ನೋ ರಿಲ್ಯಾಕ್ಸಿಂಗ್‌! ವಿಶ್ವ ಕನ್ನಡ ಮೇಳಕ್ಕೆ ಹೋಗಲು ರೆಡಿಯಾಗುತ್ತಿರುವ ಕೆಸಿಎ

ಮೊನ್ನೆಯಷ್ಟೇ ನಡೆದ ನಾಟಕೋತ್ಸವದ ಯಶಸ್ಸು ಹಸಿರಾಗಿರುವಾಗಲೇ, ಕೆಸಿಎ ಮತ್ತೊಂದು ಯೋಜನೆಯನ್ನು ಕೈಗೆತ್ತಿಕೊಂಡಿದೆ. ಡೆಟ್ರಾಯಿಟ್‌ನಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ತನ್ನ ಪ್ರತಿನಿಧಿಗಳ ಕಾರ್ಯಕ್ರಮವನ್ನು ನೀಡುವುದು ಕೆಸಿಎ ಉದ್ದೇಶ.

ಒಂದು ನೃತ್ಯ ಅಥವಾ ಸುಶ್ರಾವ್ಯ ಹಾಡು... ಗೆಳೆಯರೆಲ್ಲ ಸೇರಿ ಒಂದು ಗ್ರೂಪ್‌ ಸಾಂಗ್‌ ? ಮತ್ತೊಂದು ಸುಂದರ ನಾಟಕವಾದರೂ ಸರಿ. ನಿಮ್ಮ ಪ್ರತಿಭೆಗೊಂದು ಬೆಳಕಿಂಡಿಯನ್ನು ವಿಶ್ವ ವೇದಿಕೆ ಡೆಟ್ರಾಯಿಟ್‌ನಲ್ಲಿ ಕಲ್ಪಿಸಲು ಕೆಸಿಎ ರೆಡಿಯಾಗಿದೆ.

ನಿಮ್ಮ ಪ್ರತಿಭಾ ಪ್ರದರ್ಶನದ ಕುರಿತು ನಿಮ್ಮ ಯೋಜನೆ ಹಾಗೂ ರೂಪು ರೇಶೆಯ ಕೆಸಿಎಯ ಆಡಳಿತ ಸಮಿತಿಗೆ ತಕ್ಷಣ ತಿಳಿಸಿ. ಡೆಟ್ರಾಯಿಟ್‌ನಲ್ಲಿ ಕೆಸಿಎಯನ್ನು ಪ್ರತಿನಿಧಿಸಲು ಬಯಸುತ್ತೀರಾದರೆ, ಅದಕ್ಕೆ ತುಂಬು ಸ್ವಾಗತ. ನೀವು ಮಾಡಬೇಕಾಗಿರುವುದಿಷ್ಟೇ- ಆಡಳಿತ ಸಮಿತಿಗೊಂದು ಈ-ಮೇಯ್ಲ್‌ . ನೀವು ಸಂಪರ್ಕಿಸಬೇಕಾದ ವಲ್ಲೀಶ ಶಾಸ್ತ್ರಿ ಅವರ ಈ- ಮೇಯ್ಲ್‌ ವಿಳಾಸ : [email protected]

ವಿಶ್ವಕನ್ನಡ ಸಮ್ಮೇಳನ ಎನ್ನುವುದೇ ಒಂದು ರೋಮಾಂಚನ . ಏನಾದರೂ ಕಾರ್ಯಕ್ರಮ ನೀಡಬೇಕು ಅಂತ ಯೋಚಿಸಿದ್ದರೆ, ಕೆಸಿಎ ಮಾರ್ಗದರ್ಶನ ನೀಡಲು ರೆಡಿಯಾಗಿದೆ. ಡೆಟ್ರಾಯಿಟ್‌ ಸಮ್ಮೇಳನದ ಬಗ್ಗೆ ಸಮಗ್ರ ಮಾಹಿತಿ www.akkaonline.orgನಲ್ಲ್ಲಿ ಸಿಗುತ್ತದೆ.

(ಇನ್ಫೋ ವಾರ್ತೆ)

Click here to go to top
ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+