Get Updates
Get notified of breaking news, exclusive insights, and must-see stories!

ಇನ್ನಾದರೂ ಮತದಾರರಿಗೆ, ಪಕ್ಷಕ್ಕೆ ನಿಷ್ಠರಾಗಿರಿ ಎಂದು ಕಿಡಿಕಾರಿದ ಉಗ್ರಪ್ಪ

ಉಡುಪಿ, ಫೆಬ್ರವರಿ 06: "ರಾಜ್ಯದ ಇತಿಹಾಸದಲ್ಲಿ ಇಂದು ಕರಾಳ ದಿನ. ಜನಾದೇಶಕ್ಕೆ ದ್ರೋಹ ಮಾಡಿದವರು, ಪ್ರಜಾಪ್ರಭುತ್ವಕ್ಕೆ ದ್ರೋಹ ಮಾಡಿದವರು ಸರ್ಕಾರ ರಚಿಸುತ್ತಿದ್ದಾರೆ. ಹತ್ತು ಶಾಸಕರನ್ನು ಮಂತ್ರಿ ಮಾಡಿದ್ದಾರೆ. ಇನ್ನಾದರೂ ಮತದಾರರಿಗೆ, ಪಕ್ಷಕ್ಕೆ ನಿಷ್ಠರಾಗಿರಿ" ಎಂದು ಇಂದು ನಡೆದ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ಉಗ್ರಪ್ಪ ಕಿಡಿಕಾರಿದ್ದಾರೆ.

"ಹಣದ ಹೊಳೆ ಹರಿಸಿ, ಅಧಿಕಾರ ದುರ್ಬಳಕೆ ಮಾಡಿ ನೀವು ಗೆದ್ದದ್ದು ಗೊತ್ತಿದೆ. ನಿಮ್ಮ ದಾಸ್ಯ ಪ್ರವೃತ್ತಿ ಪ್ರಮಾಣ ವಚನ ವೇಳೆ ಬಯಲಾಗಿದೆ. ಇನ್ನಾದರೂ ದಾಸ್ಯದ ಪ್ರವೃತ್ತಿ ಬಿಡಿ. ಪ್ರವಾಹ ಪೀಡಿತರ ಸಮಸ್ಯೆಗೆ ಸ್ಪಂದಿಸಿ. ರಾಜ್ಯದ ಹಿತ ಕಾಪಾಡಲು ಕೇಂದ್ರದಿಂದ ಅನುದಾನ‌ ತನ್ನಿ" ಎಂದು ಹೇಳಿದ್ದಾರೆ.

ವಿಜಯೇಂದ್ರ ಮನೆಯೇ ಬಿಜೆಪಿ ಶಕ್ತಿ ಕೇಂದ್ರವಾಗಿದೆ ಎಂಬ ವಿಷಯಕ್ಕೆ ಪ್ರತಿಕ್ರಿಯಿಸಿ, "ವಂಶಪಾರಂಪರ್ಯ ಆಡಳಿತ ಅಂತ ನಮ್ಮ ಮೇಲೆ ಆರೋಪಿಸಿದಿರಿ. ಯಡಿಯೂರಪ್ಪ ಮೂಲಕ ಒಂದು ಕುಟುಂಬದವರ ಆಡಳಿತ ನಡೆಯುತ್ತಿದೆ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ, ಇದನ್ನು ಮರೆಯಬೇಡಿ" ಎಂದು ಎಚ್ಚರಿಸಿದರು.

VS Ugrappa Reaction On Cabinet Expansion

ಸಂಸದ ಅನಂತ್ ಕುಮಾರ್ ವಿವಾದಾತ್ಮಕ ಹೇಳಿಕೆ ಕುರಿತು ಆಕ್ರೋಶಗೊಂಡು ಮಾತನಾಡಿದ ಅವರು, "ಅನಂತ ಕುಮಾರ್ ಮಾನಸಿಕ‌ ಸ್ಥಿಮಿತ ಕಳೆದುಕೊಂಡಿದ್ದಾರೆ. ಬಿಜೆಪಿಗೆ ಮಾನ ಮರ್ಯಾದೆ ಇದ್ದರೆ ಅನಂತ್ ಕುಮಾರ್ ಹೆಗಡೆಗೆ ಚಿಕಿತ್ಸೆ ಕೊಡಿಸಿ, ಅವರನ್ನು ಸಂಸದ ಸ್ಥಾನದಿಂದ ವಜಾ ಮಾಡಿ. ಇದು ಕೇವಲ ಅನಂತ್ ಕುಮಾರ್ ಹೆಗಡೆ ಧ್ವನಿ ಅಲ್ಲ ಇದು ಬಿಜೆಪಿ ಮೈಂಡ್ ಸೆಟ್. ಬಿಜೆಪಿಯೇ ಎಚ್ಚರಿಸಿದರೂ ಹೆಗಡೆ ಕ್ಷಮೆ ಕೇಳಿಲ್ಲ. ದೇಶದ ಪರಂಪರೆ ಬಗ್ಗೆ, ಗಾಂಧೀಜಿ, ಅಂಬೇಡ್ಕರ್ ಬಗ್ಗೆ ಗೌರವ ಇಲ್ಲವೇ ನಿಮಗೆ? ಗೌರವ ಇದ್ದರೆ ಹೆಗಡೆ ಮೇಲೆ ಶಿಸ್ತುಕ್ರಮ ಕೈಗೊಳ್ಳಿ. ಅನಂತ್ ಕುಮಾರ್ ಹೆಗಡೆ ಸದಸ್ಯತ್ವ ರದ್ದು ಮಾಡಿ" ಎಂದು ಆಗ್ರಹಿಸಿದ್ದಾರೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+