ವಿಜಯಪುರದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ

ವಿಜಯಪುರ, ಅಕ್ಟೋಬರ್ 19: ನಗರದ ಆಶ್ರಮ ರಸ್ತೆಯಲ್ಲಿರುವ ಮುದನೂರು ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಶುಕ್ರವಾರ ರಾತ್ರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ನಾಲ್ಕು ಮಕ್ಕಳಲ್ಲಿ ಎರಡು ಗಂಡು, ಎರಡು ಹೆಣ್ಣು ಮಕ್ಕಳಾಗಿದ್ದು, ಎಲ್ಲ ಮಕ್ಕಳೂ ಆರೋಗ್ಯವಾಗಿವೆ. ನಾಲ್ಕು ಮಕ್ಕಳ ತೂಕವೂ ಒಂದೂವರೆ ಕೆಜಿ ಇರುವುದು ವಿಶೇಷವಾಗಿದೆ. ಸದ್ಯಕ್ಕೆ ಈ ಮಕ್ಕಳನ್ನು ಬಿಎಲ್ ಇಡಿ ಆಸ್ಪತ್ರೆಯ ಎನ್ ಐಸಿಯಲ್ಲಿ ಇಡಲಾಗಿದೆ.

ವಿಜಯಪುರದ ನಗರದ ರಾಜ್ ರತನ್ ಕಾಲೋನಿ ನಿವಾಸಿ ದಾಲಿಬಾಯಿ (40) ಈ ಮಕ್ಕಳಿಗೆ ಜನ್ಮ‌ ನೀಡಿದ‌ ತಾಯಿ. ಇವರು ಮೂಲತಃ ರಾಜಸ್ಥಾನದವರು. ಇವರಿಗೆ ಒಂದು ಹೆಣ್ಣು ಮಗುವಿದ್ದು, ಮತ್ತೊಂದು ಮಗುವಿಗಾಗಿ ಈ ದಂಪತಿ ಪ್ರಣಾಳ ಶಿಶು ಚಿಕಿತ್ಸೆ ಪಡೆದಿದ್ದರು.

Women Has Given Birth To 4 Babies In Vijayapura

ತಾಯಿ ಹಾಗೂ ಮಕ್ಕಳ ಆರೋಗ್ಯ ಸ್ಥಿರವೆಂದು ವೈದ್ಯರು ಹೇಳಿದ್ದು, ಏಕಕಾಲದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವುದು ಅಪರೂಪದ ಪ್ರಕರಣ ಎಂದು ವೈದ್ಯ ಎಸ್.ಆರ್. ಮುದನೂರ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+