ಬಗ್ದಾದಿಗೆ ಆತ್ಮಹತ್ಯೆಗೆ ಕಾರಣ ಒಂದು ನಾಯಿ... ಟ್ರಂಪ್ ಹೇಳಿದ ಸತ್ಯಕತೆ

ವಾಷಿಂಗ್ಟನ್, ಅಕ್ಟೋಬರ್ 28: ಮೋಸ್ಟ್ ವಾಂಟೆಡ್ ಉಗ್ರ ಅಬು ಬಕರ್ ಅಲ್- ಬಗ್ದಾದಿ, ಅಮೆರಿಕ ಸೇನಾ ಕಾರ್ಯಾಚರಣೆಯ ವೇಳೆ ಸಾವಿಗೀಡಾಗಿದ್ದು, ಉಗ್ರನ ಹತ್ಯೆಗೆ ಪ್ರಮುಖ ಕಾರಣವಾಗಿದ್ದು ಒಂದು ನಾಯಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಸಿರಿಯಾದ ವಾಯವ್ಯಕ್ಕೆ ಇರುವ ಇದ್ಲಿಬ್ ಪ್ರಾಂತ್ಯದಲ್ಲಿ ಅಮೆರಿಕದ ಸೇನಾ ಕಾರ್ಯಾಚರಣೆ ವೇಳೆ ಬಗ್ದಾದಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆತ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಿಗೆ ಆತನಿಗೆ ಭಯ ಹುಟ್ಟಿಸಿದ್ದು, ಅಮೆರಿಕ ಸೇನೆಯ ಒಂದು ನಾಯಿ.

Donald Trump Remembers courageous Dog, That Killed Most Wanted Bagdhadi

ಇದ್ಲಿದ್ ನಲ್ಲಿ ಸುರಂಗವೊಂದರಲ್ಲಿ ಅವಿತಿದ್ದ ಐಎಸ್ ಐಎಲ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಲೆವಂಟ್) ಮುಖಂಡ ಬಾಗ್ದಾದಿ, ಯನ್ನು ಸುರಂಗದಿಂದ ಹೊರತೆಗೆಯಲು ಅಮೆರಿಕ ಯತ್ನಿಸುತ್ತಿತ್ತು. ಆ ಸುರಂಗದ ಕೊನೆ ಎಲ್ಲಿಗೆ ತಲುಪುತ್ತದೆ ಎಂಬ ಬಗ್ಗೆಯೂ ಅದಕ್ಕೆ ಗೊತ್ತಿರಲಿಲ್ಲ. ಈ ಸಂದರ್ಭದಲ್ಲಿ ಬಾಗ್ದಾದಿಯನ್ನು ಸುರಂಗದೊಳಗೆ ಬಹುದೂರ ಅಟ್ಟಿಸಿಕೊಂಡು ಹೋಗಿ, ಮುಂದೆ ಹೋಗಲು ದಾರಿಯೇ ಇಲ್ಲದಂತೆ ಮಾಡಿ ಅಮೆರಿಕ ಸೇನೆಯ ನಾಯಿಗಳು ಸುತ್ತಿವರಿದಿದ್ದವು. ಇನ್ನು ತಾನು ಬಚಾವಾಗುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ಅರಿತ ಬಾಗ್ದಾದಿ ತನ್ನ ದೇಹಕ್ಕೆ ಸುತ್ತಿಕೊಂಡಿದ್ದ ಆತ್ಮಾಹುತಿ ಬಾಂಬ್ ಅನ್ನು ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ. ಈ ಸಂದರ್ಭದಲ್ಲಿ ಅಮೆರಿಕ ಸೇನೆಯ ಒಂದು ನಾಯಿಗೆ ಗಾಯವಾಗಿದ್ದು, ಕಾರ್ಯಾಚರಣೆಯ ಬಳಿಕ ಅದನ್ನು ರಕ್ಷಿಸಿ, ವಾಪಸ್ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+