ವಿಷು : ಕ್ಯಾಲಿಫೋರ್ನಿಯಾ ಕನ್ನಡಿಗರ ಕೂಸು

ವಿದೇಶಗಳಲ್ಲಿ ನೆಲೆಸಿದ ಕನ್ನಡಿಗರು ಸಂಘ ಸಂಸ್ಥೆಗಳನ್ನು ಕಟ್ಟಿಕೊಳ್ಳುವುದು, ಒಟ್ಟಾಗಿ ಕನ್ನಡ ಕಾರ್ಯಕ್ರಮ, ಹಬ್ಬಗಳನ್ನು ಆಚರಿಸುವುದು, ಊಟ ಮಾಡುವುದು ಎಲ್ಲ ಸರಿಯೇ. ಆದರೆ, ಕನ್ನಡನಾಡಿನಿಂದ ದೂರದಲ್ಲಿ ನೆಲೆಸಿರುವ ಅವರ ಸೃಜನಶೀಲ ಬರವಣಿಗೆಗೊಂದು ವೇದಿಕೆ ಬೇಡವೆ? ಅಂಥದೊಂದು ವೇದಿಕೆ ಕಲ್ಪಿಸುವ ಪ್ರಯತ್ನವನ್ನು ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ನಡೆಸಿದೆ.

ಆಯಾ ಸಂವತ್ಸರಗಳ ಹೆಸರಿನಲ್ಲಿ ಪ್ರತಿವರ್ಷ ಅಂತರ್ಜಾಲ ವಾರ್ಷಿಕ ಸಂಚಿಕೆಯಾಂದನ್ನು ತರಲು ಕೂಟ ಮುಂದಾಗಿದೆ. ಈ ಫಲವೇ ಪ್ರಸ್ತುತ ನಿಮ್ಮೆದುರಿಗಿರುವ ವಿಷು, 2001 ಇಸವಿಯ ವಾರ್ಷಿಕ ಸಂಚಿಕೆ. ವಿಶ್ವನಾಥ್‌ ಹುಲಿಕಲ್‌ ವಿಷು ವಿನ ಪ್ರಧಾನ ಸಂಪಾದಕರು.

ವಿಷುವಿನ ಲೇಖಕರ ಬರೆಯುವ ಉತ್ಸಾಹ ತುಂಬಾ ದೊಡ್ಡದು. ಪ್ರಬಂಧ, ಸಣ್ಣಕಥೆ, ಹಾಸ್ಯ, ಕವಿತೆ.. ವಿಷುವಿನ ವ್ಯಾಪ್ತಿ ಕಲಸುಮೇಲೋಗರದವರೆಗೂ ಉಂಟು. ವಿಷುವೆಂದರೆ ಉತ್ತರ ಕ್ಯಾಲಿಫೋರ್ನಿಯಾ ಕನ್ನಡಿಗರ ಅಭಿಮಾನದ ಕೂಸು. ವರ್ಷ ಪೂರ್ತಿ ಚಪ್ಪರಿಸಬಹುದಾದ ಸಂಚಿಕೆ. ಇದೋ ವಿಷುವಿನ ಬರಹಗಳು ನಿಮ್ಮ ಮಡಿಲಿಗೆ, ಪ್ರೀತಿಯಿಂದ ಒಪ್ಪಿಸಿಕೊಳ್ಳಿ. ಎಲ್ಲ ವಿಮರ್ಶೆಗಳಿಗಿಂತ ಕನ್ನಡಾಭಿಮಾನ ದೊಡ್ಡದಲ್ಲವೇ!

ವಿಷುವಿಗೆ ಸ್ವಾಗತ-

ಮುಖಪುಟ / ಸಾಹಿತ್ಯ ಸೊಗಡು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+