Get Updates
Get notified of breaking news, exclusive insights, and must-see stories!

Gold Rate: ಭಾರತದಲ್ಲಿ ಚಿನ್ನದ ಬೆಲೆ ಪಾತಾಳಕ್ಕೆ ಕುಸಿತ! ಬರೋಬ್ಬರಿ 1,850 ರೂ. ಕುಸಿತ

ಸತತ 7 ದಿನಗಳ ಏರಿಕೆಯ ನಂತರ ಇದೀಗ ಭಾರತದಲ್ಲಿ ಚಿನ್ನದ ಬೆಲೆ ಕುಸಿತ ಕಂಡಿದೆ. ಏನಪ್ಪಾ, ಇಷ್ಟೊಂದು ಚಿನ್ನದ ಬೆಲೆ ಏರಿಕೆಯಾಗಿದೆ ಎಂದು ಹೇಳುತ್ತಿದ್ದವರಿಗೆ, ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ. ಕಳೆದ ವಾರವಿಡೀ ಚಿನ್ನ ಪ್ರಿಯರಿಗೆ ಶಾಕ್‌ ಮೇಲೆ ಶಾಕ್‌ ಕೊಟ್ಟಿದ್ದ ದರ ಏರಿಕೆ, ಇದೀಗ ವರ್ಷಾಂತ್ಯದ ವಾರದ ಆರಂಭದಲ್ಲಿ ಗುಡ್‌ ನ್ಯೂಸ್‌ ಕೊಟ್ಟಿದೆ. ಕೊನೆಗೂ ಚಿನ್ನದ ಬೆಲೆ (Today Gold Rate) ಇಳಿಕೆಯಾಗಿದ್ದು, ಇಂದು ಭಾರತದಲ್ಲಿ ಚಿನ್ನದ ದರ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

Gold Rate Today

ಭಾರತದಲ್ಲಿ 24K ಚಿನ್ನದ ಬೆಲೆ:
24 ಕ್ಯಾರಟ್‌ ಚಿನ್ನದ 1 ಗ್ರಾಂ ಬೆಲೆ ಇಂದು 14,040 ರೂ. ಆಗಿದ್ದು, ನಿನ್ನೆ 14,242 ರೂ. ಇತ್ತು. ಕಳೆದೊಂದು ವಾರದಿಂದ ಏರಿಕೆಯಲ್ಲಿದ್ದ ಚಿನ್ನದ ಬೆಲೆ ಇಂದು ಪ್ರತೀ ಗ್ರಾಂನಲ್ಲಿ ₹202 ರೂ. ಇಳಿಕೆ ಕಂಡಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,12,320 ರೂ. ಆಗಿದ್ದು, ನಿನ್ನೆ 1,13,936 ರೂ. ಇತ್ತು. ನಿನ್ನೆಗಿಂತ ಇಂದು 1,616 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,40,400 ರೂ. ಆಗಿದ್ದು, ನಿನ್ನೆ 1,42,420 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 2,020 ರೂ. ಕುಸಿತವಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು ₹14,04,000 ರೂ. ಆಗಿದ್ದು, ನಿನ್ನೆ 14,24,200 ರೂ. ಇತ್ತು. ಒಟ್ಟು 20,200 ರೂ. ಇಳಿಕೆಯಾಗಿದೆ.

ಭಾರತದಲ್ಲಿ 22K ಚಿನ್ನದ ಬೆಲೆ:
22 ಕ್ಯಾರಟ್‌ ಚಿನ್ನದ ಒಂದು ಗ್ರಾಂ ಬೆಲೆ ಇಂದು 12,870 ರೂ. ಆಗಿದ್ದು, ನಿನ್ನೆ 13,055 ರೂ. ಇತ್ತು. ನಿನ್ನೆಗಿಂತ ಇಂದು ಬರೋಬ್ಬರಿ ₹185 ರೂ. ಇಳಿಕೆ ಕಂಡಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,02,960 ರೂ. ಆಗಿದ್ದು, ನಿನ್ನೆ 1,04,440 ರೂ. ಆಗಿತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,480 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,28,700 ರೂ. ಆಗಿದ್ದು, ನಿನ್ನೆ 1,30,550 ರೂ. ಇತ್ತು. ನಿನ್ನೆಗಿಂತ ಇಂದು 1,850 ರೂ. ಬದಲಾವಣೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 12,87,000 ರೂ. ಆಗಿದ್ದು, ನಿನ್ನೆ 13,05,500 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹18,500 ರೂ. ವ್ಯತ್ಯಾಸವಾಗಿದೆ.

ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
ಭಾರತದಲ್ಲಿ 18 ಕ್ಯಾರಟ್‌ ಚಿನ್ನದ 1 ಗ್ರಾಂ ಬೆಲೆ ಇಂದು ₹10,530 ರೂ. ಆಗಿದ್ದು, ನಿನ್ನೆ 10,682 ರೂ. ಇತ್ತು. ನಿನ್ನೆಗಿಂತ ಇಂದು 152 ರೂ. ಕುಸಿತ ಕಂಡಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು ₹84,240 ರೂ. ಆಗಿದ್ದು, ನಿನ್ನೆ 85,456 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,216 ರೂ. ಇಳಿಕೆ ಕಂಡಿದೆ. ಹಾಗೆಯೇ 10 ಗ್ರಾಂ ಚಿನ್ನದ ಬೆಲೆ ಇಂದು 1,06,280 ರೂ. ಆಗಿದ್ದು, ನಿನ್ನೆ 1,06,820 ರೂ. ಇತ್ತು. ಒಟ್ಟು 1,520 ರೂ. ಇಳಿಕೆ ಕಂಡಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 10,53,000 ರೂ. ಆಗಿದ್ದು, ನಿನ್ನೆ 10,68,200 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 15,200 ರೂ. ಇಳಿಕೆಯಾಗಿದೆ.

ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 14,204, 22K ರೂ. 13,020, 18K ರೂ. 10,865
ಮುಂಬೈ: 24K ರೂ. 14,040, 22K ರೂ. 12,870, 18K ರೂ. 10,530
ದೆಹಲಿ: 24K ರೂ. 14,055, 22K ರೂ. 12,885, 18K ರೂ. 10,545
ಕೋಲ್ಕತ್ತಾ: 24K ರೂ. 14,040, 22K ರೂ. 12,870, 18K ರೂ. 10,530
ಬೆಂಗಳೂರು: 24K ರೂ. 14,040, 22K ರೂ. 12,870, 18K ರೂ. 10,530
ಹೈದರಾಬಾದ್: 24K ರೂ. 14,040, 22K ರೂ. 12,870, 18K ರೂ. 10,530
ಕೇರಳ: 24K ರೂ. 14,040, 22K ರೂ. 12,870, 18K ರೂ. 10,530
ಪುಣೆ: 24K ರೂ. 14,040, 22K ರೂ. 12,870, 18K ರೂ. 10,530
ವಡೋದರಾ: 24K ರೂ. 14,045, 22K ರೂ. 12,875, 18K ರೂ. 10,535
ಅಹಮದಾಬಾದ್: 24K ರೂ. 14,045, 22K ರೂ. 12,875, 18K ರೂ. 10,535

ಇಂದು ಬೆಳ್ಳಿ ಬೆಲೆ ಎಷ್ಟಿದೆ?
ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದಂತೆ, ಅತ್ತ ಬೆಳ್ಳಿ ಬೆಲೆ ಕೂಡಾ ಭಾರೀ ಇಳಿಕೆ ಕಂಡಿದೆ. ಈ ವರ್ಷವಂತೂ ಬೆಳ್ಳಿ ಬೆಲೆ ದಾಖಲೆಯಲ್ಲಿ ಏರಿಕೆ ಕಂಡಿತ್ತು. ಒಂದು ಗ್ರಾಂ ಬೆಳ್ಳಿ ದರ ಇಂದು ₹258 ರೂ. ಆಗಿದ್ದು, ನಿನ್ನೆ ₹262 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹4 ರೂ. ಇಳಿಕೆ ಕಂಡಿದೆ. ಇನ್ನು 8 ಗ್ರಾಂ ಬೆಳ್ಳಿ ದರ 2,064 ರೂ. ಆಗಿದೆ. ನಿನ್ನೆ ₹2,096 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹32 ರೂ. ಇಳಿಕೆ ಕಂಡಿದೆ. 10 ಗ್ರಾಂ ಬೆಳ್ಳಿ ಬೆಲೆ ₹2,580 ರೂ. ಆಗಿದೆ. ಇನ್ನು 100 ಬೆಳ್ಳಿ ದರ 25,800 ರೂ., 1000 ಗ್ರಾಂ ಬೆಳ್ಳಿ ಬೆಲೆ 2,58,000 ರೂ. ಆಗಿದೆ.

ಸ್ಪಾಟ್‌ ಗೋಲ್ಡ್‌ ವಿವರ:
ಡಿಸೆಂಬರ್‌ 29ರ ರಾಯಿಟರ್ಸ್‌ ವರದಿ ಪ್ರಕಾರ, ಸೋಮವಾರ ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಬೆಳ್ಳಿಯ ವಹಿವಾಟು ದಿನದ ಆರಂಭದಲ್ಲಿ ಗರಿಷ್ಠ ಮಟ್ಟವನ್ನು ತಲುಪಿದ ನಂತರ ಪ್ರತೀ ಔನ್ಸ್‌ಗೆ $80 ರ ಸಮೀಪಕ್ಕೆ ರೀಚ್‌ ಆಗಿದೆ.

ಇನ್ನು ಶುಕ್ರವಾರ ದಾಖಲೆಯ ಗರಿಷ್ಠ $4,549.71 ತಲುಪಿದ ನಂತರ, 0426 GMT ವೇಳೆಗೆ ಸ್ಪಾಟ್‌ ಚಿನ್ನದ ದರವು ಪ್ರತೀ ಔನ್ಸ್‌ಗೆ 0.4% ಇಳಿಕೆ ಕಂಡಿದೆ. ಆ ಪ್ರಕಾರ $4,512.30 ಕ್ಕೆ ತಲುಪಿದೆ.

Credit: Goodreturns

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+