ಹಾಲು ಕರೆಯುತ್ತಿದ್ದಾಗ ಹಟ್ಟಿ ಗೋಡೆ ಕುಸಿದು ಮಹಿಳೆ ಸಾವು

ಉಡುಪಿ, ಆಗಸ್ಟ್ 8: ಹಾಲು ಕರೆಯುವಾಗ ಮನೆಯ ಗೋಡೆ ಕುಸಿದು ಮಹಿಳೆ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಉಡುಪಿ ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಉತ್ತಮ ಮಳೆಯಾಗುತ್ತಿದ್ದು ಇಂದು ಕೂಡ ಮಳೆ ಮುಂದುವರೆದಿದೆ.

ಈ ನಡುವೆ ಅವಘಡ ಸಂಭವಿಸಿದೆ. ಇಂದು ಭಾರೀ ಮಳೆಯ ನಡುವೆ ದನದ ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತಿದ್ದ ವೇಳೆ ಮಣ್ಣಿನ ಗೋಡೆ ಕುಸಿದು ಬಿದ್ದ ಪರಿಣಾಮ ಮಹಿಳೆ ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲೆಯ ಚೇರ್ಕಾಡಿ ಗ್ರಾಮದ ಬೆನಗಲ್ ಎಂಬಲ್ಲಿ ಈ ಘಟನೆ ನಡೆದಿದೆ.

Women Died By Mud Wall Collapse In Benagal

ಇಲ್ಲಿನ ನಿವಾಸಿ ಕೊರಗ ಮರಕಾಲ ಎಂಬುವರ ಪತ್ನಿ ಗಂಗಾ ಮರಕಾಲ್ತಿ (52) ಘಟನೆಯಲ್ಲಿ ಮೃತಪಟ್ಟಿದ್ದಾರೆ. ನಿರಂತರ ಮಳೆಯಿಂದ ತೊಯ್ದು ಶುಷ್ಕಗೊಂಡಿದ್ದ ಕೊಟ್ಟಿಗೆಯ ಮಣ್ಣಿನ ಗೋಡೆ ಹಠಾತ್ ಕುಸಿದು ಬಿದಿದ್ದೆ. ಈ ಗಂಗಾ ಅವರು ಗೋಡೆಯ ಅವಶೇಷಗಳಡಿ ಸಿಲುಕಿ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+