67 ವಯಸ್ಸಿನ ನೀಲಿಚಿತ್ರ ತಾರೆಗೆ 250 ವರ್ಷ ಜೈಲುವಾಸ?
ಲಾಸ್ ಏಂಜಲೀಸ್, ಸೆ. 1: ವಯಸ್ಕರ ಚಿತ್ರಗಳ ಸ್ಟಾರ್ ನಟ ರಾನ್ ಜೆರೆಮಿ ಅವರ ಮೇಲೆ ಮತ್ತೆ 20 ಹೊಸ ಲೈಂಗಿಕ ಕಿರುಕುಳ ಪ್ರಕರಣಗಳು ಬಿದ್ದಿವೆ. 13 ಹೊಸ ಮಹಿಳೆಯರು ರಾನ್ ವಿರುದ್ಧ ಆರೋಪ ಮಾಡಿದ್ದಾರೆ ಎಂದು ಲಾಸ್ ಏಂಜಲೀಸ್ ಡಿಸ್ಟ್ರಿಕ್ಟ್ ಅಟರ್ನಿ ಜಾಕಿ ಲಾಸಿ ಹೇಳಿದ್ದಾರೆ.
Recommended Video
ಕಳೆದ ಜೂನ್ ತಿಂಗಳಿನಿಂದ ಕೋರ್ಟ್ ಕಟಕಟೆಯಲ್ಲಿ ನಿಲ್ಲುತ್ತಿರುವ 67 ವರ್ಷ ವಯಸ್ಸಿನ ರಾನ್ ಮೇಲಿನ ಆರೋಪಗಳು ಸಾಬೀತಾದರೆ ಕನಿಷ್ಠ 90 ರಿಂದ 250 ವರ್ಷ ಜೈಲು ಶಿಕ್ಷೆ ವಿಧಿಸಬಹುದು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸುಮಾರು 15 ವರ್ಷದಿಂದ 54 ವರ್ಷ ವಯಸ್ಸಿನ ತನಕದ ಯುವತಿ, ಮಹಿಳೆಯರ ಮೇಲೆ 2004ರಲ್ಲಿ ಅತ್ಯಾಚಾರ ಎಸಗಿದ ಆರೋಪ ರಾನ್ ಮೇಲಿದೆ. ಸಹಮತಿ ಇಲ್ಲದೆ ವಿವಿಧ ರೀತಿಯ ಸೆಕ್ಸ್ ಕ್ರಿಯೆಯಲ್ಲಿ ತೊಡಗಿದ್ದ ಆರೋಪ ರಾನ್ ಮೇಲೆ ಹೊರೆಸಲಾಗಿದೆ ಎಂದು ಲಾಸ್ ಏಂಜಲೀಸ್ ಟೈಮ್ಸ್ ವರದಿ ಮಾಡಿದೆ.

ಮಹಿಳೆಯರು ಬಂದು ಸುಖಪಡೆದರೆ ತಪ್ಪೇ ಆದರೆ ಜೂನ್ ನಲ್ಲಿ ಕೋರ್ಟಿನಲ್ಲಿ ಪ್ರತಿಕ್ರಿಯಿಸಿರುವ ರಾನ್, ಇದೆಲ್ಲವೂ ಸುಳ್ಳು ಎಂದು ಹೇಳಿದ್ದಾರೆ. ಹೊಸ ಆರೋಪಗಳ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ರಾನ್ ಪರ ವಕೀಲ ಆರೋಪಗಳೆಲ್ಲವೂ ಸುಳ್ಳು ಹಾಗೂ ಕಲ್ಪಿತ ಕತೆಯಾಗಿದ್ದು, ನನ್ನ ಕಕ್ಷಿದಾರರು 4000ಕ್ಕೂ ಅಧಿಕ ಮಹಿಳೆಯರಿಗೆ ವಿಟ(paramour)ನಾಗಿದ್ದರು, ಮಹಿಳೆಯರು ಸುಖ ಪಡೆದು ತೆರಳಿದ್ದಾರೆ ಎಂದು ಹೇಳಿದ್ದಾರೆ.
2017ರಲ್ಲಿ ರಾನ್ ರಾಸಲೀಲೆ ವಿಡಿಯೋ ಬಿಡುಗಡೆ ಮಾಡಿದ್ದ ರೋಲಿಂಗ್ ಸ್ಟೋನ್ ತನಿಖಾ ವರದಿ ಈಗ ಪ್ರಸ್ತುತವಾಗುವ ಸಾಧ್ಯತೆಯಿದ್ದು, ಸಾಕ್ಷಿಯಾಗಿ ಬಳಸಬಹುದಾಗಿದೆ. ಆದರೆ, ರಾನ್ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದು, ನನ್ನ ವೃತ್ತಿ ಬದುಕು ಹಾಗೂ ಜೀವನದಲ್ಲಿ ಇಲ್ಲಿ ತನಕ ಬಲಾತ್ಕಾರ ಮಾಡಿಲ್ಲ, ಅನಾಮಿಕರ ಜೊತೆ ಸೆಕ್ಸ್ ಮಾಡಿದ್ದರೂ ಸಹಮತಿ ಇಲ್ಲದೆ ಯಾವುದೋ ನಡೆದಿಲ್ಲ ಎಂದಿದ್ದಾರೆ.
ನಾಲ್ಕು ದಶಕಗಳಿಗೂ ಅಧಿಕ ಕಾಲ ಪೋರ್ನ್ ಫಿಲಂ ಜಗತ್ತಿನಲ್ಲಿ ಜನಪ್ರಿಯರಾಗಿರುವ ರಾನ್ ಸುಮಾರು 1700ಕ್ಕೂ ಅಧಿಕ ಸಿನಿಮಾಗಳಲ್ಲಿ ನಡೆಸಿದ್ದಾರೆ. ರೊನಾಲ್ಡ್ ಜೆರೆಮಿ ಹಯಾತ್ ಅವರ ಪೂರ್ಣ ಹೆಸರು. ಅತಿ ಹೆಚ್ಚು ಪೋರ್ನ್ ಚಿತ್ರಗಳಲ್ಲಿ ನಟಿಸಿ ಗಿನ್ನಿಸ್ ದಾಖಲೆ ಬರೆದಿರುವ ರಾನ್ ಬಗ್ಗೆ ಸಾಕ್ಷ್ಯಚಿತ್ರಗಳು ಬಂದಿವೆ. ಗನ್ಸ್ ಎನ್ ರೋಸಸ್ ವಿಡಿಯೋ, ಕಂಪ್ಯೂಟರ್ ಗೇಮ್ಸ್ ಗಳಲ್ಲೂ ಅತಿಥಿ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ.












Click it and Unblock the Notifications