ತಬ್ಬಲಿ ಮಗು ಬೆನೆಡಿಟ್‌ಗೆ ಅಮೆರಿಕನ್ನಡಿಗ ವೀರೇಗೌಡರಿಂದ 1ಲಕ್ಷ ರು.
ಬೆಂಗಳೂರು : ಮತಾಂಧ ಬಂಧುಗಳು ಪಾಲ್‌ರಾಜ್ ಮತ್ತು ಸಮೀನಾ ಎಂಬ ಕೋಡಿಹಳ್ಳಿ ದಂಪತಿಗಳನ್ನು ಕೊಚ್ಚಿಹಾಕಿದ ನಂತರ ದಿಕ್ಕು ದೆಸೆಯಿಲ್ಲದಂತಾಗಿರುವ ಅವರ ಮಗಳು ಬೆನೆಡಿಟ್‌ಳ ಭವಿಷ್ಯಕ್ಕೆ 1 ಲಕ್ಷ ರುಪಾಯಿ ಸಹಾಯ ಮಾಡಲು ಅಮೆರಿಕೆಯ ಬಾಬು ವೀರೇಗೌಡ ಎಂಬುವರು ಮುಂದೆ ಬಂದಿದ್ದಾರೆ.
ಮಂಡ್ಯ ಜಿಲ್ಲೆಯ ಕೀಲಾರ ಮೂಲದವರಾದ ಬಾಬು ವೀರೇಗೌಡ ಅಮೆರಿಕಾದ ನ್ಯೂಜೆರ್ಸಿಯ ವೆಸ್ಟ್ ವಿಂಡ್ಸರ್‌ನಲ್ಲಿ ವಾಸವಾಗಿದ್ದಾರೆ. ಇಂಟರ್ನೆಟ್ ಪತ್ರಿಕೆಗಳನ್ನು ಓದುವ ಹವ್ಯಾಸವಿರುವ ಇವರು ಬೆನೆಡಿಟ್ ತಬ್ಬಲಿಯಾದ ಸುದ್ದಿಯನ್ನು ಓದಿದ ತಕ್ಷಣ ಸ್ಪಂದಿಸಿದ ರೀತಿ ಇವರ ಉದಾರತೆಗೆ ಹಿಡಿದ ಕನ್ನಡಿ. 1 ಲಕ್ಷ ರುಪಾಯಿ ನೆರವನ್ನಷ್ಟೇ ಅಲ್ಲದೆ, ಮಗುವಿಗೆ ವೀರೇಗೌಡರು ಸಿಹಿಮುತ್ತುಗಳನ್ನೂ ಕಳುಹಿಸಿ ಕೊಟ್ಟಿದ್ದಾರೆ. ಬೆನೆಡಿಟ್ ವಿಷಯದಲ್ಲಿ ಇನ್ನಾವುದಾದರೂ ನೆರವು ಬೇಕಿದ್ದರೆ, ಸಂಕೋಚವಿಲ್ಲದೆ ಕೇಳಿ ಅಂದಿದ್ದಾರೆ.
ಅಂದಹಾಗೆ, ಬಾಬು ವೀರೇಗೌಡರ ವಿಳಾಸ- ಬಾಬು ಕೀಲಾರ್, 33, ವೆಸ್ಟ್ ಕಿನ್ಸಿಡ್ ಡ್ರೆೃವ್ಸ್, ವೆಸ್ಟ್ ವಿಂಡ್ಸರ್, ನ್ಯೂಜೆರ್ಸಿ, 08550, ಯುಎಸ್‌ಎ. ಫೋನ್ ನಂಬರ್- 212- 6955858. ಇ- ಮೇಲ್ : [email protected]
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications