ನಮ್ಮದೇ ಗೆಲುವು ಎಂದ ಟ್ರಂಪ್: ಭಾಷಣದ ಮುಖ್ಯಾಂಶಗಳು

ವಾಷಿಂಗ್ಟನ್, ನವೆಂಬರ್ 4: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಇನ್ನೂ ಸ್ಪಷ್ಟವಾಗಿಲ್ಲ. ಅದಕ್ಕೂ ಮುನ್ನ ಡೊನಾಲ್ಡ್ ಟ್ರಂಪ್ ತಮ್ಮ ರಿಪಬ್ಲಿಕನ್ ಪಕ್ಷದ ಗೆಲುವನ್ನು ಹೇಳಿಕೊಂಡಿದ್ದು, ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿರುವುದಾಗಿ ತಿಳಿಸಿದ್ದಾರೆ.

ಎಲೆಕ್ಟೊರಲ್ ಮತಗಳಲ್ಲಿ ಹಿನ್ನಡೆ ಅನುಭವಿಸಿರುವ ಟ್ರಂಪ್, ಮಾಧ್ಯಮ ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ತಾವೇ ಗೆಲ್ಲಬೇಕು. ಗೆಲ್ಲದಿದ್ದರೆ ಸುಪ್ರೀಂಕೋರ್ಟ್‌ಗೆ ಹೋಗಿ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ. ಅವರ ಭಾಷಣದ ಕೆಲವು ಮುಖ್ಯಾಂಶಗಳು ಇಲ್ಲಿವೆ.

US Elections: Donald Trump Accuses Sad Group Of People Trying To Stop Disenfranchise People

* ಲಕ್ಷ ಲಕ್ಷಗಟ್ಟಲೆ ಜನರು ನಮಗೆ ಮತ ಹಾಕಿದ್ದಾರೆ. ಎಲ್ಲರಿಗೂ ಧನ್ಯವಾದಗಳು.

* ಈ ಜನರನ್ನು ತಡೆಯಲು ಕೆಟ್ಟ ಜನರ ಗುಂಪೊಂದು ಪ್ರಯತ್ನಿಸುತ್ತಿದೆ.

* ನಾವು ಗೆಲುವಿನ ಸನಿಹದಲ್ಲಿದ್ದೇವೆ. ಹೆಚ್ಚು ಕಡಿಮೆ ನಾವು ಈಗಾಗಲೇ ಗೆದ್ದಾಗಿದೆ.

* ನಾವು ಖಂಡಿತವಾಗಿಯೂ ಸುಪ್ರೀಂಕೋರ್ಟ್‌ಗೆ ಹೋಗುತ್ತೇವೆ. ಬೆಳಗಿನ ಜಾವ ನಾಲ್ಕು ಗಂಟೆಗೆ ಪವಾಡವೆಂಬಂತೆ ಮತಪತ್ರಗಳು ಇದ್ದಕ್ಕಿದ್ದಂತೆ ಸಿಕ್ಕಿ ಅದು ಅವರ ಲೆಕ್ಕಕ್ಕೆ ಹೋಗುತ್ತದೆ. ಇದು ಅಮೆರಿಕ ಹಾಗೂ ಅಮೆರಿಕದ ಲಕ್ಷಾಂತರ ಜನರಿಗೆ ಅವಮಾನಕರ.

* ನಾವು ಇನ್ನೂ ಅನೇಕ ರಾಜ್ಯಗಳಲ್ಲಿ ಗೆಲ್ಲುತ್ತಿದ್ದೇವೆ. ಅದರ ಬಗ್ಗೆ ಘೋಷಣೆ ಮಾಡಬೇಕಷ್ಟೇ. ಆದರೆ ಈಗ ಇದ್ದಕ್ಕಿದ್ದಂತೆ ಈ ವಂಚನೆ ನಡೆದಿದೆ. ಅಮೆರಿಕದ ಜನರ ಮೇಲೆ ವಂಚನೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ.

* ಫ್ಲೋರಿಡಾದಲ್ಲಿಯೂ ನಾವು 3,00,000ಕ್ಕೂ ಅಧಿಕ ಮತಗಳಿಂದ ಗೆದ್ದಿದ್ದೇವೆ.

* ಪೆನ್ಸಿಲ್ವೇನಿಯಾದಲ್ಲಿ 6,90,000ಕ್ಕೆ ಹೆಚ್ಚು ಮತಗಳಿಂದ ಮುನ್ನಡೆಯಲ್ಲಿದ್ದೇವೆ. ಇದು ಭಾರಿ ಅಂತರ.

* ಈಗ ನಾವು ಅವರಿಗಿಂತ ಸಾಕಷ್ಟು ಮುನ್ನಡೆ ಹೊಂದಿದ್ದೇವೆ. ನಾವು ಖಂಡಿತಾ ಗೆಲ್ಲುತ್ತೇವೆ. ಇನ್ನೂ ಫಲಿತಾಂಶ ಬರುತ್ತಿರುವ ರಾಜ್ಯಗಳಲ್ಲಿ ಬಹಳ ಮುನ್ನಡೆ ಸಾಧಿಸಿದ್ದೇವೆ. ನಮ್ಮೊಂದಿಗೆ ಸರಿಸಮನಾಗಿ ಬರಲು ಅವರಿಗೆ ಸಾಧ್ಯವೇ ಇಲ್ಲ.

* ನಾವು ಸಂಪೂರ್ಣ ಗೆಲುವು ಪಡೆಯಲು ಮತ್ತು ಅದರ ಸಂಭ್ರಮಾಚರಣೆಗೆ ಸಿದ್ಧರಾಗಿದ್ದೆವು. ಆದರೆ ಇದ್ದಕ್ಕಿದ್ದಂತೆ ಏನೋ ನಡೆಯಿತು. ಇದರ ಮೂಲಕ ಗೆಲ್ಲಲು ಅವರಿಗೆ ನಾವು ಬಿಡುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+