ಹೆಲಿಕಾಫ್ಟರ್ ಕ್ಯಾಬ್ ಸೇವೆ ಆರಂಭಿಸಿದ ಊಬರ್

ವಾಷಿಂಗ್ಟಂನ್, ಅಕ್ಟೋಬರ್ 05: ವಿಶ್ವದ ಅತಿದೊಡ್ಡ ಟ್ಯಾಕ್ಸಿ ಸೇವೆ ಸಂಸ್ಥೆ ಊಬರ್ ನೆಲದ ಮೇಲಿನ ತಮ್ಮ ಸೇವೆಯನ್ನು ಆಕಾಶಕ್ಕೂ ವಿಸ್ತರಿಸಿದೆ.

ಕಾರು ಟ್ಯಾಕ್ಸಿ ಸೇವೆಗೆ ಜನಪ್ರಿಯವಾಗಿರುವ ಊಬರ್ ಈಗ ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆಯನ್ನೂ ಪ್ರಾರಂಭಿಸಿದೆ. ಆದರೆ ಈ ಹೆಲಿಕಾಫ್ಟರ್ ಊಬರ್ ಸೇವೆಯನ್ನು ಬಳಸಲು ನೀವು ಅಮೆರಿಕದ ಮ್ಯಾನ್‌ಹಟನ್‌ಗೆ ಹೋಗಬೇಕಷ್ಟೆ!

ಹೌದು ಪ್ರಸ್ತುತ ಈ ಹೆಲಿಕಾಫ್ಟರ್ ಟ್ಯಾಕ್ಸಿ ಸೇವೆಯನ್ನು ಅಮೆರಿಕದಲ್ಲಿ ಮಾತ್ರವೇ ಪ್ರಾರಂಭಿಸಲಾಗಿದ್ದು, ಮ್ಯಾನ್‌ಹಟನ್ ನಲ್ಲಿ ಊಬರ್‌ನ ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆ ಲಭ್ಯವಿದೆ. ಸೇವೆ ಪ್ರಾರಂಭವಾಗಿ ಕೆಲವು ದಿನಗಳು ಈಗಾಗಲೇ ಕಳೆದಿವೆ.

Uber Starts Helicopter Taxi Service

ಈ ಮೊದಲು ಕೆಲವು ಆಯ್ದ ಗ್ರಾಹಕರಿಗಷ್ಟೆ ಹೆಲಿಕಾಫ್ಟರ್ ಟ್ಯಾಕ್ಸಿ ಸೇವೆಯನ್ನು ಅಮೆರಿಕದಲ್ಲಿ ಊಬರ್ ನೀಡುತ್ತಿತ್ತು, ಆದರೆ ಗುರುವಾರದಿಂದ ಆ ಸೇವೆಯನ್ನು ಅಮೆರಿಕದ ಎಲ್ಲ ಗ್ರಾಹಕರಿಗೂ ಮುಕ್ತ ಮಾಡಲಾಗಿದೆ. ಹೆಲಿಕಾಫ್ಟರ್ ಟ್ಯಾಕ್ಸಿ ಬಳಸಲಿಚ್ಛಿಸುವ, ಜೇಬಿನಲ್ಲಿ ದುಡ್ಡು ಇರುವ ಯಾರು ಬೇಕಾದರೂ ಹೆಲಿಕಾಫ್ಟರ್ ಟ್ಯಾಕ್ಸಿ ಬುಕ್ ಮಾಡಬಹುದಾಗಿದೆ.

ಹೆಲಿಕಾಫ್ಟರ್ ಊಬರ್ ಟ್ಯಾಕ್ಸಿ ಬುಕ್ ಮಾಡಿದವರನ್ನು ಕಾರಿನಲ್ಲಿ ಮ್ಯಾನ್‌ಹಟನ್‌ಗೆ ಕರೆತಂದು ಅಲ್ಲಿಂದ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣಕ್ಕೆ ಕರೆತಂದು ಅಲ್ಲಿಂದ ಹೆಲಿಕಾಪ್ಟರ್ ಟ್ಯಾಕ್ಸಿಯಲ್ಲಿ ಕೂರಿಸಿ ಗಮ್ಯಕ್ಕೆ ಕರೆದುಕೊಂಡು ಹೋಗಲಾಗುತ್ತದೆ.

2023 ರ ವೇಳೆಗೆ ಏರ್‌ಟ್ಯಾಕ್ಸಿ ಸೇವೆಯಲ್ಲಿ ದೊಡ್ಡದಾಗಿ ವಿಸ್ತರಣೆ ಮಾಡುವ ಇಚ್ಛೆ ಊಬರ್‌ಗೆ ಇದೆ. ವಾಯುವಾನ ಆರಂಭಿಸಲು ಸಹ ಊಬರ್ ಚಿಂತಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+