ನ್ಯಾಟೋ ಸಭೆ ಬೆನ್ನಲ್ಲೇ ಚೀನಾಗೆ ವಾರ್ನಿಂಗ್ ಕೊಟ್ಟ ಬೈಡನ್!
ವಾಶಿಂಗ್ಟನ್, ಮಾರ್ಚ್ 25: ಉಕ್ರೇನ್ ವಿರುದ್ಧ ನಡೆಸುತ್ತಿರುವ ಆಕ್ರಮಣದಲ್ಲಿ ಬೆಂಬಲ ನೀಡಿದರೆ ಚೀನಾ ಕೂಡ ಅದರ ಆರ್ಥಿಕ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ನೀಡಿದ್ದಾರೆ.
ರಷ್ಯಾಕ್ಕೆ ಚೀನಾ ನೆರವು ನೀಡುವ ಸಾಧ್ಯತೆಯ ಕುರಿತು, ಬೈಡನ್ ಅವರು ಕಳೆದ ವಾರ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಈ ವಿಷಯದ ಬಗ್ಗೆ "ನೇರವಾಗಿ ಸಂಭಾಷಣೆ" ನಡೆಸಿರುವುದಾಗಿ ಹೇಳಿದರು.
ಗುರುವಾರ ಬ್ರಸೆಲ್ಸ್‌ನ ನ್ಯಾಟೋ ಪ್ರಧಾನ ಕಛೇರಿಯಲ್ಲಿ ನಡೆದ ನ್ಯಾಟೋ ಶೃಂಗಸಭೆ ಮತ್ತು ಗ್ರೂಪ್ ಆಫ್ ಸೆವೆನ್ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಕುರಿತು ಟೀಕೆ ಮಾಡಿದರು. "ಯಾವುದೇ ಬೆದರಿಕೆಗಳನ್ನು ಹಾಕುವುದಿಲ್ಲ" ಆದರೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ "ರಷ್ಯಾಗೆ ಸಹಾಯ ಮಾಡುವುದರ ಪರಿಣಾಮಗಳನ್ನು ಅರ್ಥಮಾಡಿಕೊಂಡಿದ್ದಾರೆ" ಎಂದು ಸ್ಪಷ್ಟಪಡಿಸಿದರು.

ಪಶ್ಚಿಮದ ನಂಟು ಉಳಿಸಿಕೊಳ್ಳಬೇಕೋ ಬೇಡವೋ?:
ರಷ್ಯಾದ ನಡುವಳಿಕೆಯನ್ನು ಉಲ್ಲೇಖಿಸಿದ ಜೋ ಬೈಡನ್ ಚೀನಾದ ಕುರಿತು ಮಾತನಾಡಿದರು. ಪಶ್ಚಿಮದ ರಾಷ್ಟ್ರಗಳೊಂದಿಗೆ ತನ್ನ ವ್ಯಾಪಾರವನ್ನು ಅಭಿವೃದ್ಧಿಪಡಿಸಿಕೊಳ್ಳುವುದಕ್ಕೆ ಚೀನಾ ಮುಂದಾಗಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಅಡ್ಡಿ ಆತಂಕಗಳು ಇರಬಾರದು. ಭವಿಷ್ಯದಲ್ಲಿ ಉತ್ತಮ ಸಂಬಂಧ ಹಾಗೂ ವ್ಯಾಪಾರವನ್ನು ಉಳಿಸಿಕೊಳ್ಳುವುದು ಚೀನಾಗೆ ಮುಖ್ಯವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಒಂದು ವೇಳೆ ಕ್ಸಿ ಜಿನ್ ಪಿಂಗ್ ರಷ್ಯಾಗೆ ಬೆಂಬಲವನ್ನು ಒದಗಿಸಿದರೆ, ತನ್ನನ್ನು ತಾನೇ ಅಪಾಯಕ್ಕೆ ಸಿಲುಕಿಸಿದಂತೆ ಆಗುತ್ತದೆ ಎಂದು ಬೈಡನ್ ಎಚ್ಚರಿಕೆ ನೀಡಿದ್ದಾರೆ.
ರಷ್ಯಾಕ್ಕಿಂತ ಚೀನಾಗೆ ಪಶ್ಚಿಮದ ನಂಟು ನಿಕಟ:
ಭವಿಷ್ಯದ ಆರ್ಥಿಕತೆಯನ್ನು ನೋಡುವುದಾದರೆ ರಷ್ಯಾಗಿಂತ ಚೀನಾಗೆ ಪಶ್ಚಿಮದ ಸಂಬಂಧವು ತೀರಾ ನಿಕಟವಾಗಿರುತ್ತದೆ. ಹೀಗೆ ಇರುವಾಗ ಕ್ಸಿ ಜಿನ್ ಪಿಂಗ್ ತಾವು ಮುಂದುವರಿಯುವ ಮೊದಲು ಗಂಭೀರವಾಗಿ ಆಲೋಚಿಸಬೇಕಾಗುತ್ತದೆ. ಒಂದು ವೇಳೆ ನೀವು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾಗೆ ಬೆಂಬಲ ನೀಡುವುದೇ ಆದರೆ, ಅದರ ಆರ್ಥಿಕ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಜೋ ಬೈಡನ್ ಚೀನಾಗೆ ವಾರ್ನಿಂಗ್ ಪಾಸ್ ಮಾಡಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ಅನ್ನು ಯುರೋಪಿನ "ಬ್ರೆಡ್ ಬಾಸ್ಕೆಟ್" ಎಂದು ಕರೆದ ಬೈಡೆನ್, ಆಹಾರದ ಕೊರತೆಯು "ನೈಜ" ಎಂದು ಹೇಳಿದರು. NATO ತುರ್ತು ಸಭೆಯ ನಂತರ, "ನಿರ್ಬಂಧಗಳನ್ನು ಕೇವಲ ರಷ್ಯಾದ ಮೇಲೆ ವಿಧಿಸಲಾಗಿಲ್ಲ. ಇದು ಯುರೋಪಿಯನ್ ರಾಷ್ಟ್ರಗಳು ಮತ್ತು ನಮ್ಮ ದೇಶವನ್ನು ಒಳಗೊಂಡಂತೆ ಹಲವಾರು ದೇಶಗಳ ಮೇಲೆ ಪರಿಣಾಮ ಬೀರುತ್ತಿದೆ," ಎಂದರು.
ಚೀನಾಗೆ ಎಚ್ಚರಿಕೆ ನೀಡಿದ ನ್ಯಾಟೋ:
"ವಿಶ್ವದ ಇತರ ಭಾಗಗಳೊಂದಿಗೆ ಸೇರಿ ಉಕ್ರೇನ್ ವಿರುದ್ಧದ ಕ್ರೂರ ಯುದ್ಧವನ್ನು ಖಂಡಿಸಬೇಕು. ರಷ್ಯಾವನ್ನು ಆರ್ಥಿಕವಾಗಿ ಅಥವಾ ಮಿಲಿಟರಿಯಾಗಿ ಬೆಂಬಲಿಸಬಾರದು ಎಂಬುದು ಚೀನಾಕ್ಕೆ ಸಂದೇಶವಾಗಿದೆ," ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಹೇಳಿದ್ದಾರೆ. "ನಾವು ಒಂದು ಪೀಳಿಗೆಯಲ್ಲಿ ಅತಿದೊಡ್ಡ ಭದ್ರತಾ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ, ನಮ್ಮ ಮೈತ್ರಿಯನ್ನು ಬಲವಾಗಿ ಮತ್ತು ನಮ್ಮ ಜನರನ್ನು ಸುರಕ್ಷಿತವಾಗಿರಿಸಲು ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ," ಎಂದು ತಿಳಿಸಿದರು.
ಉಕ್ರೇನ್ ಬತ್ತಳಿಕೆಗೆ ನ್ಯಾಟೋ ಅಸ್ತ್ರ:
ರಷ್ಯಾದ ಆಕ್ರಮಣಕ್ಕೆ ಪ್ರತ್ಯುತ್ತರವಾಗಿ ಉಕ್ರೇನ್ ಪರವಾಗಿ ನ್ಯಾಟೋ ಎಲ್ಲಾ ರಕ್ಷಣಾ ಯೋಜನೆಗಳನ್ನು ಸಕ್ರಿಯಗೊಳಿಸಿದೆ ಎಂದು ನ್ಯಾಟೋ ಹೇಳಿಕೆಯಲ್ಲಿ ತಿಳಿಸಿದೆ. "40,000 ಪಡೆಗಳನ್ನು ಪೂರ್ವದಲ್ಲಿ ನಿಯೋಜನೆ ಮಾಡಲಾಗಿದೆ. ಮಿತ್ರ ರಾಷ್ಟ್ರಗಳೆಲ್ಲವೂ ಸಹಾಯ ಮಾಡಲಿದೆ. ನಾವು ಬಲ್ಗೇರಿಯಾ, ಹಂಗೇರಿ, ರೊಮೇನಿಯಾ ಮತ್ತು ಸ್ಲೋವಾಕಿಯಾದಲ್ಲಿ ನಾಲ್ಕು ಹೆಚ್ಚುವರಿ ಯುದ್ಧ ಪಡೆಯನ್ನು ನಿಯೋಜನೆ ಮಾಡುತ್ತೇವೆ. ಮಿತ್ರರಾಷ್ಟ್ರಗಳ ಸುರಕ್ಷತೆ ಮತ್ತು ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕ್ರಮಗಳು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಅಣು ಬಾಂಬ್ ಅನ್ನು ಎದುರಿಸಲು ಬೇಕಾದ ರಕ್ಷಣಾತ್ಮಕ ಕ್ರಮವನ್ನು ಕೂಡಾ ಕೈಗೊಳ್ಳಲಾಗುವುದು. ಸೈಬರ್ ದಾಳಿಯ ಸಂದರ್ಭದಲ್ಲಿ ಪರಸ್ಪರ ಬೆಂಬಲ ಒದಗಿಸುತ್ತೇವೆ. ರಾಸಾಯನಿಕ, ಜೈವಿಕ, ವಿಕಿರಣಶಾಸ್ತ್ರ ಮತ್ತು ಪರಮಾಣು ಬೆದರಿಕೆಗಳನ್ನು ಎದುರಿಸಲು ಸಿದ್ಧವಾಗಿದ್ದೇವೆ ಎಂದು ನ್ಯಾಟೋ ಹೇಳಿದೆ.
Recommended Video
-
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election












Click it and Unblock the Notifications