• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒರ್ಲಾಂಡೊದಲ್ಲಿ ಕನ್ನಡದ ಕಲರವ ; ‘ಅಕ್ಕ’ ಸಮ್ಮೇಳನದ ಜ್ವರ

By Super
|

Kannada calling from Floridaಪ್ರಿಯ ಕನ್ನಡಿಗರೇ,

ಕುಶಲವೇ.........

ಇದು ಸಮ್ಮೇಳನಗಳ ಕಾಲ. ಕರ್ನಾಟಕದ ಶಿವಮೊಗ್ಗದಲ್ಲಿ ಸುಗಮ ಸಂಗೀತ ಸಮ್ಮೇಳನ, ಅಮೆರಿಕದ ಫಿಲಿಡೆಲ್ಫಿಯಾದಲ್ಲಿ ವಸಂತ ಸಾಹಿತ್ಯೋತ್ಸವ! ಹೀಗೆ ಸಾಲುಸಾಲು ಹಬ್ಬ ಉತ್ಸವಗಳು ಕನ್ನಡದ ಹೆಸರಿನಲ್ಲಿ , ಕನ್ನಡ ಧ್ವಜದಡಿಯಲ್ಲಿ ಗರಿಗೆದರಿವೆ. ಕನ್ನಡ ಮನಸ್ಸುಗಳು ಒಂದೆಡೆ ಸೇರಲಿಕ್ಕೆ ಇದಕ್ಕಿಂಥ ಬೇರೆ ನೆಪ ಬೇಕೆ. ಅಂದಹಾಗೆ, ಪ್ರಸ್ತುತ ನಮ್ಮ ಮುಂದಿರುವ ಮತ್ತೊಂದು ಬೃಹತ್‌ ಸಮ್ಮೇಳನ - ಅಕ್ಕ ವಿಶ್ವ ಕನ್ನಡ ಸಮ್ಮೇಳನ-2004.

‘ವಿಶ್ವ ಕನ್ನಡ ಸಮ್ಮೇಳನ-2004’ರ ಸಿದ್ಧತೆಗಳನ್ನು ‘ಅಕ್ಕ’ ಭರದಿಂದ ನಡೆಸಿದೆ. ಒರ್ಲಾಂಡೊದ ಗೆಲಾರ್ಡ್‌ ಪಾಮ್ಸ್‌ ರೆಸಾರ್ಟ್‌ ಸೆಂಟರ್‌ನಲ್ಲಿ , ಸೆಪ್ಟಂಬರ್‌ 3ರಿಂದ 5ರವರೆಗೆ ನಡೆಯುವ ಈ ಜಾಗತಿಕ ಸಮ್ಮೇಳನದ್ದೇ ಈಗ ಎಲ್ಲೆಡೆ ಸುದ್ದಿ. ಒರ್ಲಾಂಡೊ ವಿಮಾನ ನಿಲ್ದಾಣದಿಂದ ಸಮ್ಮೇಳನದ ಕೇಂದ್ರಕ್ಕೆ 12ರಿಂದ 15 ಮೈಲು ದೂರ. ಡಿಸ್ನಿಗೆ ತೀರಾ ಸನಿಹ. ಲೇಬರ್‌ ಡೇ ವೀಕೆಂಡ್‌ ಸಮಯವಾದುದರಿಂದ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯ ಕನ್ನಡಿಗರು ಭಾಗವಹಿಸುವ ನಿರೀಕ್ಷೆಯಿದೆ. ಅಂದಹಾಗೆ, ಸಮ್ಮೇಳನದ ಸಿದ್ಧತೆ-ನಿರ್ವಹಣೆಗಾಗಿ 5422 Lynn Road, Tampa, Florida 33624, (813) 960 5057 ವಿಳಾಸದಲ್ಲಿ ಸಮ್ಮೇಳನದ ಕಚೇರಿಯನ್ನು ಪ್ರಾರಂಭಿಸಲಾಗಿದೆ.

ಸಮ್ಮೇಳನ ಸಮಿತಿ ಅತಿಥಿಗಳು ಪ್ರತಿನಿಧಿಗಳಿಗಾಗಿ ಈಗಾಗಲೇ 600 ಕೋಣೆಗಳನ್ನು ಗೆಲಾರ್ಡ್‌ ಪಾಮ್ಸ್‌ ರೆಸಾರ್ಟ್‌ ನಲ್ಲಿ ಕಾದಿರಿಸಿದೆ. ಇವುಗಳಲ್ಲಿ 100 ಕೋಣೆ ತವರು ಕರ್ನಾಟಕದಿಂದ ಆಗಮಿಸುವ ಗಣ್ಯರು-ಕಲಾವಿದರಿಗೆ ಮೀಸಲು. ಅಮೆರಿಕಾದ ವಿವಿಧ ಭಾಗಗಳಲ್ಲಿನ ಕನ್ನಡಿಗರು ಈಗಾಗಲೇ 550ಕ್ಕೂ ಹೆಚ್ಚು ಕೋಣೆ ಕಾದಿರಿಸಿದ್ದಾರೆ. ಕೋಣೆಗಳು ಭರ್ತಿಯಾಗುತ್ತಿರುವ ಸಂದರ್ಭದಲ್ಲಿ , ಹೆಚ್ಚುವರಿ ಕೋಣೆಗಳಿಗಾಗಿ ರೆಸಾರ್ಟ್‌ ಆಡಳಿತ ಮಂಡಳಿಯನ್ನು ಎಡತಾಕಲು ಸಮ್ಮೇಳನ ಸಮಿತಿ ಉದ್ದೇಶಿಸಿದೆ. ನಿಮ್ಮ ನೆನಪಿನಲ್ಲಿರಲಿ- ಪ್ರತಿ ಕೋಣೆಯ ಶುಲ್ಕ, ಒಂದು ರಾತ್ರಿಗೆ 85 ಡಾಲರ್‌ಗಳು. ಸಾಮಾನ್ಯವಾಗಿ ಈ ಕೋಣೆಗಳಿಗೆ 200 ಡಾಲರ್‌ ಶುಲ್ಕ ವಿಧಿಸಲಾಗುತ್ತದೆ.

ಸಮ್ಮೇಳನ ಕೇಂದ್ರದ ವೈಭವ ಯಾವ ಅರಮನೆಗೂ ಕಡಿಮೆಯಿಲ್ಲ . ಬ್ಯಾಂಕ್ವೆಟ್‌ ಹಾಲ್‌, ರಂಗವೇದಿಕೆ, ಉತ್ತಮ ಗುಣಮಟ್ಟದ ಧ್ವನಿ ವ್ಯವಸ್ಥೆ , ಕಾರ್ಯಾಗಾರ ಕೊಠಡಿಗಳು, ಪ್ರದರ್ಶನಗಳಿಗಾಗಿ ವಿಶಾಲ ಸ್ಥಳ, ಗಾಲ್ಫ್‌ ಕೋರ್ಟ್‌, ರೆಸ್ಟುರಾಂಟ್‌ಗಳು, ಉತ್ತಮ ಪಾರ್ಕಿಂಗ್‌ ವ್ಯವಸ್ಥೆ - ಒಟ್ಟಿನಲ್ಲಿ ಸಕಲ ಸೌಕರ್ಯಗಳೂ ಈ ಕೇಂದ್ರದಲ್ಲಿ ಲಭ್ಯ. ಇನ್ನು ಸಮ್ಮೇಳನಕ್ಕೆ ಬರುವ ಅತಿಥಿಗಳಿಗಾಗಿ ಸಾರಿಗೆ ಶುಲ್ಕದಲ್ಲಿಯೂ ರಿಯಾಯಿತಿ ದೊರಕಿಸುವ ಪ್ರಯತ್ನಗಳು ನಡೆದಿವೆ. ಈ ಬಗ್ಗೆ ಡೆಲ್ಟಾ ಹಾಗೂ ನಾರ್ತ್‌ವೆಸ್ಟ್‌ ಏರ್‌ಲೈನ್ಸ್‌ಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ವಿಮಾನ ನಿಲ್ದಾಣದಿಂದ ಸಮ್ಮೇಳನ ಕೇಂದ್ರಕ್ಕೆ ಸಮ್ಮೇಳನ ಸಮಿತಿ ವಾಹನ ವ್ಯವಸ್ಥೆ ಕಲ್ಪಿಸಿದೆ.

ಗೆಲಾರ್ಡ್‌ ಪಾಮ್ಸ್‌ ರೆಸಾರ್ಟ್‌ ಸುತ್ತಮುತ್ತ ಅನೇಕ ಆಕರ್ಷಕ ಪ್ರವಾಸಿ ಸ್ಥಳಗಳೂ ಇವೆ. ಮ್ಯಾಜಿಕ್‌ ಕಿಂಗ್‌ಡಂ, ಅನಿಮಲ್‌ ಕಿಂಗ್‌ಡಂ, ಎಂಜಿಎಂ ಮತ್ತು ಡಿಸ್ನಿ ಡೌನ್‌ಟೌನ್‌ಗೆ ವಾಹನ ವ್ಯವಸ್ಥೆ ಲಭ್ಯವಿದೆ. ಹೊಟೇಲ್‌ ಹಾಗೂ ಸಮ್ಮೇಳನ ಸ್ಥಳದಲ್ಲಿ ರಿಯಾಯಿತಿ ದರದ ಟಿಕೆಟ್‌ಗಳೂ ಲಭ್ಯ.

ಸೊಗಸಾದ ಊಟ ಇಲ್ಲದ ಮೇಲೆ ಸಮ್ಮೇಳನ ಹೇಗೆ ರುಚಿಗಟ್ಟೀತು ? ಯೋಚನೆ ಬೇಡ, ಕರ್ನಾಟಕದ ಪಾಕ ಸಂಸ್ಕೃತಿ ಒರ್ಲಾಂಡೊ ಸಮ್ಮೇಳನದಲ್ಲಿ ಅನಾವರಣಗೊಳ್ಳಲಿದೆ. ಉಡುಪಿ ರೆಸ್ಟೊರೆಂಟ್‌ (ಹ್ಯೂಸ್ಟನ್‌)ನ ಅನುಭವಿ ಅಡುಗೆಭಟ್ಟರು ಊಟೋಪಚಾರದ ಉಸ್ತುವಾರಿ ಹೊತ್ತಿದ್ದಾರೆ. ಹಾಗಾಗಿ ಊಟದ ಬಗೆಗೆ ಸವಿಗನಸುಗಳ ಕಾಣಲಿಕ್ಕಡ್ಡಿಯಿಲ್ಲ !

ಮಕ್ಕಳು ಹಾಗೂ ಯುವಕರ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲು ಒರ್ಲಾಂಡೊ ಸಮ್ಮೇಳನ ಸಮಿತಿ ನಿರ್ಧರಿಸಿದೆ. ಈ ಕುರಿತು ಸಲಹೆ ಸೂಚನೆಗಳಿಗೆ ಸ್ವಾಗತವಿದೆ. ಅಮೆರಿಕದ ವಿವಿಧ ಭಾಗದ ಕನ್ನಡಿಗರು ನೃತ್ಯ, ಸಂಗೀತ, ನಾಟಕ ಕಾರ್ಯಕ್ರಮಗಳನ್ನು ಸಮ್ಮೇಳನದಲ್ಲಿ ಪ್ರದರ್ಶಿಸಲು ಮುಂದೆ ಬಂದಿದ್ದಾರೆ. ತವರು ಕರ್ನಾಟಕದಿಂದಲೂ ಸಾಂಸ್ಕೃತಿಕ ರಾಯಭಾರಿಗಳು ಆಗಮಿಸಿ ಸಮ್ಮೇಳನದ ಸೊಬಗು ಸಂಭ್ರಮ ಹೆಚ್ಚಿಸುವರು. ಅತಿಥಿ ಕಲಾವಿದ-ಗಣ್ಯರ ಪಟ್ಟಿ ಅಂತಿಮಗೊಳ್ಳುತ್ತಿದೆ. ಈ ಪಟ್ಟಿ ಸದ್ಯದಲ್ಲಿಯೇ ಹೊರಬೀಳುವುದು- ನಿರೀಕ್ಷಿಸಿ.

ಸೆಪ್ಟಂಬರ್‌ 4ರ ಶನಿವಾರ, ‘ಕರ್ನಾಟಕ ವೈಭವ’ ಎನ್ನುವ ವೈಭವೋಪೇತ ಮೆರವಣಿಗೆ ನಡೆಸಲಾಗುವುದು. ಈ ಮೆರವಣಿಗೆ ಸಮ್ಮೇಳನದ ಆಕರ್ಷಣೆಗಳಲ್ಲೊಂದು.

ಮೇ 8ರಂದು Tampa, Florida ದಲ್ಲಿ ಸಮ್ಮೇಳನ ಸಮಿತಿಯ ಸಭೆ ನಡೆಯಿತು. ವಿವಿಧ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಭೆ ಸಮ್ಮೇಳನದ ಸಿದ್ಧತೆಗಳ ಕುರಿತು ಚರ್ಚಿಸಿತು. ಮಿಡಲ್‌ ಸ್ಕೂಲ್‌, ಹೈಸ್ಕೂಲ್‌ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನೊಳಗೊಂಡ ಯೂತ್‌ ಕಮಿಟಿಗಳ ವಿವಿಧ ಚಟುವಟಿಕೆಗಳನ್ನು ಬೆಂಬಲಿಸಲು ಹಾಗೂ ಮಿಸ್‌ ಅಕ್ಕ, ಮಿಸ್‌ ಟೀನ್‌ ಅಕ್ಕ ಸ್ಪರ್ಧೆಗಳ ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು, ಊಟ ಉಪಚಾರ, ನೋಂದಣಿ, ಕಾರ್ಯಕ್ರಮಗಳ ಅವಧಿ, ಸ್ವಯಂಸೇವಕರ ನೆರವು ಪಡೆಯುವುದು, ಮುಂತಾದ ವಿಷಯಗಳ ಕುರಿತು ಚರ್ಚಿಸಲಾಯಿತು.

ಅಂದಹಾಗೆ, ಒರ್ಲಾಂಡೊದಲ್ಲಿನ ಕನ್ನಡದ ಉತ್ಸವದಲ್ಲಿ ನೀವು ಭಾಗವಹಿಸುತ್ತೀರಾ ? ಉಹುಂ, ನೀವು ಭಾಗವಹಿಸಿದರಷ್ಟೇ ಸಾಲದು, ಗೆಳೆಯರೂ ಭಾಗವಹಿಸುವಂತೆ ಒತ್ತಾಯಿಸಬೇಕು. ಸಮ್ಮೇಳನ ಸ್ಮರಣೀಯವಾಗಲು ಎಲ್ಲರ ಸಹಕಾರವನ್ನೂ ಸಮ್ಮೇಳನ ಸಮಿತಿ ನಿರೀಕ್ಷಿಸುತ್ತದೆ. ಕನ್ನಡದ ತೇರು ಎಳೆಯಲು ಎಷ್ಟು ಕೈಗಳಾದರೂ ಸಾಲವು!

ಮತ್ತೆ ಭೇಟಿಯಾಗೋಣ.

- ರೇಣುಕಾ ರಾಮಪ್ಪ , ಎಂ.ಡಿ.

ಅಧ್ಯಕ್ಷರು, ಅಕ್ಕ ವಿಶ್ವ ಕನ್ನಡ ಸಮ್ಮೇಳನ-2004

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An update from WKC-2004. Dr. Renuka Ramappa on latest developments, arrangements, line up to world kannada conference Orlando, Florida
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more