ಚೀನಾದ 24 ಕಂಪೆನಿಗಳನ್ನು ಕಪ್ಪುಪಟ್ಟಿಗೆ ಸೇರಿಸಿದ ಅಮೆರಿಕ
ವಾಷಿಂಗ್ಟನ್, ಆಗಸ್ಟ್ 26: ದಕ್ಷಿಣ ಚೀನಾ ಸಮುದ್ರದ ವಿವಾದಾತ್ಮಕ ಜಲ ಪ್ರದೇಶದಲ್ಲಿ ಕೃತಕ ದ್ವೀಪಗಳನ್ನು ನಿರ್ಮಿಸಿದ ಕಾರ್ಯದಲ್ಲಿ ಭಾಗಿಯಾದ ಎರಡು ಡಜನ್ ಚೀನಾ ಕಂಪೆನಿಗಳು ಮತ್ತು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಅಮೆರಿಕ ಬುಧವಾರ ನಿಷೇಧ ಮತ್ತು ನಿಬಂಧನೆಗಳನ್ನು ಹೇರಿದೆ.
ಚೀನಾದ ನಿರ್ಮಾಣ ದಿಗ್ಗದ ಸಂಸ್ಥೆ ಚೀನಾ ಕಮ್ಯುನಿಕೇಷನ್ ಕನ್‌ಸ್ಟ್ರಕ್ಷನ್ ಕೋ, ದೂರಸಂಪರ್ಕ ಸಂಸ್ಥೆಗಳು ಮತ್ತು ಚೀನಾದ ಹಡಗು ನಿರ್ಮಣ ಸಮೂಹದ ಒಂದು ಘಟಕ ಸೇರಿದಂತೆ ಚೀನಾ ಸರ್ಕಾರಿ ಸ್ವಾಮ್ಯದ 24 ಸಂಸ್ಥೆಗಳನ್ನು ಅಮೆರಿಕ ಕಪ್ಪುಪಟ್ಟಿಗೆ ಸೇರಿಸಿದೆ.
ವಿವಿಧ ದೇಶಗಳು ತಮ್ಮ ಸಾರ್ವಭೌಮತ್ವ ಪ್ರತಿಪಾದಿಸುತ್ತಿರುವ ದಕ್ಷಿಣ ಚೀನಾ ಸಮುದ್ರದ ಭಾಗಗಳಲ್ಲಿ ತನ್ನ ಸೇನಾ ಬಲವನ್ನು ಹೆಚ್ಚಿಸುವ ಚೀನಾದ ವಿರುದ್ಧ ಒತ್ತಡ ಹೆಚ್ಚಿಸುವ ಅಮೆರಿಕದ ಇತ್ತೀಚಿನ ಪ್ರಯತ್ನವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

2013ರಿಂದ ಚೀನಾವು ತನ್ನ ಸ್ವಾಮ್ಯದ ಸಂಸ್ಥೆಗಳನ್ನು ಬಳಸಿಕೊಂಡು ದಕ್ಷಿಣ ಚೀನಾ ಸಮುದ್ರದ 3,000 ಎಕರೆ ವಿವಾದಿತ ಸ್ಥಳದಲ್ಲಿ ಕಟ್ಟಡಗಳನ್ನು ಸ್ಥಾಪಿಸಲು, ಪ್ರಾದೇಶಿಕ ಅಸ್ಥಿರತೆ ಮೂಡಿಸಲು, ತನ್ನ ನೆರೆಹ ದೇಶಗಳ ಸಾರ್ವಭೌಮತ್ವಕ್ಕೆ ಸಂಚಕಾರ ತರಲು ಮತ್ತು ಪರಿಸರ ಹಾನಿಗೆ ಕಾರಣವಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದಾರೆ.












Click it and Unblock the Notifications