ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕನ್ನಡತಿ ಕರಿಷ್ಮಾ ದೇಸಾಯಿ ಭರತನಾಟ್ಯದ ಬೆರಗು

By Staff
|
Google Oneindia Kannada News


Well done Karishma Desai... ಬೆಂಗಳೂರು : ಅಮೆರಿಕದಲ್ಲಿ ನೆಲೆಸಿರುವ ಕಲಾಶ್ರೀ ಸುಪ್ರಿಯಾ ದೇಸಾಯಿ ಅವರ ಪುತ್ರಿ ಕರಿಷ್ಮಾ ದೇಸಾಯಿ, ಅಮ್ಮನಂತೆಯೇ ನಾಟ್ಯಪ್ರವೀಣೆ. ಅವರ ನಾಟ್ಯರಂಗ ಪ್ರವೇಶಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಇತ್ತೀಚೆಗೆ ಸಾಕ್ಷಿಯಾಯಿತು.

ಕರ್ನಾಟಕ ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕರಿಷ್ಮಾ ರವರ ನಾಟ್ಯರಂಗ ಪ್ರವೇಶ ಅರ್ಥಪೂರ್ಣವಾಗಿ ಜರುಗಿತು.

ಚಿಕ್ಕಂದಿನಿಂದ ಸ್ವತಃ ಕಲಾವಿದೆಯಾದ ತಾಯಿ ಸುಪ್ರಿಯಾರವರಿಂದ ಭರತನಾಟ್ಯ ಕಲಿತು, ವಿವಿಧೆಡೆ ಪ್ರದರ್ಶನ ನೀಡಿದ್ದರಿಂದ ರಂಗಪ್ರವೇಶದ ದಿನ ಅಂಜಿಕೆಯಾಗಲಿ, ನೃತ್ಯದಲ್ಲಿ ಏರು- ಪೇರಾಗಲಿ ಇರಲಿಲ್ಲ.

ಮೊದಲಿಗೆ ರಾಮನ ಕುರಿತಾದ ನೃತ್ಯದಲ್ಲಿ ನೀಡಿದ ಭಾವಾಭಿನಯ ಎಲ್ಲರ ಮೋಡಿ ಮಾಡಿತು. ಶಿವನ ಕುರಿತಾದ ಪುರಂದರದಾಸರ ಕೀರ್ತನೆಗೆ ನರ್ತಿಸಿ, ಕೊನೆಗೆ ಶ್ಯಾಮಲಾ ದಂಡಕದ ಮಾಣಿಕ್ಯ ವೀಣಾಮುಪಳಾಲಯಂತಿ .. ಶ್ಲೋಕಕ್ಕೆ ನರ್ತನ ನೀಡಿ ಎಲ್ಲರನ್ನು ಆಧ್ಯಾತ್ಮ ಲೋಕಕ್ಕೆ ಕರೆದೊಯ್ದರು.

ನೀಲಾ ರಾಮಾನುಜ, ಶ್ರೀನಿವಾಸ ಶ್ರೀವತ್ಸ, ಅರುಣ್ ಕುಮಾರ್, ಎನ್.ಜಿ.ರವಿ(ಮೃದಂಗ), ರಾಜಕುಮಾರಿ(ಕೊಳಲು),ಸುಪ್ರಿಯಾ ದೇಸಾಯಿಯವರ ನಟುವಂಗ ಕರಿಷ್ಮಾರವರ ನೃತ್ಯಕ್ಕೆ ಮೆರಗು ನೀಡಿತು.

ಅಮೆರಿಕದ ನಿವಾಸಿಯಾದ ಸುಪ್ರಿಯಾ, ಕಲಾಸಕ್ತರಿಗೆ ತರಬೇತಿ ನೀಡುವ ಸಲುವಾಗಿ ಪಾಯಲ್ ಎಂಬ ನೃತ್ಯ ಶಾಲೆಯನ್ನು ಆರಂಭಿಸದ್ದಾರೆ. ಆ ಶಾಲೆಗೀಗ 12ರ ಪ್ರಾಯ. ಈ ನೃತ್ಯ ಶಾಲೆಯ ಇತ್ತೀಚಿನ ಭರವಸೆಯ ಪ್ರತಿಭೆಯಾಗಿ ಕರಿಷ್ಮಾ ದೇಸಾಯಿ ಹೊರ ಹೊಮ್ಮಿದ್ದಾರೆ.

ಭಾರತದಾದ್ಯಂತ ತಮ್ಮಕಲೆಯನ್ನು ಪ್ರಚುರಪಡಿಸುವ ತವಕದಲ್ಲಿ ಕರಿಷ್ಮಾ ಇದ್ದಾರೆ. ಕಲಾಸಕ್ತರು ಗಮನ ಹರಿಸಬೇಕಷ್ಟೇ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X