ಕಲರ್ಸ್ ಕನ್ನಡ ವಾಹಿನಿ ಇತಿಹಾಸದಲ್ಲೇ ಗಿಲ್ಲಿ ಹೊಸ ದಾಖಲೆ; ಅರೇ, ಏನ್ ಕ್ರೇಜ್ ಗುರೂ
ಬಿಗ್‌ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಗೆ ಇನ್ನೆರಡು ದಿನ ಬಾಕಿಯಿದೆ. ಈ ಬಾರಿ ಗಿಲ್ಲಿ ಟ್ರೋಫಿ ಗೆಲ್ಲೋದು ಪಕ್ಕಾ ಎನ್ನುವ ಚರ್ಚೆ ಜೋರಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ದರ್ಬಾರ್ ಜೋರಾಗಿದೆ. ಅಭಿಮಾನಿಗಳು ಆತನ ಭಾವಚಿತ್ರವನ್ನು ಮೈಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಾರೆ. ಹಿಂದಿನ ಯಾವುದೇ ಸೀಸನ್ ಸ್ಪರ್ಧಿಗಳಿಗೆ ಕೂಡ ಈ ಪಾಟಿ ಕ್ರೇಜ್ ಇರಲಿಲ್ಲ.
ಗಾಡಿಗಳ ಮೇಲೆ ಗಿಲ್ಲಿ ಫೋಟೊಗಳು ರಾರಾಜಿಸುತ್ತಿದೆ. ಗಿಲ್ಲಿಗೆ ವೋಟ್ ಮಾಡಿ ಎಂದು ಅಭಿಮಾನಿಗಳು ಪ್ರಚಾರ ಮಾಡುತ್ತಿದ್ದಾರೆ. ಗಿಲ್ಲಿಗೆ ವೋಟ್ ಮಾಡಿ ಎಂದು ಮಂಡ್ಯ ಜಿಲ್ಲೆ ಮಳವಳ್ಳಿ ಕ್ಷೇತ್ರದ ಶಾಸಕ ನರೇಂದ್ರ ಸ್ವಾಮಿ ಜನರಲ್ಲಿ ಮನವಿ ಮಾಡಿದ್ದಾರೆ. ಟಾಸ್ಕ್‌ಗಳ ವಿಚಾರದಲ್ಲಿ ಗಿಲ್ಲಿ ಪ್ರಬಲ ಸ್ಪರ್ಧಿ ಏನೂ ಅಲ್ಲ. ಆದರೆ ಮಾತಿನಲ್ಲೇ ಎಲ್ಲರನ್ನು ಮರಳು ಮಾಡಿ ಮೋಡಿ ಮಾಡುತ್ತಿರುವುದು ಗೊತ್ತೇಯಿದೆ. ತಮ್ಮ ಕಾಮಿಡಿ ಟೈಮಿಂಗ್ ಮೂಲಕ ಕಮಾಲ್ ಮಾಡಿದ್ದಾರೆ. ಬರೀ ಮಾತಲ್ಲೇ ಎದುರಾಳಿಗಳನ್ನೆಲ್ಲಾ ಎದುರಿಸಿ ಗೆದ್ದಿದ್ದಾರೆ.

ಸದ್ಯ ಫಿನಾಲೆಗೆ 6 ಮಂದಿ ಎಂಟ್ರಿ ಕೊಟ್ಟಿದ್ದಾರೆ. ಧ್ರುವಂತ್ ಮಿಡ್ ವೀಕ್ ಎಲಿಮಿನೇಷನ್ ಆಗಿ ಹೊರ ಬಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ಕ್ರೇಜ್ ಹೆಚ್ಚುತ್ತಲೇ ಇದೆ. ಈಗಾಗಲೇ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್ ಸಂಪಾದಿಸಿದ್ದಾರೆ. ಬಿಗ್‌ಬಾಸ್ ಮನೆಗೆ ಹೋಗುವ ಮುನ್ನ ಗಿಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ 1 ಲಕ್ಷ ಫಾಲೋವರ್ಸ್ ಮಾತ್ರ ಇದ್ದರು. ಆದರೆ ಈಗ ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಸಿಕ್ಕಿದ್ದಾರೆ. ಇನ್ನೊಂದು ತಿಂಗಳಲ್ಲಿ 2 ಮಿಲಿಯನ್ ದಾಟಬಹುದು ಎಂದು ಕೆಲವರು ಅಂದಾಜಿಸುತ್ತಿದ್ದಾರೆ. ಇದೀಗ ಕಲರ್ಸ್ ಕನ್ನಡ ವಾಹಿನಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಗಿಲ್ಲಿ ದರ್ಬಾರ್ ಜೋರಾಗಿದೆ.
ಎಪಿಸೋಡ್‌ಗೆ ಸಂಬಂಧಿಸಿದಂತೆ ಕಲರ್ಸ್ ಕನ್ನಡ ಸ್ಪೆಷಲ್ ಪ್ರೋಮೊಗಳನ್ನು ಹಂಚಿಕೊಳ್ಳುತ್ತದೆ. ಅದರಲ್ಲಿ ಗಿಲ್ಲಿ ಕಾಣಿಸಿಕೊಂಡ ಪ್ರೋಮೊಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಇತ್ತೀಚೆಗೆ ಮನೆ ಒಳಗೆ ಒಂದಷ್ಟು ಅಭಿಮಾನಿಗಳು ಹೋಗಿದ್ದರು. ಅವರ ಬಳಿಕ ವೋಟ್ ಮಾಡುವಂತೆ ಗಿಲ್ಲಿ ಮನವಿ ಮಾಡಿದ್ದರು. ಅದಕ್ಕೆ ಸಂಬಂಧಿಸಿದ ಪ್ರೋಮೊ 1 ಮಿಲಿಯನ್(10 ಲಕ್ಷ) ಲೈಕ್ಸ್ ಗಿಟ್ಟಿಸಿದೆ. ಅದು ಕೂಡ ಕೆಲವೇ ಗಂಟೆಗಳಲ್ಲಿ ಅನ್ನೋದು ವಿಶೇಷ. ಈ ಹಿಂದೆ ಫ್ಯಾಮಿಲಿ ರೌಂಡ್‌ನಲ್ಲಿ ಗಿಲ್ಲಿ ತಂದೆ, ತಾಯಿ ಮನೆ ಒಳಗೆ ಹೋಗಿದ್ದರು. ಅದಕ್ಕೆ ಸಂಬಂಧಿಸಿದ ಪ್ರೋಮೊ ಸಹ 1 ಮಿಲಿಯನ್ ಲೈಕ್ಸ್ ಸಾಧಿಸಿತ್ತು. ಗಿಲ್ಲಿ ಕ್ರೇಜ್ ಹೇಗಿದೆ ಎನ್ನುವುದು ಇದರಲ್ಲೇ ಗೊತ್ತಾಗುತ್ತೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಈ ಹಿಂದೆ ಸುದೀಪ್ ಅವರನ್ನು ಗಿಲ್ಲಿ ಇಮಿಟೇಟ್ ಮಾಡಿದ್ದ ಪ್ರೋಮೊ ಕೂಡ ಸಖತ್ ಸದ್ದು ಮಾಡಿತ್ತು. ಅದು ಕೂಡ 1 ಮಿಲಿಯನ್ ಲೈಕ್ಸ್ ಗಿಟ್ಟಿಸಿತ್ತು. ಅಂದರೆ ಗಿಲ್ಲಿಯ 3 ಪ್ರೋಮೊಗಳು 1 ಮಿಲಿಯನ್ ಲೈಕ್ಸ್ ಗಿಟ್ಟಿಸಿದಂತಾಗಿದೆ. ನಿಜಕ್ಕೂ ಇದು ಅಚ್ಚರಿ ಮೂಡಿಸುವುದು ಸಹಜ. ಗಿಲ್ಲಿ ಕ್ರೇಜ್ ಯಾವ ಮಟ್ಟಿಗಿದೆ ಎನ್ನುವುದು ಇದರಲ್ಲೇ ಗೊತ್ತಾಗ್ತಿದೆ. ಗಿಲ್ಲಿ ಹೈಲೆಟ್ ಆಗುವ ಪ್ರೊಮೊಗಳನ್ನು ಅಭಿಮಾನಿಗಳು ಪದೇ ಪದೆ ವೀಕ್ಷಿಸುತ್ತಾರೆ. ಹಾಗಾಗಿ ಭರ್ಜರಿ ವೀವ್ಸ್, ಲೈಕ್ಸ್ ಕೂಡ ಸಿಗುತ್ತಿದೆ.
ಗಿಲ್ಲಿ ಬಿಗ್‌ಬಾಸ್ ಟ್ರೋಫಿ ಗೆಲ್ಲಬೇಕು ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ. 'ಡೆವಿಲ್' ಚಿತ್ರದಲ್ಲಿ ಗಿಲ್ಲಿ ನಟಿಸಿದ್ದು ಗೊತ್ತೇಯಿದೆ. ಅವರು ನಟನೆಯ ಮತ್ತೆರಡು ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಬಿಗ್‌ಬಾಸ್ ಮನೆಯಿಂದ ಹೊರಬಂದ ಬಳಿಕ ಸಾಕಷ್ಟು ಅವಕಾಶಗಳು ಸಿಗುವುದರಲ್ಲಿ ಎರಡು ಮಾತಿಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿರುವ 1 ಮಿಲಿಯನ್ ಫಾಲೋವರ್ಸ್ ಕಾರಣಕ್ಕೆ ಮುಂದೆ ಗಿಲ್ಲಿ ಒಳ್ಳೆ ಆದಾಯ ಸಂಪಾದಿಸಬಹುದು ಎನ್ನುವ ಚರ್ಚೆ ಶುರುವಾಗಿದೆ.
Credit: Filmibeat
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications