ಪಾಪ್ ಸ್ಟಾರ್ ಜಸ್ಟೀನ್ ಬೀಬರ್ ವಿರುದ್ಧ ಲೈಂಗಿಕ ಕಿರುಕುಳ ಕೇಸ್
ಲಾಸ್ ಏಂಜಲೀಸ್, ಜೂನ್ 22: ಗ್ರ್ಯಾಮಿ ಪ್ರಶಸ್ತಿ ವಿಜೇತ ಪಾಪ್ ಸಿಂಗರ್ ಜಸ್ಟಿನ್ ಬೀಬರ್ ಮತ್ತೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. Judge me on the music ಎಂದು ಮುದ್ದು ಮುಖದ ನಟ, ಖ್ಯಾತ ಗಾಯಕ ಬೀಬರ್ ಮತ್ತೊಮ್ಮೆ ಬೊಬ್ಬಿರಿದಿದ್ದಾರೆ. ಆದರೆ, ನಂಬಲು ಯಾರು ತಯಾರಿಲ್ಲ.
Recommended Video
2014ರಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಮತ್ತೊಮ್ಮೆ ಜೀವ ಪಡೆದುಕೊಂಡಿದೆ. ಆದರೆ, ಬೀಬರ್ ಆರೋಪವನ್ನು ತಳ್ಳಿ ಹಾಕಿದ್ದಾರೆ. ತಮ್ಮ ಹೇಳಿಕೆಗೆ ಪುಷ್ಟಿ ನೀಡಲು ರಸೀತಿ, ಇಮೇಲ್, ಸಾಮಾಜಿಕ ಜಾಲ ತಾಣ ಪೋಸ್ಟ್, ಪತ್ರಿಕಾ ಪ್ರಕಟಣೆ ವಿವರ ಹೀಗೆ ಅನೇಕ ಸಾಕ್ಷಿಗಳನ್ನು ನೀಡಿ, ಅಂಥಾ ಘಟನೆ ನಡೆದೇ ಇಲ್ಲ ಎಂದು ವಾದಿಸಿದ್ದಾರೆ.
ವೇರ್ ಆರ್ ಯೂ ನೌ, ಬಾಯ್ ಫ್ರೆಂಡ್, ಲವ್ ಯುವರ್ ಸೆಲ್ಫ್, ಕಂಪೆನಿ, ಆಸ್ ಲಾಂಗ್ ಆಸ್ ಯು ಲವ್ ಮಿ, ವಾಟ್ ಡೂ ಯೂ ಮೀನ್?, ಬೇಬಿ, ಪರ್ಪಸ್ ಮುಂತಾದ ಟಾಪ್ ಹಿಟ್ ಹಾಡುಗಳನ್ನು ನೀಡಿರುವ ಬೀಬರ್ ಅತ್ಯಂತ ಜನಪ್ರಿಯ ಗಾಯಕರಾಗಿದ್ದಾರೆ.

ಬೀಬರ್ ಮೇಲಿರುವ ಆರೋಪವೇನು?
ಅನಾಮಧೇಯ ಟ್ವಿಟ್ಟರ್ ಖಾತೆ ಮೂಲಕ ಮಹಿಳೆಯೊಬ್ಬರು ಈ ಬಗ್ಗೆ ಮೊದಲಿಗೆ ಸುದ್ದಿ ಹಾಕಿದ್ದಾರೆ. 2014ರ ಮಾರ್ಚ್ 9ರಂದು ಟೆಕ್ಸಾಸ್ ಆಸ್ಟಿನ್ ನ ಫೋರ್ ಸೀಸನ್ಸ್ ಹೋಟೆಲ್ ನಲ್ಲಿ ಈ ಘಟನೆ ನಡೆಯಿತು ಎಂದಿದ್ದಾರೆ. ಸೌಥ್ ಬೈ ಸೌಥ್ ವೆಸ್ಟ್ ಮ್ಯೂಸಿಕ್ ಫೆಸ್ಟಿವಲ್ ಗೆ ಬಂದಿದ್ದ ಬೀಬರ್ ನನಗೆ ಲೈಂಗಿಕ ಕಿರುಕುಳ ನೀಡಿದ ಎಂದು ಆರೋಪಿಸಿದ್ದಾರೆ.

ಗಾಳಿಸುದ್ದಿಯಾದರೆ ಓಕೆ, ಇದು ನಾಟ್ ಓಕೆ
ನನ್ನ ಬಗ್ಗೆ ಗಾಳಿಸುದ್ದಿ ಹಬ್ಬಿಸುವುದು ಕಾಮನ್, ನಾನು ಅದಕ್ಕೆಲ್ಲ ಕೇರ್ ಮಾಡಲ್ಲ, ಆದರೆ, ಲೈಂಗಿಕ ಕಿರುಕುಳ ಆರೋಪ ಮಾಡಿರುವುದು ಸರಿಯಲ್ಲ, ಈ ಬಗ್ಗೆ ನನ್ನ ಪತ್ನಿ, ನನ್ನ ತಂಡ ಹಾಗೂ ವಕೀಲರ ಜೊತೆ ಮಾತನಾಡಿ, ಕಾನೂನು ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ ಎಂದು 26 ವರ್ಷ ವಯಸ್ಸಿನ ಬೀಬರ್ ಹೇಳಿದ್ದಾರೆ. ಆದರೆ, ಈಗ ಆರೋಪ ಮಾಡಿದ ಟ್ವೀಟ್ಸ್ ಕಾಣೆಯಾಗಿದೆ.

ಆ ದಿನ ಯಾರ ಜೊತೆಗಿದ್ದರು ಬೀಬರ್?
ಆರೋಪ ಬಂದಿರುವ ದಿನಾಂಕದಂದು ಅಂದಿನ ಗೆಳತಿ, ಖ್ಯಾತ ಗಾಯಕಿ ಸೆಲೆನಾ ಗೊಮೆಜ್ ಹಾಗೂ ಇನ್ನಿತರ ಸ್ನೇಹಿತರ ಜೊತೆ ಇದ್ದೆ. ಈ ರೀತಿ ಸುಳ್ಳು ಆರೋಪ ಮಾಡುವುದು ಸರಿಯಲ್ಲ, ಆ ಟ್ವೀಟ್ ಮಾಡಿದವರ ಬಗ್ಗೆ ಮಾಹಿತಿ ನೀಡುವಂತೆ ಟ್ವಿಟ್ಟರ್ ಸಂಸ್ಥೆಗೆ ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ.

17 ವರ್ಷಕ್ಕೆ ಮಿತಿ ಮೀರಿದ ಜನಪ್ರಿಯತೆ
17 ವರ್ಷಕ್ಕೆ ಮಿತಿ ಮೀರಿದ ಜನಪ್ರಿಯತೆ ಸುಖದ ಲೋಲುಪತೆಗೆ ಸಿಲುಕಿ ಯುವತಿಯೊಬ್ಬಳಿಗೆ ಗಂಡು ಮಗುವನ್ನು ಕೊಟ್ಟಿದ್ದರು. 'Justin Bieber is the father of my baby' ಎಂದು ಮರಿಯಾ ಯೀಟರ್ ಎಂಬ ಮಹಿಳೆ ನೀಡಿದ ಹೇಳಿಕೆ ಉಲ್ಲೇಖಿಸಿ ಮ್ಯಾಗಜೀನ್ ವೊಂದರಲ್ಲಿ ಮುಖಪುಟ ಲೇಖನ ಅಚ್ಚಾಗಿತ್ತು. ಮಗುವಿನ ಹೆಸರು ಟ್ರಿಸ್ಟೀನ್ ಅಂಟೋನಿ ಮಾರ್ಕ್ ಹೌಸ್ ಯೀಟರ್ ಎಂದು ಹೇಳಲಾಗಿತ್ತು. ಆದರೆ, Judge me on the music!" ಎಂದು ಪ್ರತಿಕ್ರಿಯಿಸಿದ್ದರು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications