ಸನ್ನಿವೇಲ್‌ನಲ್ಲಿ ವಸಂತೋತ್ಸವ

ಕ್ಯಾಲಿಫೋರ್ನಿಯಾ : ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಈ ವರ್ಷದ ವಸಂತೋತ್ಸವಕ್ಕೆ ಸಜ್ಜಾಗಿದೆ. ಈ ಬಾರಿ ಆಚರಣೆ ಹೊಸ ರೂಪು ತಾಳಲಿದೆ. ಭಾರತದ ಇಬ್ಬರು ಅತಿಥಿಗಳು ತಮ್ಮ ಅನುಭವ ಸಾರವ ಧಾರೆ ಎರೆಯಲಿದ್ದಾರೆ. ಏಪ್ರಿಲ್‌ 29ರ ಸಂಜೆ 4 ಗಂಟೆಯಿಂದ ಕಾರ್ಯಕ್ರಮ ಶುರು. ಶುಲ್ಕ ಕೇವಲ 6 ಡಾಲರ್‌ಗಳು. 12 ವರ್ಷದೊಳಗಿನ ಮಕ್ಕಳಿಗೆ ಉಚಿತ. ಬಿಡುವು ಮಾಡಿಕೊಳ್ಳುವಿರಿ ತಾನೆ ?

ಸ್ಥಳ : ಫ್ರೆಂಮಾಂಟ್‌ ಹೈಸ್ಕೂಲ್‌ ಸಭಾಂಗಣ, 1279, ಸನ್ನಿವೇಲ್‌- ಸರಟೋಗಾ ರಸ್ತೆ, ಸನ್ನಿವೇಲ್‌, ಸಿಎ 94087

ಕಾರ್ಯಕ್ರಮಗಳು : ಭದ್ರಗಿರಿ ಸರ್ವೋತ್ತಮ ದಾಸರಿಂದ ಸೀತಾ ಕಲ್ಯಾಣ (ಹರಿಕಥೆ) ಹಾಗೂ ಲಕ್ಷ್ಮಿ ಚಂದ್ರಶೇಖರ್‌ ಅವರಿಂದ ‘ಜಸ್ಟ್‌ ಎ ವುಮೆನ್‌’ (ಸೋಲೋ ಪ್ರೆಸೆಂಟೇಷನ್‌- ಸಂಗೀತ ನೃತ್ಯ ರೂಪಕ)

ಅತಿಥಿಗಳ ಪರಿಚಯ

ಭದ್ರಗಿರಿ ಸರ್ವೋತ್ತಮ ದಾಸ್‌ : ಸಂತ ಕೇಶವದಾಸರ ಸೋದರರಾದ ಇವರು ಕಥಾ ಕೀರ್ತನಕಾರರಾಗಿ ಗುರ್ತಿಸಿಕೊಂಡಿದ್ದಾರೆ. ಕಾಶೀ ಮಠದ ಸುಧೀಂದ್ರ ತೀರ್ಥ ಸ್ವಾಮೀಜಿಗಳ ಆಶೀರ್ವಾದದಿಂದ ಸಂಗೀತದಲ್ಲಿ ಭದ್ರಗಿರಿ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿರುವ ಸರ್ವೋತ್ತಮ ದಾಸರು ಕರ್ನಾಟಕ ಹಾಗೂ ಭಾರತದ ಹರಿದಾಸರ ಸಂದೇಶಗಳನ್ನು ಸಾರುತ್ತಾ ಬಂದಿದ್ದಾರೆ. ‘ಕೀರ್ತನ ವಿಶಾರದ’ ಹಾಗೂ ‘ಕೀರ್ತನ ಕೇಸರಿ’ ಪ್ರಶಸ್ತಿಗಳಿಗೆ ಭಾಜನರಾಗಿರುವ ದಾಸರು ಪ್ರಸ್ತುತ ಕರ್ನಾಟಕ ಕೀರ್ತನ ಕಲಾ ಪರಿಷತ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ; ಪುರಂದರ ದಾಸ ಆರಾಧನ ಸಮಿತಿ ಉಪಾಧ್ಯಕ್ಷರೂ ಹೌದು.

ಲಕ್ಷ್ಮಿ ಚಂದ್ರಶೇಖರ್‌ : ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಮಾಯಾಮೃಗ ದೈನಿಕ ಧಾರಾವಾಹಿಯ ಶಾಸ್ತ್ರಿಗಳ ಪತ್ನಿ ‘ಕಮಲು’ ಅಂದೊಡನೆ ಒಂದು ಚಿತ್ರ ಕಣ್ಮುಂದೆ ನಿಲ್ಲುತ್ತದೆ. ಅದು ಲಕ್ಷ್ಮಿ ಚಂದ್ರಶೇಖರ್‌ ಅವರದು. ಕಾಲದ ಹಾದಿಯಲ್ಲಿ ಹೆಣ್ಣು ನಡೆದು ಬಂದ ಹಾದಿಯನ್ನು ಸೋಲೋ ಸಂಗೀತ- ನೃತ್ಯ ರೂಪಕದ ಮೂಲಕ ಇವರು ಬಿಂಬಿಸಲಿದ್ದಾರೆ. ಮೈಸೂರು ವಿಶ್ವವಿದ್ಯಾಲಯ ಹಾಗೂ ಲೀಡ್ಸ್‌ (ಯುಕೆ) ನಲ್ಲಿ ಇಂಗ್ಲಿಷ್‌ ಭಾಷಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಲಕ್ಷ್ಮಿ ಚಂದ್ರಶೇಖರ್‌, ಬೆಂಗಳೂರಿನ ಎನ್‌ಎಂಕೆಆರ್‌ವಿ ಮಹಿಳಾ ಕಾಲೇಜಿನಲ್ಲಿ ಪಾಠಹೇಳುತ್ತಾರೆ. ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಗಳೆರಡರಲ್ಲೂ ಬರವಣಿಗೆ ಹೊಮ್ಮಿಸಿರುವ ಇವರು, ಕರ್ನಾಟಕದ ‘ಸಮುದಾಯ’ ರಂಗ ಸಮೂಹದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.

ಕಾರ್ಯಕ್ರಮಕ್ಕೆ ಬರಲು ಮಾರ್ಗಸೂಚಿ

Directions to Fremont from East Highway 280: 1. Start out heading towards WEST on 280. 2. EXIT RIGHT on Sunnyvale Saratoga Rd. 3. Keep going straight.
Directions from Highway 680 1. Start out heading SOUTH on 680. 2. HIGHWAY 680 becomes HIGHWAY 280: 3. EXIT LEFT on Sunnyvale Saratoga Rd. 4. Keep going straight.

ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಸಂಪರ್ಕಿಸಿ-

Ram Prasad Hebbalalu :: (510) 489-7190 :: Parimala Muralidhara :: (408) 927-9945 Shobha Prabhakar:: (408) 867-7314 :: Raghavendra Prasad Hebbalalu :: (408) 227-0277

ಕೂಟದ ವಿಳಾಸ

Kannada Koota of Northern California
3322 Grand Lake Drive, Fremont CA 94555
President, Ram Prasad Hebbalalu
Phone: (510) 489-7190 :: Email: [email protected]

Click here to go to top
ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+