ಡಾ. ಲಿಂಗಪ್ಪ ಕಲ್ಬುರ್ಗಿಗೆ ನ್ಯೂಜಿಲೆಂಡ್‌ನ ಅತ್ಯುನ್ನತ ಗೌರವ


ದಿ ರಾಯಲ್‌ ನ್ಯೂಜಿಲೆಂಡ್‌ ಪ್ರಶಸ್ತಿಗಳಿಸಿದ ಪ್ರಥಮ ಭಾರತೀಯ ಡಾ.ಲಿಂಗಪ್ಪ ಭೋಜಪ್ಪ ಕಲ್ಬುರ್ಗಿ. ಅವರ ಬಗ್ಗೆ ಎರಡು ಮಾತು.

Dr L B Kalburgi, Indian who made a difference in NZಭಾರತದಲ್ಲಿ ರಾಷ್ಟ್ರ ಪ್ರಶಸ್ತಿಗಳಿರುವಂತೆ ನ್ಯೂಜಿಲೆಂಡ್‌ ಸರ್ಕಾರ ಸಹ, ತನ್ನ ನಾಡಿಗೆ ಮಹತ್ತರ ಸೇವೆ ಸಲ್ಲಿಸಿದ ಪ್ರಜೆಗೆ ಪ್ರತೀ ವರ್ಷ ಜೂನ್‌ ತಿಂಗಳಿನಲ್ಲಿ ರಾಣಿ ಎಲಿಜಬೆತ್‌ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಗೌರವ ಪ್ರಶಸ್ತಿ ನೀಡುತ್ತದೆ.

ಈ ವರ್ಷ ಮೆಂಬರ್‌ ಅಫ್‌ ನ್ಯೂಜಿಲೆಂಡ್‌ ಅರ್ಡರ್‌ ಅಫ್‌ ಮೆರಿಟ್‌ ಪ್ರಶಸ್ತಿಗಳಿಸಿದ ಕನ್ನಡಿಗ ಡಾ.ಲಿಂಗಪ್ಪ ಭೋಜಪ್ಪ ಕಲ್ಬುರ್ಗಿ. ಈ ಗೌರವಕ್ಕೆ ಭಾಜನರಾದ ಪ್ರಥಮ ಭಾರತೀಯ ಕಲ್ಬುರ್ಗಿಯವರು ಎನ್ನುವುದು ಹೆಗ್ಗಳಿಕೆಯ ವಿಷಯ. ನ್ಯೂಜಿಲೆಂಡ್‌ ಕನ್ನಡ ಕೂಟದ ಸ್ಥಾಪನೆಯಲ್ಲಿ ಮಹತ್ವದ ಪಾತ್ರವಹಿಸಿದ ಅವರು, ಹತ್ತು ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಹಾಗೂ ಈಗ ಎರಡು ವರ್ಷಗಳಿಂದ ಅಧ್ಯಕ್ಷರಾಗಿ ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಅಪಾರ-ಅವಿರತ ಕೊಡುಗೆ ನೀಡಿದ್ದಾರೆ.

ಗಣಿತ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಡಾಕ್ಟರೇಟ್‌ ಪದವೀಧರರಾದ ಡಾ.ಕಲ್ಬುರ್ಗಿಯವರು ಅನೇಕ ಭಾಷೆಗಳನ್ನು ಬಲ್ಲವರಾಗಿದ್ದು, ಈಗ ಸ್ಥಳೀಯರ ಮಾವೊರೀ ಮತ್ತು ಸಾಮೊವನ್‌ ಭಾಷೆಗಳನ್ನು ಸಹ ಕಲಿತಿರುತ್ತಾರೆ.

ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೀವ್ರ ಆಸಕ್ತಿ ಹೊಂದಿರುವ ಅವರು ಬಸವ ಸಮಿತಿ, ವೇದಾಂತ ವಿದ್ಯಾ ಸಂಸ್ಥೆ, ನ್ಯೂಜಿಲೆಂಡ್‌ ಭಾರತೀಯ ಕೇಂದ್ರ ಸಂಸ್ಥೆ, ಆಕ್ಲೆಂಡ್‌ ಇಂಡಿಯನ್‌ ಅಸೋಸಿಯೇಷನ್‌, ಆಕ್ಲೆಂಡ್‌ ಸ್ಥಾನೀಯ ಜನಾಂಗಿಯ ಮಂಡಳಿ, ದಿ ಏಷ್ಯನ್‌ ನೆಟ್‌ ವರ್ಕ್‌ ಇಂಕ್‌, ಪ್ಲಾನೆಟ್‌ ಎಫ್‌ ಎಮ್‌ ರೇಡಿಯೊ ಮುಂತಾದ ಹಲವಾರು ಸ್ವಯಂ ಸೇವಾ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನ್ಯೂಜಿಲೆಂಡ್‌ ಕನ್ನಡ ಕೂಟ ಒಂದು ಸುಸಜ್ಜಿತ ಗ್ರಂಥಾಲಯ ಸ್ಥಾಪಿಸಲು ನೆರವಾಗಿ ನೂರಾರು ಉತ್ತಮ ಪುಸ್ತಕಗಳನ್ನು ಮತ್ತು ನಿಯತಕಾಲಿಕಗಳನ್ನು ವೈಯುಕ್ತಿಕ ಕೊಡುಗೆಯಾಗಿ ನೀಡಿದ್ದಾರೆ ಕಲ್ಬುರ್ಗಿ. ಅವರ ಸೇವಾ ಮನೋಭಾವನೆಯನ್ನು ಗುರುತಿಸಿದ ನ್ಯೂಜಿಲೆಂಡ್‌ ಸರ್ಕಾರ ಇವರನ್ನು 2004ನೇ ಇಸವಿಯಲ್ಲಿ, ಜಸ್ಟೀಸ್‌ ಆಫ್‌ ಪೀಸ್‌ ಹುದ್ದೆಗೆ ಆಯ್ಕೆ ಮಾಡಿ ಹೆಚ್ಚಿನ ಸಮುದಾಯ ಸೇವೆಗೆ ನೆರವಾಯಿತು.

ಪ್ರಧಾನ ಮಂತ್ರಿ ಹೆಲೆನ್‌ ಕ್ಲಾರ್ಕ್‌, ಗವರ್ನರ್‌ ಜನರಲ್‌ ಆನಂದ್‌ ಸತ್ಯಾನಂದ್‌ ಮುಂತಾದ ಹಲವಾರು ಗಣ್ಯರು ಡಾ.ಕಲ್ಬುರ್ಗಿಯವರು ಕನ್ನಡ ಕೂಟ ಹಾಗೂ ಇನ್ನಿತರ ಸಮುದಾಯ ಸಂಸ್ಥೆಗಳ ಯಶಸ್ಸಿಗೆ ಸಲ್ಲಿಸಿರುವ ಕೊಡುಗೆಯನ್ನ್ನು ಮುಕ್ತ ಕಂಠದಿಂದ ಶ್ಲಾಘಿಸಿರುತ್ತಾರೆ.

ಇದೀಗ ಕನ್ನಡಿಗರೆಲ್ಲರು ಹೆಮ್ಮೆ ಪಡುವಂತೆ ಈ ನಾಡಿನ ಉನ್ನತ ನಾಗರೀಕ ಗೌರವ ಮೆಂಬರ್‌ ಆಫ್‌ ನ್ಯೂಜಿಲೆಂಡ್‌ ಆರ್ಡರ್‌ ಆಫ್‌ ಮೆರಿಟ್‌ ಪ್ರಶಸ್ತಿಗೆ ಭಾಜನರಾಗಿರುವ ಡಾ.ಕಲ್ಬುರ್ಗಿಯವರು ಇನ್ನೂ ಹೆಚ್ಚಿನ ಯಶಸ್ಸು ಗಳಿಸಲಿ ಮತ್ತು ಅವರ ಅನುಭವ ದ್ರವ್ಯ ಕನ್ನಡ ಸಮುದಾಯದ ಏಳಿಗೆಗೆ ದಾರಿದೀಪವಾಗಲಿ ಎಂದು ನಾವು ,ನ್ಯೂಜಿಲೆಂಡ್‌ ಕನ್ನಡಿಗರು ಆಸೆಪಡುತ್ತೇವೆ.

ಕನ್ನಡಿಗರ ಹೆಮ್ಮೆಗೆ ಕಾರಣರಾದ ಕಲ್ಬುರ್ಗಿ ಅವರನ್ನು ಅಭಿನಂದಿಸಲು ಇಲ್ಲಿ ಕ್ಲಿಕ್ಕಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+