ನೋಡಲೇಬೇಕಾದ ಮತದಾನವಿದು ಕಾವೇರಿ ಕನ್ನಡ ಸಂಘದ ಕೊಡುಗೆ

ವಾಷಿಂಗ್ಟನ್‌ : ಇದೊಂದು ರಾಜಕೀಯ ಸಿನೆಮಾ. ಅಥವಾ ರಾಜಕೀಯ ವಿಡಂಬನೆಯ ಸಿನಿಮಾ. ಹೆಸರು, ಮತದಾನ ಅಂತ. ಆರ್ಟ್‌ ಮೂವಿ ಅಂತ ಕರೆಯುತ್ತೀರಾದರೆ ತೊಂದರೆ ಇಲ್ಲ . ಒಟ್ಟಾರೆ ಹೇಳುವುದಾದರೆ, ನೀವು ಬಿಡುವು ಮಾಡಿಕೊಂಡು ನೋಡಲೇ ಬೇಕಾದ ಸಿನೇಮಾ ಇದು. ಮಾರ್ಚ್‌ 30 ಮತ್ತು 31ರಂದು ಕಾವೇರಿ ಕನ್ನಡ ಸಂಘ ಈ ಚಿತ್ರವನ್ನು ಪ್ರದರ್ಶಿಸಲಿದೆ. ಅಂದಹಾಗೆ, ಇತ್ತೀಚೆಗಷ್ಟೇ ರಾಷ್ಟ್ರೀಯ ಪ್ರಶಸ್ತಿಗಳ ಚುನಾವಣೆಯಲ್ಲಿ ಮತದಾನ ಗೆದ್ದಿದೆ.

ಎಸ್‌. ಎಲ್‌. ಭೈರಪ್ಪ ಅವರ ಮತದಾನ ಕಾದಂಬರಿ ಆಧಾರಿತ ಮತದಾನ ಚಿತ್ರದ ನಿರ್ದೇಶಕರು ಮಾಯಾಮೃಗ ಖ್ಯಾತಿಯ ಟಿ.ಎನ್‌. ಸೀತಾರಾಮ್‌. ರಾಜಕೀಯ ಕಿತ್ತಾಟಗಳು, ಮನೆಯಾಳಗಿನ ಗೊಂದಲಗಳು, ಮೋಸ ವಂಚನೆಯ ಪ್ರಕರಣಗಳನ್ನು ಆಕರ್ಷಕ ರೀತಿಯಲ್ಲಿ ಕಟ್ಟಿ ಸಿನೆಮಾ ತೆಗೆದಿದ್ದಾರೆ ಸೀತಾರಾಮ್‌. ಬದುಕಲಿಕ್ಕಾಗಿ ಆದರ್ಶಗಳೊಂದಿಗೆ ರಾಜಿಯಾಗುತ್ತ ಅಸಹಾಯಕನಾಗಿ ನಿಲ್ಲುವ ಮನುಷ್ಯನ ಕರುಳು ಕಲಕುವ ಪರಿಯ ಚಿತ್ರಣ ಸೀತಾರಾಮ್‌ಗಷ್ಟೇ ಸಾಧ್ಯ ಅನ್ನುವಂತಿದೆ.

ಮುಖ್ಯ ತಾರಾಗಣದಲ್ಲಿ ಅನಂತ್‌ನಾಗ್‌, ದೇವರಾಜ್‌, ಅವಿನಾಶ್‌, ತಾರಾ ಇದ್ದಾರೆ. ಹೆಚ್ಚಿನ ವಿವರಗಳೇನೇ ಬೇಕಿದ್ದರೂ ಫೋನ್‌ ನಂಬರ್‌ ನಿಮ್ಮ ಮುಂದಿದೆ. ಭಾಸ್ಕರ್‌ - (800) 306-2275 ವಿಶ್ವೇಶ್ವರ್‌ ದೀಕ್ಷಿತ್‌ (562) 947-8752, ರಾಜ್‌ -(818) 779-1611

ಕಾವೇರಿ ಕನ್ನಡ ಸಂಘದ ಸದಸ್ಯರಾರಾಗಲು ಇಚ್ಚಿಸುವವರು ವಾರ್ಷಿಕ ಐವತ್ತು ಡಾಲರ್‌ನ್ನು ಈ ವಿಳಾಸಕ್ಕೆ ಕಳುಹಿಸಿ. 13403 Edgebrook Road, La Mirada, CA 90638.

ಲಾಸ್‌ ಎಂಜಲೀಸ್‌ನಲ್ಲಿನ ಪ್ರದರ್ಶನದ ವಿವರಗಳನ್ನು ಗಮನಿಸಿ

Date & time: Friday, March 30th @ 7:00 PM

Location: Laemmle, 17200 Ventura Blvd, Encino, CA 91316

Date & time: Saturday, March 31st @ 11:00 AM

Location: Laemmle, 17200 Ventura Blvd, Encino, CA 91316

Date & time: Saturday, March 31st @ 6:00 PM

Location: Flagship Theatres, 854 E.Alosta Ave., Azusa, CA 91702

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+