ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಅಧಿಕ ಮಕ್ಕಳಿಗೆ ಕೊರೊನಾ: ಆಸ್ಪತ್ರೆಗಳು ಫುಲ್

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 31: ಅಮೆರಿಕಾದಲ್ಲಿ ಮತ್ತೆ ಕೊರೊನಾ ಸ್ಪೋಟಗೊಂಡಿದ್ದು ನಿತ್ಯ 5.8 ಲಕ್ಷ ಪ್ರಕರಣಗಳು ದಾಖಲಾಗುತ್ತಿವೆ. ಅಧಿಕ ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದು ಆಸ್ಪತ್ರೆಗಳಲ್ಲಿ ದಾಖಲಾಗುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ಬಹುತೇಕ ಯುವಕರು ಲಸಿಕೆ ಹಾಕಿಸಿಕೊಳ್ಳದಿರುವುದು ಎಂಬುದು ತಜ್ಞರ ಅಳಲು.

ಅಮೆರಿಕಾ ತನ್ನದೇ ಆದ ದಾಖಲೆಯನ್ನು ಮುರಿದಿದೆ. ಒಂದು ದಿನದಲ್ಲಿ ಒಟ್ಟು 5,80,000 ಹೊಸ ಕೋವಿಡ್ ಪ್ರಕರಣಗಳನ್ನು ದಾಖಲಿಸಿದೆ. "ಇದು ತುಂಬಾ ಹೃದಯವಿದ್ರಾವಕವಾಗಿದೆ" ಎಂದು ಫಿಲಡೆಲ್ಫಿಯಾದ ಮಕ್ಕಳ ಆಸ್ಪತ್ರೆಯ ಸಾಂಕ್ರಾಮಿಕ-ರೋಗ ತಜ್ಞ ಡಾ. ಪಾಲ್ ಆಫಿಟ್ ಹೇಳಿದ್ದಾರೆ. "ಕಳೆದ ವರ್ಷ ಇದನ್ನು ಎದುರಿಸುವುದು ಸಾಕಷ್ಟು ಕಷ್ಟಕರವಾಗಿತ್ತು. ಆದರೆ ಈಗ ಇದನ್ನೆಲ್ಲ ತಡೆಯಲು ಒಂದು ಮಾರ್ಗವನ್ನು ನಾವು ಹೊಂದಿದ್ದೇವೆ. ಅದು ಲಸಿಕೆ ಎನ್ನುವುದು ನಮಗೆ ತಿಳಿದಿದೆ. ಆದರೂ ನಾವು ಅದನ್ನು ನಿರ್ಲಕ್ಷಿಸುತ್ತೇವೆ" ಎಂದಿದ್ದಾರೆ.

ಡಿಸೆಂಬರ್ 22-28 ರ ನಡುವೆ ದಿನಕ್ಕೆ ಸರಾಸರಿ 378 ಮಕ್ಕಳು 17 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನವರು ಕೊರೊನಾವೈರಸ್‌ನೊಂದಿಗೆ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಇದು ಅದರಿಂದಿನ ವಾರಕ್ಕಿಂತ ಶೇಕಡಾ 66 ರಷ್ಟು ಹೆಚ್ಚಳವಾಗಿದೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ವರದಿ ಮಾಡಿದೆ. ಡಿಸೆಂಬರ್‌ನಲ್ಲಿ ಒಂದೇ ವಾರದಲ್ಲಿ ದಿನಕ್ಕೆ ಸರಾಸರಿ 10,200 ಜನರು ಎಲ್ಲಾ ವಯಸ್ಸಿನವರು ದಾಖಲಾಗಿದ್ದಾರೆ. ಅನೇಕ ವೈದ್ಯರು ಹೇಳುವಂತೆ ಡೆಲ್ಟಾ ಉಲ್ಬಣದ ಸಮಯದಲ್ಲಿ ಯುವಕರು ಬೇಸಿಗೆಯಲ್ಲಿ ಕಡಿಮೆ ಅನಾರೋಗ್ಯವನ್ನು ಹೊಂದಿದ್ದರು ಎಂದಿದ್ದಾರೆ.

Record surge in kids hospitalisation as US logs new high of 5.8 lakh daily Covid cases
Omicron ನಡುವೆ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತುರುವುದರಿಂದ ಇದು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಶಾಲೆಗಳು ಮತ್ತು ಇತರ ಪ್ರದೇಶಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವುದರಿಂದ ಮುಂಬರುವ ವಾರಗಳಲ್ಲಿ ತೀವ್ರ ಅಡೆತಡೆಗಳಿಗೆ ಸಿದ್ಧರಾಗುವಂತೆ ಅಮೆರಿಕಾ ಆರೋಗ್ಯ ತಜ್ಞರು ಅಮೆರಿಕನ್ನರನ್ನು ಎಚ್ಚರಿಸಿದ್ದಾರೆ.

ಅಮೆರಿಕಾದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾದ ಬೆನ್ನಲ್ಲೆ ಈ ಎಚ್ಚರಿಕೆ ಬಂದಿದೆ. ಆದರೆ ಫೆಡರಲ್ ಅಧಿಕಾರಿಗಳು ಹೆಚ್ಚಿನ ಪ್ರಯಾಣ ಎಚ್ಚರಿಕೆಗಳನ್ನು ನೀಡಿದ್ದಾರೆ. ಮುಂದಿನ ವಾರ 12 ರಿಂದ 15 ವರ್ಷ ವಯಸ್ಸಿನವರಿಗೆ ಬೂಸ್ಟರ್ ಶಾಟ್‌ಗಳನ್ನು ಅಧಿಕೃತಗೊಳಿಸಲಾಗುವದು ಎಂದು ವರದಿಯಾಗಿದೆ. ಅಮೆರಿಕದಲ್ಲಿ ಪ್ರತಿದಿನ ಸರಿಸುಮಾರು 290,000 ಕ್ಕೂ ಹೆಚ್ಚು ಹೊಸ ಸೋಂಕುಗಳು ವರದಿಯಾಗುತ್ತಿವೆ ಎಂದು ರಾಯಿಟರ್ಸ್ ಲೆಕ್ಕಾಚಾರವು ತೋರಿಸಿದೆ. ಮೇರಿಲ್ಯಾಂಡ್, ಓಹಿಯೋ ಮತ್ತು ವಾಷಿಂಗ್ಟನ್, D.C. ಹೀಗೆ ಒಟ್ಟಾರೆ US COVID-19 ಆಸ್ಪತ್ರೆಗೆ ದಾಖಲಾದ ಪ್ರಕರಣಗಳು ಶೇಕಡಾ 27 ರಷ್ಟಿದೆ.

Record surge in kids hospitalisation as US logs new high of 5.8 lakh daily Covid cases
ಹೀಗಾಗಿ "ಈ ದೇಶದಲ್ಲಿ ಪ್ರಕರಣಗಳ ಸಂಖ್ಯೆಯು ಇನ್ನೂ ಹೆಚ್ಚಾಗುವುದನ್ನು ನಾವು ನೋಡಲಿದ್ದೇವೆ, ದೈನಂದಿನ ಜೀವನವನ್ನು ನಿರ್ವಹಿಸುವಲ್ಲಿ ನಾವು ಕಷ್ಟಪಡುತ್ತೇವೆ" ಎಂದು ಮಿನ್ನೇಸೋಟ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗ ತಜ್ಞ ಡಾ. ಮೈಕೆಲ್ ಓಸ್ಟರ್‌ಹೋಮ್ MSNBC ಗೆ ತಿಳಿಸಿದ್ದಾರೆ. "ಮುಂದಿನ ತಿಂಗಳು ವೈರಲ್ ಹಿಮಪಾತವಾಗಲಿದೆ. ಇದರಿಂದ ಎಲ್ಲಾ ಸಮಾಜದವರು ಒತ್ತಡಕ್ಕೊಳಗಾಗುತ್ತಾರೆ" ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

English summary
The massive surge in Covid-19 cases in the US is putting children in the hospital in record numbers, as experts warned of an 'Omicron blizzard' in the coming weeks. Experts lament that most of the youngsters are not vaccinated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X