• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಸ್ಟಿನ್‌ನ ಬಾನಿನಲ್ಲಿ ಮುಂಗಾರಿನ ಮಿಂಚು

By Staff
|

ಆಸ್ಟಿನ್‌ : ಶನಿವಾರ (ಫೆ.24) ಸ್ವಲ್ಪ ಫ್ರೀ ಇದ್ದೀರಾ... ಸಂಜೆ ಮೂರುವರೆಗೆ ಮುಂಗಾರಿನ ಮಿಂಚು ಕನ್ನಡ ಸಿನೆಮಾ ನೋಡಲು ಹೋಗೋಣವೇ? ಅವತ್ತು ಸಂಜೆಗೆ ಮತ್ತೆ ಬೇರೇನೂ ಅಪಾಯಿಂಟ್‌ಮೆಂಟ್‌ ಇರದ ಹಾಗೆ ಈಗಲೇ ಪ್ಲಾನ್‌ ಮಾಡಿ.

ಬಂಧನ, ನಾಗರಹೊಳೆ, ಮುತ್ತಿನ ಹಾರದಂತಹ ಉತ್ತಮ ಚಿತ್ರಗಳನ್ನು ನಿರ್ದೇಶಿಸಿದ ರಾಜೇಂದ್ರ ಸಿಂಗ್‌ ಬಾಬು ಅವರು ಈ ಚಿತ್ರದ ನಿರ್ದೇಶಕರು.

ರಮೇಶ್‌, ಶಿಲ್ಪ , ಸುಮನ್‌ ನಗರ್‌ಗರ್‌ ತಾರಾಗಣದಲ್ಲಿದ್ದಾರೆ. ಸಿನೆಮಾದ ಹಾಡುಗಳು ಚೆನ್ನಾಗಿದೆ ಅಂತ ಅನಿಸಿದರೆ ನೀವು ವಿ. ಮನೋಹರ್‌ನ್ನು ಹೊಗಳಬೇಕು. ಪ್ರೇಮ ಕತೆ. ಅಳುಮುಂಜಿ ಕತೆಯಲ್ಲ . ಆದ್ದರಿಂದ ಕರ್ಚೀಫ್‌ನ ಅಗತ್ಯವಿರುವುದಿಲ್ಲ. ನಿಮ್ಮ ಫ್ರೆಂಡ್‌ ತುಂಬಾ ಸೆನ್ಸಿಟಿವ್‌ ಆಗಿದ್ದರೂ ಪರವಾಗಿಲ್ಲ, ಅವರನ್ನು ಫಿಲ್ಮ್‌ಗೆ ಕರೆದುಕೊಂಡು ಹೋಗಬಹುದು. ಮಲೆನಾಡಿನ ತೀರ್ಥಹಳ್ಳಿಯಲ್ಲಿ ಕ್ಯಾಮರಾಗಳು ದೃಶ್ಯಾವಳಿಗಳನ್ನು ಹೀರಿಕೊಂಡಿವೆ. ಆ ಮಳೆ, ಕಾಡು... ಹೊಲ ಗದ್ದೆಯ ಸೀನರಿಗಳನ್ನು ಸವಿಯುವುದನ್ನು ಮರೆಯಬೇಡಿ.

ಕರ್ನಾಟಕದಲ್ಲಿ ಶತಕ ಬಾರಿಸಿದ ಚಿತ್ರ ಇದು. ಉತ್ತಮ ಪ್ರಾದೇಶಿಕ ಚಿತ್ರ ಅಂತ ರಾಷ್ಟ್ರೀಯ ಪ್ರಶಸ್ತಿ ಗೆದ್ದುಕೊಂಡಿದೆ. ಇನ್ನೂ ಡೀಟೈಲ್ಸ್‌ ಬೇಕಿದ್ದರೆ http://www.kannadasangha.com ನ್ನು ಸಂಪರ್ಕಿಸಿ.

ಅಂದಹಾಗೆ ನೀವು ಈ ಸಂಘದ ಸದಸ್ಯರಾಗಬಯಸಿದ್ದೀರಾ, ಅಥವ ಈ ವರ್ಷದ ಸದಸ್ಯತ್ವವನ್ನು ನವೀಕರಿಸಲು ಮರೆತಿದ್ದೀರಾ ? ಚೆಕ್‌ ಬುಕ್‌ ಅಥವ ಹಣ ತೆಗೆದುಕೊಂಡು ಬನ್ನಿ. ಸದಸ್ಯತ್ವ ಪಡೆಯು ಪ್ರತಿ ಕುಟುಂಬಕ್ಕೆ 25 ಡಾಲರ್‌. ಆ್ಯಸ್ಟಿನ್‌ ನಗರಿಗೆ ನೀವು ಹೊಸಬರಾಗಿರಬಹುದು. ಸಂಸ್ಕೃತಿಯ ತುಡಿದ ಖಂಡಿತ ಇದ್ದೀತು. ಟಿಕೆಟ್‌ ಕೌಂಟರಿನಲ್ಲೇ ಚೆಕ್ಕೋ, ದುಡ್ಡೋ ಕೊಟ್ಟು ಸದಸ್ಯರಾಗುವ ಅವಕಾಶವುಂಟು.

ಮಾರ್ಚ್‌ 11ರ ಭಾನುವಾರ ಸದಸ್ಯರು ಮಧ್ಯಾಹ್ನ 1ಗಂಟೆಯಿಂದ ಸಂಜೆ 5ರವರಗೆ ಬಿಡುವು ಮಾಡಿಕೊಳ್ಳಿ. ವಾಲ್‌ ನಟ್‌ ಕ್ರೀಕ್‌ ಪಾರ್ಕಿ (ಪಾರ್ಮರ್‌ ಲೇನ್‌ಗೆ ಹತ್ತಿರದ) ಗೆ ಸಂಘ ಪಿಕ್‌ನಿಕ್‌ ಆಯೋಜಿಸಿದೆ. ಸ್ನಾಕ್ಸ್‌ ಕೂಡ ಉಂಟು. ಕ್ರಿಕೆಟ್ಟು, ಬ್ಯಾಸ್ಕೆಟ್‌ಬಾಲು, ಮಕ್ಕಳಿಗಾಗಿ ಮೂನ್‌ ವಾಕು, ರಂಗೋಲಿ ಸ್ಪರ್ಧೆ ಇನ್ನೂ ಏನೇನೋ ಉಂಟು.

ಸೋ, ಶನಿವಾರ ನೀವು ವೆಲ್ಸ್‌ ಬ್ರಾಂಚ್‌ ಡಜಿಸ್ಕೌಂಟ್‌ ಸಿನೆಮಾ (Wells Branch Discount Cinema, Intersection of Wells Branch Parkway & Mopac) ಮಂದಿರಕ್ಕೆ ಸರಿಯಾಗಿ ಮೂರುವರೆ ಗಂಟೆಗೆ ಬನ್ನಿ ಮತ್ತೆ. ಆಸ್ಟಿನ್‌ ಕನ್ನಡ ಸಂಘದವರಿಗೆ 4 ಡಾಲರ್‌ಗೆ ಟಿಕೆಟ್‌ ಸಿಗುತ್ತದೆ. ಇತರರಿಗೆ 7 ಡಾಲರ್‌. ದಾರಿ ಕೆಳಗಿದೆ-

From I35 North: Take Wells Branch Pkway exit, Turn Right on WellsBranch Pkway signal, Go past 4 signals.

Take a left into the complex with Exxon gas station(Just before you hit 1325 or Burnet Road)

From I35 South:Take Wells Branch Pkway exit, Turn Left on Wells Branch Pkwaysignal, Go past 4 signals

(after crossing I35. Take a left into the complex with Exxon station (Just before youhit FM 1325 or Burnet Road)

From Mopac South: Take Mopac North. Keep going even after Mopac ends and becomes FM 1325 (Burnet road).

Turn right into The Market at Wells branch complex (There is a McDonalds and Exxon in this complex. This is just before you hit Wells Branch)

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more