ಮುಂಗಾರಿನ ಆರ್ಭಟಕ್ಕೆ ಅಮೆರಿಕನ್ನಡಿಗರ ನೂಕುನುಗ್ಗಲು!


ಕರ್ನಾಟಕದ ಮೂಲೆ ಮೂಲೆಯಲ್ಲೂ ಜಯಭೇರಿಹೊಡೆದ ‘ಮುಂಗಾರು ಮಳೆ’ ಅಮೆರಿಕೆಯಲ್ಲೂ ತನ್ನ ಆರ್ಭಟವನ್ನು ತೋರಿಸುತ್ತಿದೆ.

Ganesh and Sanjana Gandhi in Mungaru Maleಅಮೆರಿಕೆಯ ಪೂರ್ವ ಕರಾವಳಿಯ ಆಟ್ಲಾಂಟದಲ್ಲಿ ಏಪ್ರಿಲ್‌ 21ರಂದು ಪ್ರಥಮ ಪ್ರದರ್ಶನಗೊಂಡ ಈ ಚಿತ್ರವನ್ನು ನೋಡಲು, ಚಿತ್ರಪ್ರೇಮಿಗಳ ನೂಕು ನುಗ್ಗಲು. ಎಂದೂ ಕಂಡಿರಿಯದಷ್ಟು ಜನ ತಮ್ಮ ತಮ್ಮ ಸೀಟುಗಳನ್ನು ಕಾದಿರಿಸಲು ಫೋನ್‌ ಮೇಲೆ ಫೋನು ಕಾಲ್‌ ಮೇಲೆ ಕಾಲು!

‘ಜೋಕ್‌ ಫಾಲ್ಸ್‌’ ಚಿತ್ರದ ನಿರ್ಮಾಪಕರೂ ಕನ್ನಡ ಚಿತ್ರಗಳ ಪ್ರೋತ್ಸಾಹಕರೂ ಆದ ನಾಗೇಂದ್ರ ಅವರ ಉಸ್ತುವಾರಿಯಲ್ಲಿ ಕನ್ನಡ ಪಿಕ್ಚರ್‌ ಕ್ಲಬ್‌ ವತಿಯಿಂದ ನಡೆದ ಈ ಚಿತ್ರ ಪ್ರದರ್ಶನ ಎಲ್ಲ ಚಿತ್ರಪ್ರೇಮಿಗಳಿಗೆ ಖುಷಿಯನ್ನು ತಂದಿತ್ತು. ಅದರಲ್ಲೂ ಮೆಗಾ ಹಿಟ್‌ ಸಿನೆಮಾ ಅಮೆರಿಕೆಯಲ್ಲಿ ಮೊದಲ ಪ್ರದರ್ಶನಗೊಂಡಿದ್ದು ; ಆಟ್ಲಾಂಟಾದಲ್ಲಿ ಎಂದು ತಿಳಿದಾಗಲಂತೂ ಅಲ್ಲಿನ ಕನ್ನಡಿಗರು ಉಬ್ಬಿಹೋದರು.

ಎಲ್ಲರ ಬಾಯಲ್ಲೂ ಅನಿಸುತಿದೆ ಏಕೊ ಇಂದು, ನೀನೇನೆ ನನ್ನವಳೆಂದು.. ಹಾಗೆ ಸುಮ್ಮನೆ..

ಅಮೆರಿಕೆಯಲ್ಲಿ ಮಳೆ ಪಶ್ಚಿಮದಿಂದ ಪೂರ್ವದ ಕಡೆ ಹೊರಡುತ್ತದೆ. ಆದರೆ ಕನ್ನಡದ ‘ಮುಂಗಾರು ಮಳೆ’ ತನ್ನ ದಿಕ್ಕನ್ನು ಪೂರ್ವದಿಂದ ಪಶ್ಚಿಮದ ಕಡೆಗೆ ಬೆಳೆಸಿತ್ತು. ಕನ್ನಡ ಪಿಕ್ಚರ್‌ ಕ್ಲಬ್‌ ಹುಟ್ಟೂರಾದ ದಕ್ಷಿಣ ಕ್ಯಾಲಿಫೋರ್ನಿಯಾ ಕನ್ನಡ ಪಿಕ್ಚರ್‌ ಕ್ಲಬ್‌ನ ವತಿಯಿಂದ ದಕ್ಷಿಣ ಕ್ಯಾಲಿಫೋರ್ನಿಯಾದ ಕನ್ನಡಿಗರಿಗೆ ಏಪ್ರಿಲ್‌ 29ರಂದು ಪ್ರದರ್ಶನವನ್ನು ಇಡಲಾಗಿತ್ತು.

ಚಿತ್ರಮಂದಿರದ ಬಹುತೇಕ ಎಲ್ಲಾ ಸೀಟುಗಳು ಮುಂಗಡವಾಗಿ ಕಾದಿರಿಸಲಾಗಿತ್ತು. ಕನ್ನಡ ಪಿಕ್ಚರ್‌ ಕ್ಲಬ್‌ನ ಸ್ಥಾಪಕ ಹಾಗೂ ಸಂಚಾಲಕರಾದ ವಲ್ಲೀಶ ಶಾಸ್ತ್ರಿಯವರ ನೇತ್ರತ್ವದಲ್ಲಿ ಲೇಕ್‌ವುಡ್‌ನ ನಾಜ್‌ 8 ಚಿತ್ರಮಂದಿರದಲ್ಲಿ ಭಾರಿ ವ್ಯವಸ್ಥೆ ಮಾಡಲಾಗಿತ್ತು.

ತುಂಬಿದ ಗೃಹಗಳಿಂದ ಪ್ರದರ್ಶನವಾದ ಈ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಉದಯ ಟಿವಿಯಿಂದ ಇಲ್ಲಿನ ಕನ್ನಡಿಗರಲ್ಲೂ ಜನಪ್ರಿಯರಾಗಿರುವ ಕಾಮಿಡಿ ಗಣೇಶ್‌ರವರು ತೆರೆಯ ಮೇಲೆ ಕಂಡಾಗಲಂತೂ ಶಿಳ್ಳೆ ಹೊಡೆಯುವ ಮೂಲಕ ಸ್ವಾಗತಿಸಿದರು. ಎಲ್ಲಾ ಹಾಡುಗಳನ್ನು ಬಹಳಷ್ಟು ಪ್ರೇಕ್ಷಕರು ಜೊತೆಗೆ ಹಾಡುತ್ತಿದ್ದದ್ದು ಕಂಡು ಬಂತು.

ಕ್ಲಬ್‌ನ ಟಿಕೆಟ್‌ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕ್ಲಬ್ಬಿನ ಸದಸ್ಯರು, ಪ್ರೇಕ್ಷಕರು ಇನ್ನೂ ಹೆಚ್ಚು ಕನ್ನಡ ಚಿತ್ರಗಳನ್ನು ತಂದು ತೋರಿಸಲು ಉತ್ತೇಜನ ಕೊಟ್ಟರು. ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಇಂತಹ ದೊಡ್ಡ ಚಿತ್ರಮಂದಿರದಲ್ಲಿ ಕನ್ನಡ ಚಿತ್ರವೊಂದು ಚಿತ್ರಮಂದಿರ ತುಂಬಿ ಪ್ರದರ್ಶನಗೊಂಡಿದ್ದು ಇದೇ ಪ್ರಥಮ.

ಮಿಲ್ವಾಕಿ, ನ್ಯೂಜೆರ್ಸಿ, ಸ್ಯಾನ್‌ ಹೊಸೆ, .. ಹೀಗೆ ಇನ್ನೂ ಅನೇಕ ಸ್ಥಳಗಳಲ್ಲಿ ಪ್ರದರ್ಶನಗೊಳ್ಳಲಿರುವ ಈ ಚಿತ್ರವನ್ನು ನೋಡಲು ಮರೆಯದಿರಿ. ಬಹಳ ದಿವಸಗಳ ಮೇಲೆ ಒಂದು ಒಳ್ಳೆಯ ಚಿತ್ರ ತೆರೆ ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+