Get Updates
Get notified of breaking news, exclusive insights, and must-see stories!

ಎಚ್-1ಬಿ ವೀಸಾ ನಿರ್ಬಂಧ: ನ್ಯಾಯಾಲಯದಲ್ಲೂ ಭಾರತದ ಉದ್ಯೋಗಿಗಳಿಗೆ ಹಿನ್ನಡೆ

ವಾಷಿಂಗ್ಟನ್, ಸೆಪ್ಟೆಂಬರ್ 18: ಎಚ್‌1ಬಿ ವಿಶೇಷ ಉದ್ಯೋಗ ವೀಸಾದಡಿ ವಿದೇಶಿ ಪ್ರಜೆಗಳು ಈ ವರ್ಷದ ಅಂತ್ಯದವರೆಗೂ ಅಮೆರಿಕ ಪ್ರವೇಶಿಸುವುದನ್ನು ನಿಷೇಧಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿದ್ದ ಭಾರತದ ಪ್ರಜೆಗಳಿಗೆ ಹಿನ್ನಡೆಯಾಗಿದೆ.

ಈ ಆದೇಶ ಪ್ರಶ್ನಿಸಿ ಭಾರತ ಮೂಲದ 169 ಮಂದಿ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಇದರ ವಿಚಾರಣೆ ನಡೆಸಿದ ಭಾರತ-ಅಮೆರಿಕದ ನ್ಯಾಯಾಧೀಶರು ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿ ಹೊಂದಿರುವ ವಿಶೇಷ ಉದ್ಯೋಗಗಳಿಗೆ ವಿದೇಶಿ ನೌಕರರನ್ನು ನೇಮಿಸಿಕೊಳ್ಳಲು ಅಮೆರಿಕದ ಕಂಪೆನಿಗಳಿಗೆ ಎಚ್-1ಬಿ ವಲಸೆಯೇತರ ವೀಸಾದಡಿ ಅವಕಾಶ ನೀಡಲಾಗುತ್ತದೆ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ಸಾವಿರಾರು ಮಂದಿಯನ್ನು ತಂತ್ರಜ್ಞಾನ ಕಂಪೆನಿಗಳು ನೇಮಿಸಿಕೊಳ್ಳುವುದರಿಂದ ಅವು ಈ ವೀಸಾವನ್ನು ಹೆಚ್ಚು ಅವಲಂಬಿಸಿವೆ.

US Court Rejects Appeal By 169 Indians Against Temporary Ban On H-1B Visa Holders

ಆದರೆ ಈ ವೀಸಾದಡಿ ವಿದೇಶಿಗರ ಮೇಲೆ ನಿರ್ಬಂಧ ವಿಧಿಸುವ ಆದೇಶದಿಂದ ಭಾರತದ ಉದ್ಯೋಗಿಗಳಿಗೆ ಹಿನ್ನಡೆಯಾಗಿದೆ. ಹೀಗಾಗಿ ಕೊಲಂಬಿಯಾ ಜಿಲ್ಲೆಯ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಲಾಗಿತ್ತು. ರಜೆ ನಿಮಿತ್ತ ಭಾರತಕ್ಕೆ ಮರಳಿದ್ದ ಪ್ರಜೆಗಳು ತಮ್ಮ ಉದ್ಯೋಗಕ್ಕೆ ವಾಪಸಾಗಲು ಈ ಆದೇಶದಿಂದ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನಿಷೇಧವನ್ನು ತೆರವುಗೊಳಿಸುವಂತೆ ಕೋರಿದ್ದರು. ಭಾರತದ ಉದ್ಯೋಗಿಗಳ ಮನವಿಯನ್ನು ಪರಿಶೀಲಿಸಿದ ಭಾರತ ಮೂಲದವರೇ ಆದ ನ್ಯಾಯಾಧೀಶ ಅಮಿತ್ ಪಿ ಮೆಹ್ತಾ ಅದನ್ನು ವಜಾಗೊಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+