ಮತ್ತೆ ದೇವರ ಮೊರೆಹೋದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ
Recommended Video

ಉಡುಪಿ, ಜುಲೈ.25: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೆ ದೇವರ ಮೊರೆಹೋಗಿದ್ದಾರೆ. ಹೌದು, ಉಡುಪಿ ಸಮೀಪದ ಕುತ್ಯಾರು ಆನೆಗುಂದಿ ಮಠದಲ್ಲಿ ಯಡಿಯೂರಪ್ಪ
ಮಹಾರುದ್ರಯಾಗ ಮತ್ತು ಶತಚಂಡಿಕಾಯಾಗ ನಡೆಸಿದ್ದಾರೆ.
ಕುಟುಂಬ ಸಮೇತರಾಗಿ ಶನಿವಾರ ಮಠಕ್ಕೆ ಆಗಮಿಸಿದ ಯಡಿಯೂರಪ್ಪ ಗೌಪ್ಯವಾಗಿ ಯಾಗ ನಡೆಸಿದ್ದಾರೆ. ಶನಿವಾರ ಮಠದಲ್ಲಿ ತಂಗಿ ರವಿವಾರ ಹಾಗೂ ಸೋಮವಾರ ಯಾಗದಲ್ಲಿ ಭಾಗಿಯಾಗಿದ್ದಾರೆ.

ಯಡ್ಡಿ ಪುತ್ರರಾದ ವಿಜಯೇಂದ್ರ ಹಾಗೂ ರಾಘವೇಂದ್ರ ಕೂಡಾ ಯಾಗದಲ್ಲಿ ಭಾಗಿಯಾಗಿದ್ದು, ಪುತ್ತೂರಿನ ಪುರೋಹಿತರಾದ ಶ್ರೀಕೃಷ್ಣ ಉಪಾಧ್ಯಾಯ ಮತ್ತು ಸುಳ್ಯ ಮೂಲದ ಪುರೋಹಿತರ ನೇತೃತ್ವದಲ್ಲಿ ಧಾರ್ಮಿಕ ವಿಧಿ ನಡೆಸಿದ್ದಾರೆ.

ಯಡಿಯೂರಪ್ಪ ಅವರ ಮಕ್ಕಳು, ಸೊಸೆಯಂದಿರು, ಆಪ್ತರು ಸಹ ಹೋಮದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದ್ದು, ಎರಡು ದಿನಗಳ ಕಾಲ ನಡೆದ ಹೋಮದಲ್ಲಿ
60 ಮಂದಿ ವೈದಿಕರು ಭಾಗಿಯಾಗಿದ್ದಾರೆ.

ಆನೆಗುಂದಿ ಸಂಸ್ಥಾನ ಉಡುಪಿ ಜಿಲ್ಲೆ ಕಾಪುವಿನ ಪಡು ಕುತ್ಯಾರುಕ್ಕೆ ಸಂಬಂಧಿಸಿದ ಕ್ಷೇತ್ರ. ಕಾಂಗ್ರೆಸ್ ಅತೃಪ್ತರನ್ನು ಸೆಳೆಯವ ತಂತ್ರಗಾರಿಕೆಗೆ ಬಿಜೆಪಿ ಕೈ ಹಾಕಿದ್ದು, ಈ ನಡುವೆ ಯಡಿಯೂರಪ್ಪ ದೇವರ ಮೊರೆಹೋಗಿರುವುದು ಕುತೂಹಲ ಮೂಡಿಸಿದೆ.












Click it and Unblock the Notifications