ಸ್ಥಳೀಯರಿಗೆ ಉದ್ಯೋಗ, H1B ವೀಸಾದಾರರಿಗೆ ಇಲ್ಲ: ಟ್ರಂಪ್
ವಾಷಿಂಗ್ಟನ್, ಆ.4: ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಎಚ್ 1ಬಿ ವೀಸಾ ಹೊಂದಿರುವವರನ್ನು ನೇಮಕ ಮಾಡಿಕೊಳ್ಳದಂತೆ ಏಜೆನ್ಸಿಗಳಿಗೆ ಸೂಚಿಸಿದ್ದಾರೆ.
Recommended Video
ಹೀಗಾಗಿ, ಸರ್ಕಾರದ ವ್ಯಾಪ್ತಿಯ ಎಲ್ಲಾ ಇಲಾಖೆಗಳಲ್ಲಿ ಕೌಶಲ್ಯ ಆಧಾರಿತ ಹುದ್ದೆಗಳಿಗೆ ಮೂಲ ಅಮೆರಿಕನ್ನರನ್ನು ನೇಮಿಸಲಾಗುತ್ತದೆ. ಎಚ್1ಬಿ ವೀಸಾ ಹೊಂದಿದವರಿಗೆ ಈ ಹುದ್ದೆಗಳು ಸಿಗುವುದಿಲ್ಲ. ಈ ಇಲಾಖೆಗಳಿಗೆ ತಾಂತ್ರಿಕ ನೆರವು ಒದಗಿಸುತ್ತಿದ್ದ ಭಾರತ ಮೂಲದ ಐಟಿ ಸಂಸ್ಥೆಗಳಿಗೂ ಇದರಿಂದ ಭಾರಿ ಹೊಡೆತ ಬೀಳಲಿದೆ.

ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಎಚ್-1ಬಿ ವೀಸಾ ಸಂಖ್ಯೆಗಳ ಮೇಲೆ ನಿಯಂತ್ರಣ ಹೇರಿದ್ದರು. ವೀಸಾ ನೀತಿಯ ದೆಸೆಯಿಂದ ಸುಮಾರು 150 ಬಿಲಿಯನ್ ಡಾಲರ್ ಮೌಲ್ಯದ ಭಾರತದ ಐಟಿ ಕ್ಷೇತ್ರ ಆತಂಕದಲ್ಲಿತ್ತು. ಆದರೆ, ನಂತರ ನಿಯಮ ಸಡಿಲಿಕೆಯಾಗಿತ್ತು. ಆದರೆ, ಈಗ ವೀಸಾದಾರರಿಗೆ ಅಮೆರಿಕದ ಸರ್ಕಾರಿ ಉದ್ಯೋಗ ಲಭ್ಯವಿಲ್ಲ ಎಂಬ ಆದೇಶವು ಭಾರತ ಮೂಲದ ತಂತ್ರಜ್ಞರಿಗೆ ಮುಳುವಾಗಲಿದೆ. ಅಮೆರಿಕದ H-1B ವೀಸಾ ಪಡೆಯುವವರಲ್ಲಿ ಶೇ 70 ರಷ್ಟು ಭಾರತೀಯರೇ ಇದ್ದು, ಪ್ರತಿ ವರ್ಷ ಭಾರತದಿಂದ ಸುಮಾರು 80 ಸಾವಿರಕ್ಕೂ ಹೆಚ್ಚು ಜನ ಅಮೆರಿಕಕ್ಕೆ ತೆರಳುತ್ತಾರೆ.












Click it and Unblock the Notifications