ಆಸ್ಟಿನ್: ಎದೆ ತುಂಬಿ ಹಾಡುವರು ಎಂ.ಎಸ್ ಶೀಲಾ
ಆಸ್ಟಿನ್ : ಇಲ್ಲಿನ ಕನ್ನಡ ಸಂಘ ಇನ್ನೊಂದು ಸಂಗೀತ ಕಚೇರಿಯನ್ನು ಹಮ್ಮಿಕೊಂಡಿದೆ. ಈ ಬಾರಿ ವೇದಿಕೆಯಲ್ಲಿ ಪ್ರಸಿದ್ಧ ಗಾಯಕಿ ಎಂ. ಎಸ್. ಶೀಲಾ ಹಾಡುವರು. ತವರ ಕೋಗಿಲೆ ದನಿಯನ್ನು ಮಿಸ್ ಮಾಡಿಕೊಂಡು ಆಮೇಲೆ ಬೇಜಾರು ಮಾಡಿಕೊಳ್ಳಬೇಡಿ.
ಮಾರ್ಚ್ 17ರ ಶನಿವಾರ ಸಂಜೆ ಏಳು ಗಂಟೆಗೆ ಆರ್ಟ್ ಆಡಿಟೋರಿಯಂನಲ್ಲಿ (UT-ustin, at 23rd St and San Jacinto) ಸಂಗೀತ ಕಚೇರಿಯನ್ನು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕದ ಸಂಗೀತ ರಾಣಿ ಎನಿಸಿಕೊಂಡಿರುವ ಎಂ. ಎಸ್. ಶೀಲ ಅವರೊಂದಿಗೆ ವೇದಿಕೆಯಲ್ಲಿ ವಾಯಲಿನ್ ಸಾಥ್‌ನಲ್ಲಿ ರಾಧಿಕಾ ಮಣಿ ಮತ್ತು ಮೃದಂಗಂ ಸಾಥ್‌ನಲ್ಲಿ ಆನೂರು ದತ್ತಾತ್ರೇಯ ಶರ್ಮ ಇರುತ್ತಾರೆ. ಕಚೇರಿಯನ್ನು ಕನ್ನಡ ಸಂಘ ಮತ್ತು ಆಸ್ಟಿನ್‌ನ ಭಾರತೀಯ ಶಾಸ್ತ್ರೀಯ ಸಂಗೀತ ತಂಡ (ICMCA) ಆಯೋಜಿಸಿದೆ. ಆದ್ದರಿಂದ ಐಸಿಎಂಸಿಎನ ಸದಸ್ಯರಿಗೆ ಪ್ರವೇಶ ಶುಲ್ಕ ಇರುವುದಿಲ್ಲ.
ಉಳಿದಂತೆ ದೊಡ್ಡವರಿಗೆ 20 ಡಾಲರ್ ಹಾಗೂ ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ 10 ಡಾಲರ್ ಕೊಟ್ಟು ಟಿಕೆಟ್ ಖರೀದಿಸಬೇಕು. ಇನ್ನೂ ಮಾಹಿತಿ ಬೇಕಿದ್ದರೆ ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications