ಅಡಿಲೇಡ್ ಕನ್ನಡ ಸಂಘದ ಉಮೇಶ್ ನಾಗಸಂದ್ರಗೆ ಪ್ರಶಸ್ತಿ
ಅಡಿಲೇಡ್(ಆಸ್ಟ್ರೇಲಿಯಾ) : ಅಡಿಲೇಡ್ ಕನ್ನಡ ಸಂಘದ ಅಧ್ಯಕ್ಷ ಡಾ.ಉಮೇಶ್ ನಾಗಸಂದ್ರ, ‘ಪ್ರೀಮಿಯರ್ಸ್ ಸರ್ಟಿಫಿಕೇಟ್ ಆಫ್ ಅಪ್ರೀಷಿಯೇಷನ್’ಗೌರವಕ್ಕೆ ಪಾತ್ರರಾಗಿದ್ದಾರೆ.
ದಕ್ಷಿಣ ಆಸ್ಟ್ರೇಲಿಯಾದಲ್ಲಿನ ಭಾರತೀಯ ಸಮುದಾಯಕ್ಕೆ ಗಮನಾರ್ಹ ಸ್ವಯಂ ಸೇವೆ ಸಲ್ಲಿಸಿದ ಸಲುವಾಗಿ, ಅವರಿಗೆ ಈ ಪ್ರಶಸ್ತಿ ಸಂದಿದೆ.
ದಕ್ಷಿಣ ಆಸ್ಟ್ರೇಲಿಯಾದ ಭಾರತೀಯ ಆಸ್ಟ್ರೇಲಿಯನ್ ಸಂಘ(ಇಂಡಿಯನ್ ಆಸ್ಟ್ರೇಲಿಯನ್ ಅಸೋಸಿಯೇಷನ್ ಆಫ್ ಸೌತ್ ಆಸ್ಟ್ರೇಲಿಯಾ), ವ್ಯಕ್ತಿಯ ಸೇವೆ ಪರಿಗಣಿಸಿ ಈ ಪ್ರಶಸ್ತಿಗೆ ಶಿಫಾರಸು ಮಾಡುತ್ತದೆ. ಈ ಶಿಫಾರಸು ಆಧರಿಸಿ ಪ್ರಧಾನಮಂತ್ರಿ ಹಾಗೂ ಸ್ವಯಂ ಸೇವಾ ಸಚಿವರು ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ. ಈ ಪ್ರಕ್ರಿಯೆ ಸುಮಾರು ಮೂರು ತಿಂಗಳವರೆಗೆ ನಡೆಯುತ್ತದೆ.
ದಕ್ಷಿಣ ಆಸ್ಟ್ರೇಲಿಯಾದ ಭಾರತೀಯ ಆಸ್ಟ್ರೇಲಿಯನ್ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮೇ 6ರಂದು, ಅಡಿಲೇಡ್‌ನಲ್ಲಿರುವ ಪಾರ್ಕ್ಸ್ ಸಮುದಾಯ ಕೇಂದ್ರದಲ್ಲಿ ಈ ಕುರಿತ ಕಾರ್ಯಕ್ರಮ ನಡೆಯಿತು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಂಘದ ಅಧ್ಯಕ್ಷ ವಿಠ್ಠಲ ಶೆಟ್ಟಿಗಾರ, ಉಮೇಶ್ ನಾಗಸಂದ್ರ ಅಡಿಲೇಡ್ ಕನ್ನಡ ಸಂಘದ ಸ್ಥಾಪನೆ ಹಾಗೂ ಅಭಿವೃದ್ಧಿಯಲ್ಲಿ ಗಮನಾರ್ಹ ಪಾತ್ರ ನಿರ್ವಹಿಸಿದ್ದಾರೆ ಎಂದು ಬಣ್ಣಿಸಿದರು.
ಡಾ.ಉಮೇಶ್ ನಾಗಸಂದ್ರ ಅವರನ್ನು ನೀವೂ ಅಭಿನಂದಿಸಬಹುದು. ಅವರ ದೂರವಾಣಿ ಹಾಗೂ ಇ-ಮೇಲ್ ವಿಳಾಸ ಇಂತಿವೆ.
ದೂರವಾಣಿ : +61-411 156 905
ಇ-ಮೇಲ್ ವಿಳಾಸ :[email protected]
(ದಟ್ಸ್ ಕನ್ನಡ ನ್ಯೂಸ್ ಡೆಸ್ಕ್)












Click it and Unblock the Notifications