲು ಕಂಡವು. ಫ್ಲಾಪ್ ಕ್ವೀನ್ ಎಂಬ ಪಟ್ಟಿ ಅವಳ ತಲೆಗೆ ಕಟ್ಟುವಷ್ಟರಲ್ಲಿ 1955ರಲ್ಲಿ ಗುರುದತ್ ಜೊತೆ ನಟಿಸಿದ ‘ಮಿಸ್ಟರ್ǚ ಮಿಸ್ಸೆಸ್ 55’ ನ ಮಧುಬಾಲಾಳ ನಟನಾ ಸಾಮರ್ಥ್ಯ ಹಾಗೂ ತಾರಾಮೌಲ್ಯವನ್ನು ಗಗನಕ್ಕೇರಿಸಿತು.
1958ರಲ್ಲಿ ಭರತ್ಭೂಷಣ್ ಜೊತೆ ನಟಿಸಿದ ‘ಫಾಗುನ್’, ಅಶೋಕ್‌ಕುಮಾರ್ ಜೊತೆಗಿನ ‘ಹೌರಾಬ್ರಿಡ್ಜ್’, ದೇವಾನಂದ್ ಜೋಡಿಯಾಗಿ ‘ಕಾಲಾಪಾನಿ’, ಕಿಶೋರ್‌ಕುಮಾರ್ ಜೊತೆ ‘ಚಲ್ತಿ ಕಾ ನಾಮ್ ಗಾಡಿ’ ಚಿತ್ರಗಳು ಮಧುಬಾಲಾ ಸೌಂದರ್ಯ, ಮೋಡಿಯ ನಗೆಗೆ ಅಲ್ಲ, ಪಾತ್ರಗಳ ಜೀವಂತಿಕೆಗೆ, ನಟನಾ ಕೌಶಲ್ಯಕ್ಕೆ, ಮಾತಿನ ಮೋಡಿಗೆ, ಹಾಸ್ಯ ಲಹರಿಗೆ ಸಾಟಿಯಿಲ್ಲ ಎಂದು ಸಾಬೀತು ಪಡಿಸಿದವು.
ಚಿತ್ರರಂಗದಲ್ಲಿ ಸಹಸ್ರಾರು ರಸಿಕರ ರಾಣಿಯಾಗಿ ಮೆರೆಯುತ್ತಾ, ಪ್ರೇಮಿಗಳ ಕನಸಿನ ಮನ ತಣಿಸಿ ಮಧು ನೀಡುತ್ತಾ ಹೃದಯ ಛಿದ್ರಗೊಳಿಸುತ್ತಿದ್ದ ಕನಸಿನ ಬಾಲೆಯ ಜೀವನದಲ್ಲಿ ನಿಜ ಹೃದಯದಲ್ಲಿ ರಂಧ್ರವಿದೆಯೆಂದು 1950ರ ದಶಕದ ಅಂತ್ಯದಲ್ಲಿ ಒಮ್ಮೆ ಡಾಕ್ಟರ್ ತಪಾಸಣೆಯಿಂದ ತಿಳಿದುಬಂದಿತ್ತು. ಈ ವಿಷಯ ಚಿತ್ರರಂಗದಿಂದ ಮುಚ್ಚಿಡಲಾಗಿತ್ತು.
ಪ್ರೇಮದ ಜಾಲ ಮತ್ತು ಸಾವಿನ ಸೂಚನೆ
ಇದೇ ವೇಳೆಗೆ ದಿಲೀಪನ ಪ್ರೇಮದಿಂದ ವಂಚಿತಳಾಗಿ, ಆ ಗುಂಗಿನಿಂದ ಹೊರಬಂದ ಮಧುಬಾಲಾಳಿಗೆ ಭರತ್‌ಭೂಷಣ್, ಪ್ರದೀಪ್‌ಕುಮಾರ್ ಹಾಗೂ ಕಿಶೋರ್‌ಕುಮಾರ್‌ನಿಂದ ಮದುವೆಯ ಪ್ರಸ್ತಾಪ ಬಂದಿತು. ಯಾರು ಹಿತವರು ಈ ಮೂವರೊಳಗೆ ಎಂದು ಬಂದ ಮದುವೆಯ ಪ್ರಸ್ತಾಪದಲಿ, ಮಧುಬಾಲಾ ವರಿಸಿದ್ದು(1960) ಚಲ್ತೀ ಆ ನಾಮ್ ಗಾಡಿಯ ಸಾಥಿ ಕಿಶೋರ್‌ನನ್ನು.












Click it and Unblock the Notifications