ಉಡುಪಿಯ ಮಧ್ವ ಸರೋವರದಲ್ಲಿ ಮುಳುಗಿ ಶಿವಮೊಗ್ಗ ಯಾತ್ರಾರ್ಥಿ ಸಾವು
ಉಡುಪಿ, ಡಿಸೆಂಬರ್ 03: ಉಡುಪಿಯ ಶ್ರೀ ಕೃಷ್ಣ ಮಠದ ಮಧ್ವ ಸರೋವರದಲ್ಲಿ ಯಾತ್ರಾರ್ಥಿಯೋರ್ವ ಮುಳುಗಿ ಸಾವನ್ನಪ್ಪಿದ ಘಟನೆ ಇಂದು ಸೋಮವಾರ ಮುಂಜಾನೆ ನಡೆದಿದೆ. ಮೃತರನ್ನು ಶಿವಮೊಗ್ಗ ವಿದ್ಯಾನಗರ ನಿವಾಸಿ ಆದರ್ಶ್(39) ಎಂದು ಗುರುತಿಸಲಾಗಿದೆ.
ಆದರ್ಶ್ ಅವರು ಇಂದು ಮಧ್ವ ಸರೋವರದಲ್ಲಿ ಸ್ನಾನಕ್ಕಿಳಿದಾಗ, ಆಕಸ್ಮಿಕವಾಗಿ ಕಾಲು ಜಾರಿ ಸರೋವರಕ್ಕೆ ಬಿದ್ದಿದ್ದಾರೆ. ಈಜಲಾಗದೆ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ ಎಂದು ಹೇಳಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಶೋಧ ನಡೆಸಿದ್ದರು.

ಆ ನಂತರ ಸರೋವರದ ತಳ ಜಾಲಾಡಿ ಮೃತದೇಹವನ್ನು ಮೇಲೆ ತಂದಿದ್ದಾರೆ. ಮೃತ ಪಟ್ಟ ಆದರ್ಶ ವಸತಿಗೃಹದ ನೋಂದಣಿ ಪುಸ್ತಕದಲ್ಲಿ ವಿದ್ಯಾನಗರ, 4ನೇ ಎ ಕ್ರಾಸ್ ಶಿವಮೊಗ್ಗ ಎಂಬ ವಿಳಾಸ ದಾಖಲಿಸಿದ್ದಾರೆ. ಉಡುಪಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಮೃತದೇಹ ರವಾನಿಸಲಾಗಿದೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications