ಗಂಗಾಧರ ಚಡಚಣ ಕುಟುಂಬದ ರಕ್ತದ ಮಾದರಿ ಸಂಗ್ರಹ

ವಿಜಯಪುರ, ಜುಲೈ 25: ತೀವ್ರ ಕುತೂಹಲ ಕೆರಳಿಸಿರುವ ಗಂಗಾಧರ ಚಡಚಣ ಸಾವಿನ ಪ್ರಕರಣದಲ್ಲಿ ಡಿಎನ್ಎ ಮಾದರಿಗಳ ಹೋಲಿಕೆಯನ್ನು ಖಚಿತಪಡಿಸಿಕೊಳ್ಳಲು ಸಿಐಡಿ ಮುಂದಾಗಿದೆ.

ಗಂಗಾಧರ ಚಡಚಣ ಕೊಲೆ ನಡೆದ ಸ್ಥಳದ ಮಣ್ಣಿನಲ್ಲಿ ದೊರೆತ ರಕ್ತದ ಕಣಗಳು ಮಾನವರದ್ದೇ ಎನ್ನುವುದು ಬೆಳಗಾವಿಯ ಎಫ್‌ಎಸ್‌ಎಲ್ ಪ್ರಯೋಗಾಲಯದಲ್ಲಿ ದೃಢಪಟ್ಟಿದೆ.

ಹೀಗಾಗಿ ಅದು ಗಂಗಾಧರ ಚಡಚಣನ ರಕ್ತವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅದನ್ನು ಬೆಂಗಳೂರಿನ ಎಫ್‌ಎಸ್‌ಎಲ್‌ ಪ್ರಯೋಗಾಲಯಕ್ಕೆ ಸಿಐಡಿ ಪೊಲೀಸರು ರವಾನಿಸಿದ್ದಾರೆ.

gangadhara chadachana murder case blood samples collected for dna

ಅಲ್ಲದೆ, ಗಂಗಾಧರ ಚಡಚಣನ ತಾಯಿ ವಿಮಲಾಬಾಯಿ ಹಾಗೂ ಮಗನ ರಕ್ತದ ಮಾದರಿಗಳನ್ನು ಸಹ ಸಂಗ್ರಹಿಸಿದ್ದಾರೆ.

ಅವರ ಕುಟುಂಬದವರ ರಕ್ತದ ಮಾದರಿಗಳನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿರುವ ಎಫ್‌ಎಸ್‌ಎಲ್ ಘಟಕಕ್ಕೆ ರವಾನಿಸಲಿದ್ದು, ಡಿಎನ್‌ಎ ಪರೀಕ್ಷೆಯಲ್ಲಿ ರಕ್ತದ ಕಲೆಗಳೊಂದಿಗೆ ಹೋಲಿಕೆ ಇದೆಯೇ ಎಂಬುದನ್ನು ಕಂಡುಕೊಳ್ಳಲಿದ್ದಾರೆ.

ಗಂಗಾಧರ ಚಡಚಣನ ನಿಗೂಢ ನಾಪತ್ತೆ, ಹತ್ಯೆ ಪ್ರಕರಣದಲ್ಲಿ ಸಿಐಡಿ ಪೊಲೀಸರು ಶಿವಾನಂದ ಬಿರಾದಾರ ಎಂಬ ಆರೋಪಿಯನ್ನು ಮಹಾರಾಷ್ಟ್ರದಲ್ಲಿ ಬಂಧಿಸಿದ್ದರು.

ಈತ ಗಂಗಾಧರ ಚಡಚಣನ ಹತ್ಯೆಯ ಪ್ರತ್ಯಕ್ಷದರ್ಶಿ ಎನ್ನಲಾಗಿದೆ. ಅಲ್ಲದೆ, ಗಂಗಾಧರ ಸಹೋದರ ಧರ್ಮರಾಜ ಚಡಚಣ ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದ ಸಂದರ್ಭದಲ್ಲಿಯೂ ಈತ ಸ್ಥಳದಲ್ಲಿ ಇದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+