ಪ್ರೀತಿಯ ಹುಡುಗಿ ದರ್ಶನಕ್ಕೆ ಕಾವೇರಿನೀಡುತ್ತಿದೆ ಎಳ್ಳುಬೆಲ್ಲದ ಆಹ್ವಾನ
ಕಾವೇರಿಯಲ್ಲಿ ಮತ್ತೆ ಹೊಸ ನೀರು ಹರಿಯುತ್ತಿದೆ!
ಹಳೆ ಬೇರಿನ ಬಲ- ಬೆಂಬಲ ಹಾಗೂ ಹೊಸ ಚಿಗುರಿನ ಉತ್ಸಾಹದೊಂದಿಗೆ ಕಾವೇರಿ ಕನ್ನಡ ಸಂಘ 2002 ನೇ ಇಸವಿಯ ಚಟುವಟಿಕೆಗಳನ್ನು ಪ್ರಾರಂಭಿಸಿದೆ. ಮೊದಲಿಗೆ ಸಂಕ್ರಾಂತಿ; ಒಳ್ಳೆಯ ಮಾತನಾಡಲು ಬಾಯಿಗೆ ‘ಎಳ್ಳುಬೆಲ್ಲ’, ಕಣ್ಣು ಹಾಗೂ ಮನಸ್ಸು ತುಂಬಲು‘ನನ್ನ ಪ್ರೀತಿಯ ಹುಡುಗಿ’ ದರ್ಶನ.
ಜನವರಿ 26 ರಂದು ಗಣರಾಜ್ಯೋತ್ಸವ. ಕಾವೇರಿಯ ಸಂಕ್ರಾಂತಿ ಸಂಭ್ರಮವೂ ಅಂದೇ. ದೇಶಪ್ರೇಮದೊಂದಿಗೆ ಹಬ್ಬದ ಸಡಗರದ ಸಮ್ಮಿಲನ. ಜೊತೆಗೆ ಅಮೆರಿಕಾ ಅಮೆರಿಕಾ ಖ್ಯಾತಿ- ಖಯಾಲಿಯ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ನನ್ನ ಪ್ರೀತಿಯ ಹುಡುಗಿ ಸಿನಿಮಾ ಪ್ರದರ್ಶನ. ಇವಿಷ್ಟೂ ಸದ್ಯಕ್ಕೆ ಕಾವೇರಿ ಅಂಗಳದಲ್ಲಿ ಕಾಣಿಸಿಕೊಂಡಿರುವ ಜನವರಿ ಬೆಳದಿಂಗಳು.
ದೀಪಾಲಿ, ಧ್ಯಾನ್, ಸುರೇಶ್ ಹುಬ್ಳೀಕರ್, ಭವ್ಯ, ವಿಜಯಲಕ್ಷ್ಮಿ ಸಿಂಗ್ ಪ್ರಮುಖ ಪಾತ್ರಗಳಲ್ಲಿರುವ ಹುಡುಗಿ ಸ್ಯಾಂಡಲ್‌ವುಡ್ ನೋಡುಗರ ಪ್ರೀತಿಗೆ ಪಾತ್ರಳಾಗಿದ್ದಳು ; ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications