ನದಿಗೆ ನುಗ್ಗಿದ ಬೋಯಿಂಗ್ 737 ವಿಮಾನ: 136 ಪ್ರಯಾಣಿಕರ ಕತೆ ಏನಾಯ್ತು?
ಫ್ಲೋರಿಡಾ, ಮೇ 04: 136 ಪ್ರಯಾಣಿಕರನ್ನು ಹೊತ್ತಿದ್ದ ಬೋಯಿಂಗ್ 737 ವಿಮಾನವೊಂದು ಲ್ಯಾಂಡ್ ಆದ ಸಮಯದಲ್ಲಿ ರನ್ ವೇಯಲ್ಲಿ ಸ್ಕಿಡ್ ಆಗಿ ಪಕ್ಕದಲ್ಲಿದ್ದ ನದಿಗೆ ನುಗ್ಗಿದ ಘಟನೆ ಶುಕ್ರವಾರ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ.
ಫ್ಲೋರಿಡಾದ ಜಾಕ್ಸೋನ್ವಿಲ್ಲೆ ಎಂಬಲ್ಲಿ ಸೇಂಟ್ ಜಾನ್ಸ್ ನದಿಗೆ ವಿಮಾನ ನುಗ್ಗಿತ್ತು. ವಿಮಾನದಲ್ಲಿದ್ದ 136 ಪ್ರಯಾಣಿಕರಿಗೆ ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಜಾಕ್ಸೋನ್ವಿಲ್ಲೆಯ ನೌಕಾನೆಲೆಯ ವಕ್ತಾರರು ತಿಳಿಸಿದ್ದಾರೆ.

ವಿಮಾನ ಸಂಪೂರ್ಣವಾಗಿ ನದಿಯಲ್ಲಿ ಮುಳುಗದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಈಗಾಗಲೇ ಎಲ್ಲ ಪ್ರಯಾಣಿಕರನ್ನೂ ರಕ್ಷಿಸಲಾಗಿದೆ ಎನ್ನಲಾಗಿದೆ.
#JSO Marine Unit was called to assist @NASJax_ in reference to a commercial airplane in shallow water. The plane was not submerged. Every person is alive and accounted for. pic.twitter.com/4n1Fyu5nTS
— Jax Sheriff's Office (@JSOPIO) May 4, 2019
ಕಳೆದ ವಾರವಷ್ಟೇ, ಮಹಾರಾಷ್ಟ್ರದ ಶಿರಡಿಯಲ್ಲಿ ಸ್ಪೈಸ್ ಜೆಟ್ ವಿಮಾನವೊಂದು ಲ್ಯಾಂಡ್ ಆಗುವ ಸಮಯದಲ್ಲಿ ರನ್ ವೇ ತಪ್ಪಿದ ಕಾರಣ ಸಂಚಾರ ವ್ಯತ್ಯಯವಾಗಿತ್ತು. ಆದರೆ ಅದೃಷ್ಟ ವಶಾತ್ ಪ್ರಯಾಣಿಕರೆಲ್ಲರೂ ಭಾರೀ ದುರಂತದಿಂದ ಪಾರಾಗಿದ್ದರು.












Click it and Unblock the Notifications