ಗುಜರಾತ್ ನಿಧಿಗಾಗಿ ಆಸ್ಟಿನ್‌ನಲ್ಲಿ ನೃತ್ಯ ಸಂಜೆ
ಆಸ್ಟಿನ್: ಫೆಬ್ರವರಿ 25ರಂದು ನಿಮಗಾಗಿ ನೃತ್ಯ ಸಂಜೆಯಾಂದನ್ನು ಇಂಡೋ ಅಮೆರಿಕನ್ ಸಮುದಾಯದವರು ಆಯೋಜಿಸಿದ್ದಾರೆ. ಭಾರತೀಯ ನೃತ್ಯದ ಸರಣಿಗಳು ಅಂದು ಸಂಜೆ ನಿಮ್ಮನ್ನು ರಂಜಿಸಲಿವೆ.
ನೃತ್ಯ ಸಂಜೆಯನ್ನು ಆಯೋಜಿಸಿರುವುದು, ಗುಜರಾತಿನಲ್ಲಿ ಜೀವವೊಂದನ್ನೇ ಕೈಲಿ ಹಿಡಿದುಕೊಂಡು ಬಾನ ಸೂರಿನಡಿ ಬದುಕು ಸಾಗಿಸುತ್ತಿರುವ ಅನಾಥರ ಪುನರ್ವಸತಿಗಾಗಿ. ಅಂದು ಸಂಜೆ ನಾಲ್ಕು ಗಂಟೆಗೆ ಜಾನ್ ಬಿ ಕೋನ್ನಲ್ಲಿ ಹೈ ಸ್ಕೂಲ್‌ನಲ್ಲಿ ಕಾರ್ಯಕ್ರಮ ಆರಂಭವಾಗಲಿದೆ. (13212 North Lamar Blvd, (1/2 mile north of Parmer Lane) Austin, TX)
ಕಾರ್ಯಕ್ರಮದಲ್ಲಿ ರಾಜಸ್ಥಾನೀ ನೃತ್ಯ, ಮಿಶನ್ ಕಾಶ್ಮೀರ್ ಚಿತ್ರದ ಗೀತೆಯ ಗ್ರೂಪ್ ಡಾನ್ಸ್, ದಕ್ಷಿಣ ಭಾರತೀಯ ಜಾನಪದ ನೃತ್ಯ, ಒಡಿಸ್ಸಿ ನೃತ್ಯ, ಒರಿಸ್ಸಾದ ಸಾಂಸ್ಕೃತಿಕ ನೃತ್ಯ ಪ್ರೇಕ್ಷಕರ ಗಮನ ಸೆಳೆಯಲಿದೆ. ನೃತ್ಯ ವೀಕ್ಷಿಸಿ ನೀವು ಆನಂದಿಸಲು ಕೊಳ್ಳುವ ಟಿಕೆಟ್‌ನ ಹಣ ಗುಜರಾತ್ ಭೂಕಂಪ ಪರಿಹಾರ ನಿಧಿಗೆ ಸಲ್ಲುತ್ತದೆ. ಇದ್ಯಾವುದರ ಗೋಜೇ ಬೇಡ ಎಂದು ಕೊಳ್ಳುವವರು ಗುಜರಾತ್ ನಿಧಿಗೆ ಸಹಾಯ ಮಾಡುವ ಆಸಕ್ತಿ ಹೊಂದಿದ್ದಲ್ಲಿ, ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದು.
Gujarati Samaj of Greater Austin, 504 W. 24th Street, Box # 222 Austin, Texas 78705
http://www.iccaustin.org/ ಸೈಟಿನಲ್ಲಿ ನೀವು ಗುಜರಾತ್ ಭೂಕಂಪ ಪರಿಹಾರಕ್ಕೆ ಸಂಬಂಧಿಸಿ ಆಸ್ಟಿನ್‌ನ ಉತ್ಸಾಹಿಗಳು ಮಾಡುತ್ತಿರುವ ಎಲ್ಲ ಕಾರ್ಯಕ್ರಮಗಳ ಮಾಹಿತಿಗಳನ್ನು ಪಡೆಯಬಹುದು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications