ಅಮೆರಿಕ ; ಇಬ್ಬರು ಮಕ್ಕಳು ಸೇರಿ ವಿಮಾನ ಪತನದಲ್ಲಿ 9 ಸಾವು
ವಾಷಿಂಗ್ಟನ್, ಡಿಸೆಂಬರ್ 01 : ವಿಮಾನ ಪತನಗೊಂಡು 9 ಜನರು ಮೃತಪಟ್ಟ ಘಟನೆ ಅಮೆರಿಕದ ದಕ್ಷಿಣ ಡಕೋಟಾದಲ್ಲಿ ನಡೆದಿದೆ. ವಿಮಾನ ಚೆಂಬರ್ಲ್‌ನ್‌ನಿಂದ ಸಿಯೋಕ್ಸ್ ಫಾಲ್ಸ್‌ನ ಪಶ್ಚಿಮಕ್ಕೆ ಹಾರಾಟ ಆರಂಭಿಸಿತ್ತು.
ಪಿಲಾಟಸ್ ಪಿಸಿ -12 ಎಂಬ ಒಂದು ಎಂಜಿನ್ ವಿಮಾನ ಟೇಕಾಫ್ ಆದ ಕೆಲವೇ ಸಮಯದಲ್ಲಿ ಪತನಗೊಂಡಿದೆ. ಎರಡು ಮಕ್ಕಳು ಸೇರಿದಂತೆ 9 ಜನರು ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಅಮೆರಿಕದ ದಕ್ಷಿಣ ಡಕೋಟಾದಲ್ಲಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಒಟ್ಟು 12 ಜನರಿದ್ದ ವಿಮಾನ ಚೆಂಬರ್ಲ್‌ನ್‌ನಿಂದ ಸಿಯೋಕ್ಸ್ ಫಾಲ್ಸ್‌ನ ಪಶ್ಚಿಮಕ್ಕೆ ಹೊರಟಿತ್ತು.
ಅಮೆರಿಕದ ದಕ್ಷಿಣ ಡಕೋಟಾದಲ್ಲಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಒಟ್ಟು 12 ಜನರಿದ್ದ ವಿಮಾನ ಚೆಂಬರ್ಲ್‌ನ್‌ನಿಂದ ಸಿಯೋಕ್ಸ್ ಫಾಲ್ಸ್‌ನ ಪಶ್ಚಿಮಕ್ಕೆ ಹೊರಟಿತ್ತು.
ಮೃತಪಟ್ಟ 9 ಜನರಲ್ಲಿ ಪೈಲೆಟ್ ಸಹ ಸೇರಿದ್ದಾರೆ. ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಪಿಲಾಟಸ್ ಪಿಸಿ -12 ವಿಮಾನ ಪನತಕ್ಕೆ ಕಾರಣ ಏನೆಂದು? ತನಿಖೆ ನಡೆಸಲಾಗುತ್ತದೆ ಎಂದು ಟ್ವೀಟ್ ಮಾಡಿದೆ.
ಚೇಂಬರ್ಲೇನ್ ಹಾಗೂ ದಕ್ಷಿಣ ಡಕೋಟಾದಲ್ಲಿ ಚಳಿಗಾಲದ ಚಂಡ ಮಾರುತ ಆರಂಭವಾಗಿದೆ. ಚಂಡ ಮಾರುತದ ಹಿನ್ನಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ವಿಮಾನ ಪತನಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

Click it and Unblock the Notifications