ಪ್ರೊ.ಷಿಫ್‌ಮನ್‌ ಜೊತೆಗೊಂದು ಸಂಜೆ

ದಕ್ಷಿಣ ಕ್ಯಾಲಿಫೋರ್ನಿಯಾದ ‘ಕರ್ನಾಟಕ ಕಲ್ಚರಲ್‌ ಅಸೋಸಿಯೇಷನ್‌’(ಕೆಸಿಎ), ಪ್ರೊ. ಹೆರಾಲ್ಡ್‌ ಷಿಪ್‌ಮನ್‌ ಅವರನ್ನು ಗೌರವಿಸಲು ಒಂದು ಕೂಟ ವನ್ನು ಏರ್ಪಡಿಸಿದೆ. ಜುಲೈ ತಿಂಗಳ 25 ರ ಬುಧವಾರ 7.30 ಕ್ಕೆ ಡಾ. ಜಯಂತಿ ಮತ್ತು ರವಿಕುಮಾರ್‌ ಅವರ ನಿವಾಸದಲ್ಲಿ (10120 Sunrise Lane, Santa Ana, CA 92705) ನಡೆಯುವ ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತ.

ಪ್ರೊ. ಷಿಫ್‌ಮನ್‌ ಅಪರೂಪದ ಪ್ರಾಧ್ಯಾಪಕರು. ಕನ್ನಡತನಕ್ಕೆ, ಕನ್ನಡ ಕಲಿಸಲಿಕ್ಕೆ ಹೆಸರಾದ ಇವರೊಂದಿಗೆ ಮಾತನಾಡುವುದೇ ಒಂದು ಅನನ್ಯ ಅನುಭವ. ಇಂಥಾ ಕನ್ನಡ ಪ್ರಾಧ್ಯಾಪಕರೊಡನೆ ಹರಟಲಿಕ್ಕೆ, ಕನ್ನಡದ ಬಗ್ಗೆ ಮಾತನಾಡಲಿಕ್ಕೆ ಒಂದು ಸುಂದರ ಸಂಜೆಯನ್ನು ಕೆಸಿಎ ಕಲ್ಪಿಸಿದೆ.

ಪೆನ್‌ ಭಾಷಾ ಕೇಂದ್ರದ (Penn Language Center) ನಿರ್ದೇಶಕರಾಗಿರುವ ಷಿಫ್‌ಮನ್‌ ಅವರು ಪೆನ್‌ಸಿಲ್ವೇನಿಯಾ ವಿಶ್ವವಿದ್ಯಾಲಯ, ದಕ್ಷಿಣ ಏಷ್ಯಾ ಪ್ರಾದೇಶಿಕ ಅಧ್ಯಯನ ವಿಭಾಗದಲ್ಲಿ ದ್ರಾವಿಡ ಭಾಷಾಶಾಸ್ತ್ರ ಹಾಗೂ ಸಂಸ್ಕೃತಿ ವಿಷಯಗಳ ಪ್ರಾಧ್ಯಾಪಕರೂ ಹೌದು.

ಕನ್ನಡದ ಬಗ್ಗೆ ಹಾಗೂ ಕನ್ನಡ ಕಲಿಸುವ ಬಗ್ಗೆ ಪ್ರೊ. ಷಿಪ್‌ಮನ್‌ ಪುಸ್ತಕಗಳನ್ನು ಬರೆದಿದ್ದಾರೆ. ಮೌಖಿಕ ಕನ್ನಡ ಪರಿಣತರಾದ ಇವರು ಕನ್ನಡ ಕಲಿಸುವುದರಲ್ಲೂ ಹೆಸರುವಾಸಿ. ಕನ್ನಡ ಕಲಿಕೆಯ ಚರ್ಚೆ, ಕನ್ನಡ ಪೀಠದ ಸ್ಥಾಪನೆ, ಕಂಪ್ಯೂಟರ್‌ ಹಾಗೂ ಇಂಟರ್ನೆಟ್‌ನಲ್ಲಿ ಕನ್ನಡ ಬಳಕೆ, ಹಾಗೂ ವಾಕ್‌ ಕನ್ನಡದ ಬಗೆಗೆ ಅಧ್ಯಯನ ಮುಂತಾದ ಕನ್ನಡ ಸಂಬಂಧಿ ಕೆಲಸಗಳಲ್ಲಿ ದುಡಿದಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+