ವಾಷಿಂಗ್ಟನ್, ಅಕ್ಟೋಬರ್ 12: ನ್ಯೂಕ್ಲಿಯರ್ (ಪರಮಾಣು) ಜಲಾಂತರ್ಗಾಮಿ ನೌಕೆಗಳ ವಿನ್ಯಾಸದ ಬಗೆಗಿನ ರಹಸ್ಯ ಮಾಹಿತಿಯನ್ನು ಗೌಪ್ಯವಾಗಿ ವಿದೇಶಕ್ಕೆ ರವಾನಿಸಲಾಗುತ್ತಿದೆ ಎಂಬ ಆರೋಪದ ಮೇಲೆ ಅಮೆರಿಕಾದ ಅಧಿಕಾರಿಗಳು ನ್ಯೂಕ್ಲಿಯರ್ ಇಂಜಿನಿಯರ್ ಹಾಗೂ ಆತನ ಪತ್ನಿಯನ್ನು ಬಂಧಿಸಿದ್ದಾರೆ.
ಜೊನಾಥನ್ ಹಾಗೂ ಡಯಾನಾ ಟೋಬೆ ಎಂಬವರೇ ಬಂಧಿತ ಆರೋಪಿಗಳು. ಕಳೆದ ಒಂದು ವರ್ಷದ ಅವಧಿಯಲ್ಲಿ ಎಫ್ಬಿಐ ಏಜೆಂಟರಿಗೆ ಸಾಕಷ್ಟು ಗೌಪ್ಯ ಮಾಹಿತಿಯನ್ನು ಈ ಇಬ್ಬರು ದಂಪತಿಗಳು ರವಾನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಖಚಿತ ಮಾಹಿತಿಯ ಮೇರೆಗೆ ವಿಶೇಷ ಕಾರ್ಯಾಚರಣೆಯ ಮೂಲಕ ಇಬ್ಬರು ದಂಪತಿಯನ್ನು ಬಂಧಿಸಲಾಗಿದೆ.
ಅಮೆರಿಕದ ನ್ಯಾಯಾಂಗ ವಿಭಾಗವು ಹೇಳಿರುವಂತೆ ಡಯಾನಾ ಥೊಬ್ಬೆ ಒಬ್ಬ ನೌಕಾಪಡೆಯ ಉದ್ಯೋಗಿಯಾಗಿದ್ದುಕೊಂಡು, ಜಲಾಂತರ್ಗಾಮಿ ನ್ಯೂಕ್ಲಿಯರ್ ಪ್ರೊಪಲ್ಷನ್ ಕಾರ್ಯಕ್ರಮದಲ್ಲಿ ನ್ಯೂಕ್ಲಿಯರ್ ಇಂಜಿನಿಯರ್ (ಅಣ್ವಸ್ತ್ರ ತಂತ್ರಜ್ಞ) ಆಗಿ ಸೇವೆ ಸಲ್ಲಿಸುತ್ತಿದ್ದರು. ಹಾಗಾಗಿ ನಿರ್ಬಂಧಿತ ಪ್ರದೇಶ ಹಾಗೂ ಇತರೆ ರಹಸ್ಯ ಭದ್ರತಾ ಸ್ಥಳಗಳಿಗೂ ಪ್ರವೇಶಿಸುವ ಅವಕಾಶವನ್ನೂ ಅವರು ಹೊಂದಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ನ್ಯಾಯಾಂಗ ವಿಭಾಗದ ಅಟಾರ್ನಿ ಜನರಲ್ ಮೆರಿಕ್ ಗಾರ್ಲ್ಯಾಂಡ್, ನಮ್ಮ ದೇಶದ ನ್ಯೂಕ್ಲಿಯರ್ ಜಲಾಂತರ್ಗಾಮಿ ನೌಕೆಗಳ ವಿನ್ಯಾಸದ ಮಾಹಿತಿಯನ್ನು ಬೇರೆ ರಾಷ್ಟ್ರಗಳಿಗೆ ರವಾನಿಸುತ್ತಿದ್ದರು ಎಂದು ದೂರಿನಲ್ಲಿ ದಾಖಲಿಸಲು ಸೂಚಿಸಿದ್ದ, ನಮ್ಮ ಎಫ್ಬಿಐ (ಡಿಪಾರ್ಟ್ಮೆಂಟ್ ಆಫ್ ಜಸ್ಟೀಸ್ ಪ್ರಾಸಿಕ್ಯೂಟರ್) ಹಾಗೂ ನೌಕಾ ಅಪರಾಧ ತನಿಖಾ ಸೇವಾ ಮತ್ತು ಶಕ್ತಿ ವಿಭಾಗವು ಈ ಆಪರೇಷನ್ ಅನ್ನು ವಿಫಲಗೊಳಿಸುವಲ್ಲಿಯೂ ನಿರ್ಣಾಯಕ ಪಾತ್ರವಹಿಸಿದೆ ಎಂದು ಹೇಳಿದರು.
ಪ್ಲಾನ್ ಬಯಲಾಗಿದ್ದು ಹೇಗೆ?
ಟೋಬೆ 2020ರ ಏ.1ರಂದು ವಿದೇಶಿ ಸರ್ಕಾರಕ್ಕೆ ನಿರ್ಬಂಧಿತ ರಹಸ್ಯ ಮಾಹಿತಿಯ ಮಾದರಿ ಪ್ಯಾಕೇಜ್ ಅನ್ನು ರವಾನೆ ಮಾಡಿದ್ದರು. ಇದರಿಂದ ವಿದೇಶಿ ಮೂಲಗಳು ಇನ್ನಷ್ಟು ಗೌಪ್ಯ ಮಾಹಿತಿಯನ್ನು ಖರೀದಿಸುವ ಸಲುವಾಗಿ ಟೋಬೆಯೊಂದಿಗೆ ರಹಸ್ಯ ಸಂಪರ್ಕವನ್ನು ಕಾಯ್ದುಕೊಂಡಿದ್ದವು. ಆದರೆ ಇದೀಗ ಇದು ಬಯಲಾಗಿದೆ.
ಹೌದು, ಟೋಬೆ ಅವರು ತಾನು ವ್ಯವಹರಿಸುತ್ತಿದ್ದ ವ್ಯಕ್ತಿಯು ವಿದೇಶಿ ಪ್ರತಿನಿಧಿಯಾಗಿದ್ದರು ಎಂಬ ತಪ್ಪು ಕಲ್ಪನೆಯಲ್ಲಿದ್ದರು. ಆದರೆ, ಈ ವ್ಯಕ್ತಿಯನ್ನು ನ್ಯಾಯಾಲಯವೇ ರಹಸ್ಯ ಕಾರ್ಯಾಚರಣೆಗೆ ನೇಮಿಸಿದ್ದ ವ್ಯಕ್ತಿಯಾಗಿದ್ದರು ಎಂಬುದು ತನಿಖೆ ವೇಳೆಯಲ್ಲಿ ಬಯಲಾಗಿದೆ.
ಈ ವ್ಯಕ್ತಿಯು ರಹಸ್ಯ ಕಾರ್ಯಾಚರಣೆಯಲ್ಲಿದ್ದಾಗ ನ್ಯಾಯಾಂಗ ವಿಭಾಗವೇ ಉಲ್ಲೇಖಿಸಿರುವ ಒಂದು ನಿಯೋಜಿತ ಕಾರ್ಯದಲ್ಲಿ ಸೂಕ್ಷ್ಮ ಮಾಹಿತಿಯನ್ನು ಮೆಮೊರಿ ಕಾರ್ಡ್ ಒಂದರಲ್ಲಿ ಸಂಗ್ರಹಿಸಿದ್ದರು. ಈ ವೇಳೆ ಟೋಬೆ ರಹಸ್ಯ ಮಾಹಿತಿಯನ್ನು ಮಾರಾಟ ಮಾಡಲು ಪೀನಟ್ ಬಟರ್ ಸ್ಯಾಂಡ್ವಿಚ್ ಅನ್ನು ಬಳಸಿಕೊಂಡು ರಹಸ್ಯ ವಾಗಿ ತಿಳಿಸುತ್ತಿದ್ದರು. ಜೊತೆಗೆ ರಹಸ್ಯ ಮಾಹಿತಿಯನ್ನು ಹಸ್ತಾಂತರಿಸುವಾಗ ಪರಿಚಿತರಂತೆ ವರ್ತಿಸುತ್ತಿದ್ದರು ಎಂಬುದು ತಿಳಿದು ಬಂದಿತ್ತು. ರಹಸ್ಯ ಮಾಹಿತಿಯನ್ನು ವಿನಿಮಯ ಮಾಡಿಕೊಂಡಿದ್ದಕ್ಕಾಗಿ 30,000 ಡಾಲರ್ (€25,919) ಮೊತ್ತದ ಕ್ರಿಪ್ಟೋಕರೆನ್ಸಿಯನ್ನು ಪಡೆದುಕೊಂಡಿದ್ದರು ಎಂಬುದನ್ನು ಪತ್ತೆ ಹಚ್ಚಲಾಗಿತ್ತು.
ಹೀಗೆ ಮತ್ತೊಂದು ಕಾರ್ಯಾಚರಣೆಯಲ್ಲಿ ಟೋಬೆ ಚ್ವೀಂಗಮ್ ಪ್ಯಾಕೆಟ್ ಒಂದರಲ್ಲಿ ರಹಸ್ಯ ಮಾಹಿತಿಯ ಮೆಮೊರಿ ಕಾರ್ಡ್ ಇಟ್ಟು ಅನ್ನು ಮಾರಾಟ ಮಾಡಿ, 70 ಸಾವಿರ ಡಾಲರ್ಗಳನ್ನು ಪಡೆದುಕೊಂಡಿದ್ದರು ಎಂಬುದೂ ಗೊತ್ತಾಯಿತು.
ಹೀಗಾಗಿ ಜೊನಾಥನ್ ಹಾಗೂ ಡಯಾನಾ ಟೋಬೆ ದಂಪತಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ. ಮಂಗಳವಾರ ಟೋಬೆ ಮತ್ತು ದಂಪತಿ ಮೊದಲ ಬಾರಿಗೆ ವೆಸ್ಟ್ ವರ್ಜೀನಿಯಾದ ಮಾರ್ಟಿನ್ಸ್ಬರ್ಗ್ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. kb/sri (Reuters, AP)
A US couple has been charged with trying to sell secret information relating to nuclear submarines. The FBI made the arrests during an undercover operation.