ಚ್ಯೂಯಿಂಗ್‌ ಗಮ್‌ ರ್ಯಾಪರ್ಸ್‌ ಬೇಕಾಗಿವೆ, ಚಿಲಿ ಪ್ರಜೆಗೆ!


ಚ್ಯೂಯಿಂಗ್‌ಗಮ್‌ ರ್ಯಾಪರ್ಸ್‌ ಕಳಿಸುವ ನೆವದಲ್ಲಿ ಆತನೊಂದಿಗೆ ಪತ್ರಮೈತ್ರಿ ಬೆಳೆಸಲಿಚ್ಛಿಸುವವರು ಈಮೈಲ್‌ ವಿಳಾಸವನ್ನು ನಮ್ಮನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದು.

Chewing Gum Wrappersಅಂಚೆಚೀಟಿ, ಬೆಂಕಿಪೊಟ್ಟಣ, ಸಿಗರೇಟ್‌ಪ್ಯಾಕ್‌ ಮುಂತಾದ ಸಾಮಾನ್ಯ ‘‘ಸಂಗ್ರಹ’ವಸ್ತುಗಳಿಂದ ಹಿಡಿದು ಕೋಲ್ಡ್‌ಡ್ರಿಂಕ್‌ ಬಾಟಲ್‌ಕ್ಯಾಪ್‌, ಬಿಯರ್‌ಬಾಟಲುಗಳು ಇತ್ಯಾದಿ ವಿಶೇಷ ವಸ್ತುಗಳ ಸಂಗ್ರಹದ ಹವ್ಯಾಸ ನಿಮ್ಮಲ್ಲಿ ಅನೇಕರಿಗಿರಬಹುದು. ಯಾರಾದರೂ ಚ್ಯೂಯಿಂಗ್‌ಗಮ್‌ ರ್ಯಾಪರ್ಸ್‌ ಸಂಗ್ರಹ ಮಾಡುವವರಿದ್ದೀರಾ? ಹೊಸದಾಗಿ ಆ ಹವ್ಯಾಸವನ್ನು ಬೆಳೆಸಲಿಚ್ಛಿಸುವವರಿದ್ದೀರಾ?

ಹಾಗಿದ್ದರೆ ಮುಂದೆ ಓದಿ :

‘‘ಚ್ಯೂಯಿಂಗ್‌ಗಮ್ಮ ಗಮ್ಮಾಡಿಸ್ತಾವ ಹಲ್ಲಿಗಿ...’’ ಶೀರ್ಷಿಕೆಯಾಂದಿಗೆ ಚ್ಯೂಯಿಂಗ್‌ಗಮ್‌ ಬಗ್ಗೆ ವಿಚಿತ್ರಾನ್ನ ಅಂಕಣದಲ್ಲಿ ಲೇಖನವೊಂದನ್ನು ಬರೆದಿದ್ದೆನಷ್ಟೆ? ಅದು ಪ್ರಕಟವಾದದ್ದು ಜುಲೈ 20, 2004ರಂದು. ನಿಮ್ಮಲ್ಲಿ ಅನೇಕರು ಅದನ್ನು ಓದಿರಲೂಬಹುದು.

ಚಿಲಿ ದೇಶದ (ದಕ್ಷಿಣ ಅಮೆರಿಕ) ಪ್ರಜೆಯಾಬ್ಬ ಅಂತರ್ಜಾಲವನ್ನು ಜಾಲಾಡಿಸುತ್ತಿದ್ದಾಗ ಅವನಿಗೆ ವಿಚಿತ್ರಾನ್ನದ ಚ್ಯೂಯಿಂಗ್‌ಗಮ್‌ ಸ್ಪೆಷಲ್‌ ಸಂಚಿಕೆ ಮುಖಾಮುಖಿಯಾಗಿದೆ. ನಿನ್ನೆ (ಜನವರಿ 11, 2007) ನನಗೆ ಬಂದ ಒಂದು ಸ್ವಾರಸ್ಯಕರ ಈಮೈಲ್‌ನಲ್ಲಿ ನನಗೆ ಈ ವಿಷಯ ಗೊತ್ತಾಯಿತು. ಈಮೈಲ್‌ನ ಪೂರ್ಣಪಾಠ ಹೀಗಿದೆ.

----- Forwarded Message ----

From: Roberto Back
To: [email protected]
Sent: Thursday, January 11, 2007 9:17:13 PM
Subject: your site about chewing gum

Hello:

My name is Roberto, I am from Chile and my hobby is to collect chewing gum wrappers.

I saw your article about chewing gum. Unfortunately I dont understand the language, but I saw chewing gum images, and also gum wrappers.

I am interested in getting gum wrappers from India. Do you know how I can get gum wrappers from there, or may be you know someone who collects, so I can make exchanges?

Kindest regards,

Roberto Back
Sta Teresa Jornet 1064
Las Condes, Santiago
CHILE

-----------------------------

ನಿಮ್ಮಲ್ಲಿ (ಭಾರತದಲ್ಲಿರುವವರು) ಯಾರಾದರೂ ಚ್ಯೂಯಿಂಗ್‌ಗಮ್‌ ರ್ಯಾಪರ್ಸ್‌ ಸಂಗ್ರಹಿಸುವವರಿದ್ದರೆ ಅಥವಾ ನಿಮ್ಮ ಸ್ನೇಹಿತರು/ ನಿಮಗೆ ಗೊತ್ತಿರುವವರಾರಾದರೂ ಚ್ಯೂಯಿಂಗ್‌ಗಮ್‌ ರ್ಯಾಪರ್ಸ್‌ ಸಂಗ್ರಹಿಸುವವರಿದ್ದರೆ ಮತ್ತು ಹೆಚ್ಚುವರಿ ರ್ಯಾಪರ್‌ಗಳನ್ನು ವಿನಿಮಯಿಸಲು ಇಷ್ಟವಿದ್ದರೆ ನನ್ನ ಹೊಸ ಇ-ಸ್ನೇಹಿತ ಚಿಲಿ ದೇಶವಾಸಿ ರೊಬರ್ಟೊ ಬ್ಯಾಕ್‌ನ ವಿಳಾಸಕ್ಕೆ ಕಳುಹಿಸಬೇಕಾಗಿ ಅಪೇಕ್ಷೆ. ಈ ವಿಷಯದಲ್ಲಿ ಆತನೊಂದಿಗೆ ಪತ್ರಮೈತ್ರಿ ಬೆಳೆಸಲಿಚ್ಛಿಸುವವರಿಗೆ ಈಮೈಲ್‌ ವಿಳಾಸವನ್ನೂ ಕೊಡಬಲ್ಲೆ!


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+