ಮಹಿಳೆಯ ಬೆತ್ತಲೆ ಚಿತ್ರ ಅಪ್ ಲೋಡ್; ಹೋಟೆಲ್ ವಿರುದ್ಧ 700 ಕೋಟಿ ರುಪಾಯಿಗೆ ದಾವೆ

ಷಿಕಾಗೋದ ಮಹಿಳೆಯೊಬ್ಬರು ಹಿಲ್ಟನ್ ಹೋಟೆಲ್ ಸಮೂಹದ ಮೇಲೆ $ 100 ಮಿಲಿಯನ್ ದಾವೆ ಹೂಡಿದ್ದಾರೆ. ಆಕೆ ಆ ಹೋಟೆಲ್ ನಲ್ಲಿ ತಂಗಿದ್ದ ವೇಳೆ ಸ್ನಾನ ಮಾಡುವ ಬೆತ್ತಲೆ ವಿಡಿಯೋವನ್ನು ಹಿಡನ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿ, ಅದರ ಫೂಟೇಜ್ ಅನ್ನು ಆಕೆಯ ಹೆಸರಿನಲ್ಲೇ ಹಲವು ಅಶ್ಲೀಲ ವೆಬ್ ಸೈಟ್ ಗಳಿಗೆ ಅಪ್ ಲೋಡ್ ಮಾಡಿದ್ದಾರೆ ಎಂಬುದು ಆರೋಪ.

ಆ ಮಹಿಳೆ ಹೆಸರು ಬಹಿರಂಗವಾಗಿಲ್ಲ. ಆಕೆ ಗಂಭೀರ ಮತ್ತು ಶಾಶ್ವತವಾದ ಮಾನಸಿಕ ಘಾಸಿಯಾಗಿದ್ದು, ಅದಕ್ಕೆ ಆ ಹೋಟೆಲ್ ಸಮೂಹವೇ ಕಾರಣ ಎಂದು ಆರೋಪಿಸಲಾಗಿದೆ. ಗಂಭೀರ ಮಾನಸಿಕ ಹಿಂಸೆ, ಭಾವನಾತ್ಮಕ ಒತ್ತಡ ಹಾಗೂ ವೈದ್ಯಕೀಯ ವೆಚ್ಚ ಇತರ ಹಾನಿಗಳೆಲ್ಲ ಸೇರಿ ಇಷ್ಟು ನಷ್ಟ ಕಟ್ಟಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಅಮೆರಿಕದ ನ್ಯೂಯಾರ್ಕ್ ನ ರಾಜಧಾನಿ ಅಲ್ಬನಿಯಲ್ಲಿರುವ ಹ್ಯಾಂಪ್ಟನ್ ಇನ್ ಅಂಡ್ ಸೂಟ್ಸ್ ಹೋಟೆಲ್ ನಲ್ಲಿ ಆಕೆ 2015ರ ಜುಲೈನಲ್ಲಿ ಉಳಿದುಕೊಂಡಿದ್ದರು. ಆಕೆ ವಕೀಲ ಪದವಿ ಪದೆದ ನಂತರ ಬಾರ್ ಪರೀಕ್ಷೆ ತೆಗೆದುಕೊಳ್ಳುವ ಸಲುವಾಗಿ ಅಲ್ಲಿ ಉಳಿದುಕೊಂಡಿದ್ದರು.

Hidden camera capture while in shower, US woman sues Hilton for $100 million

ಸ್ನಾನ ಮಾಡುವ ವೇಳೆಯಲ್ಲಿ ಹಿಡನ್ ಕ್ಯಾಮೆರಾ ಮೂಲಕ ಬೆತ್ತಲೆಯಾಗಿ ಆಕೆಯ ಚಿತ್ರೀಕರಣ ಮಾಡಲಾಗಿದೆ ಎಂದು ದಾವೆಯಲ್ಲಿ ತಿಳಿಸಲಾಗಿದೆ. ಆದರೆ ಆಕೆಗೆ ಈ ವಿಚಾರ ಸೆಪ್ಟೆಂಬರ್ 2018ರಲ್ಲಿ ತಿಳಿದುಬಂದಿದೆ. ಆಕೆಗೆ ಒಂದು ಇಮೇಲ್ ಬಂದಿದ್ದು, ಇದು ನೀನೇ ಅಲ್ಲವಾ? ಎಂದು ಆಕೆಯ ಹೆಸರಿನಲ್ಲಿ ಪಬ್ಲಿಷ್ ಆಗಿರುವ ವೆಬ್ ಸೈಟ್ ಲಿಂಕ್ ಅನ್ನು ಕಳಿಸಲಾಗಿದೆ.

ಆ ಮೇಲ್ ಮಾಡಿದ ವ್ಯಕ್ತಿ ಬೆದರಿಕೆ ಒಡ್ಡಲು ಆರಂಭಿಸಿದ್ದಾನೆ. ಜತೆಗೆ ಇತರ ಅಶ್ಲೀಲ ವೆಬ್ ಸೈಟ್ ಗಳಿಗೂ ಆ ವಿಡಿಯೋ ಅಪ್ ಲೋಡ್ ಮಾಡಲಾಗಿದೆ. ಜತೆಗೆ ಆ ಮಹಿಳೆಯ ಸಹೋದ್ಯೋಗಿಗಳು, ಸ್ನೇಹಿತರು, ಮಾಜಿ ಸಹಪಾಠಿಗಳಿಗೂ ಆ ವಿಡಿಯೋ ತುಣುಕು ನಕಲಿ ಇ ಮೇಲ್ ಐಡಿ ಮೂಲಕ ಬಂದಿದೆ.

ಆ ನಂತರ ತನಗೆ 2 ಸಾವಿರ ಡಾಲರ್ ನೀಡಬೇಕು, ಆ ಮೇಲೆ ಒಂದು ವರ್ಷ ಪ್ರತಿ ತಿಂಗಳೂ 1 ಸಾವಿರ ಡಾಲರ್ ನೀಡುವಂತೆ ಬೇಡಿಕೆ ಇಡಲಾಗಿದೆ. ಅಷ್ಟೇ ಅಲ್ಲ, ಅದೇ ಸಮಯದಲ್ಲಿ ಅದೇ ಹ್ಯಾಂಪ್ಟನ್ ಇನ್ ರೂಮಿನಲ್ಲಿ ಇತರರನ್ನು ಅದೇ ರೀತಿ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ.

ಇತ್ತೀಚೆಗೆ ಹೋಟೆಲ್ ನ ದುರಸ್ತಿ ಮಾಡಿದೆವು. ಆ ವೇಳೆ ಅಂಥ ಯಾವ ಉಪಕರಣವೂ ದೊರೆತಿಲ್ಲ. ಈ ಬಗ್ಗೆ ಅಧಿಕಾರಿಗಳ ಜತೆಗೆ ಮಾತನಾಡಿ, ಈ ಘಟನೆಗೆ ಕಾರಣವಾದ ವ್ಯಕ್ತಿಗಳನ್ನು ಕಂಡು ಹಿಡಿಯುತ್ತೇವೆ ಎಂದು ಹೋಟೆಲ್ ನ ವಕ್ತಾರ ತಿಳಿಸಿದ್ದಾರೆ.

ಅಂದಹಾಗೆ, $ 100 ಮಿಲಿಯನ್ ಅಂದರೆ $ 10 ಕೋಟಿ. ಅದನ್ನು ಭಾರತೀಯ ರುಪಾಯಿಗಳಲ್ಲಿ ಹೇಳಬೇಕು ಅಂದರೆ ಇವತ್ತಿನ ಮೌಲ್ಯಕ್ಕೆ 700 ಕೋಟಿ ರುಪಾಯಿಗೂ ಹೆಚ್ಚು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+