ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯ ಬೀದಿ ನಾಯಿಗಳಿಗೆ ಪ್ರತಿಫಲಕ ಬೆಲ್ಟ್!

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಉಡುಪಿ, ಡಿಸೆಂಬರ್. 13 : ರಸ್ತೆಯಲ್ಲಿ ಬಿದಿ ನಾಯಿಗಳನ್ನು ಅಪಘಾತದಿಂದ ಕಾಪಾಡುವ ದೃಷ್ಟಿಯಿಂದ ಉಡುಪಿಯ ಸಾಸ್ತಾನ್ ನ ಯುವಕರು ಸೇರಿ ಪ್ರತಿಫಲಕ ಬೆಲ್ಟ್ ಗಳನ್ನೂ ಅಳವಡಿಸುವ ಮೂಲಕ ನಾಯಿಗಳಿಗೆ ರಕ್ಷಣೆ ನೀಡುವಲ್ಲಿ ಮುಂದಾಗಿದ್ದಾರೆ.

ನಾಯಿಗಳಿಗೆ ಪ್ರತಿಫಲಕ ಬೆಲ್ಟ್ ಅಳವಡಿಸುವುದರಿಂದ ಬೈಕ್ ಸವಾರರಿಗೂ ರಕ್ಷಣೆ ಮಾಡಿದಂತಾಗಿದೆ. ಅದು ಹೇಗೆಂದರೆ, ಕೆಂಪು ಬಣ್ಣದ ಬೆಲ್ಟ್ ನ್ನು ನಾಯಿಗಳ ಕುತ್ತಿಗೆಗೆ ಕಟ್ಟಲಾಗಿದ್ದು, ರಾತ್ರಿ ವೇಳೆ ಆ ಬೆಲ್ಟ್ ಲೈಟ್ ಬೆಳಕಿಗೆ ಹೊಳೆಯುತ್ತದೆ. ಇದರಿಂದ ವಾಹನ ಸವಾರರಿಗೆ ಗೋಚರಿಸಲಿದೆ. ಈ ಬೆಲ್ಟ್ ನಿಂದ ನಾಯಿ ರಕ್ಷಣೆ ಜೊತೆಗೆ ಬೈಕ್ ಸವಾರರನ್ನು ರಕ್ಷಣೆ ಮಾಡಿದಂತಾಗುತ್ತದೆ.

ಉಡುಪಿಯ ರಾಷ್ಟೀಯ ಹೆದರಿಯಲ್ಲಿ ನಾಯಿಗಳು ಕಾಟ ಹೆಚ್ಚಾಗಿದ್ದು , ಬೈಕ್ ಸವಾರರಿಗೆ ರಾತ್ರಿ ವೇಳೆ ಸಾಕಷ್ಟು ಕಷ್ಟ ಅನುಭಾಹಿಸುವ ಪರಿಸ್ಥಿ ಉಂಟಾಗಿತ್ತು. ಇದನ್ನು ಗಮನಿಸಿದ ಸಾಸ್ತಾನ್ ನ ಯುವಕರು ಬೈಕ್ ಸವಾರರಿಗೆ ಇದರಿಂದ ಕಾಪಾಡುವ ನಿಟ್ಟಿನಲ್ಲಿ ಇಂತ ಒಂದು ಪ್ರಯತ್ನವನ್ನು ಮಾಡಿದ್ದಾರೆ.

Youths tie reflective collars on dogs to avoid accidents

ಒನ್ ಇಂಡಿಯಾ ಕನ್ನಡ ಜೊತೆ ಮಾತನಾಡಿದ ವಿನಯ್ ಚಂದ್ರ ಅವರು, ಚಾಲಕರಿಗೆ ಉಡುಪಿ - ಕುಂದಾಪುರ ಹೆದರಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾಯಿಗಳ ಕಟ್ಟದಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಬಹಿಸಿವೆ, ಇದರಲ್ಲಿ ಬೈಕ್ ಸವಾರರ ಅಪಘಾತ ಸಂಖ್ಯೆ ಜಾಸ್ತಿ .

ಈ ನಿಟ್ಟಿನಲ್ಲಿ ಪ್ರತಿಫಲಕ ಬೆಲ್ಟ್ ಗಳನ್ನೂ ನಾಯಿಗಳಿಗೆ ಹಳವಡಿಸುವ ಮೂಲಕ್ಕ ನಾಯಿಗಳಿಗೆ ಹಾಗು ರಸ್ತೆಯಲ್ಲಿ ಪ್ರಯಾಣಿಸುವ ಸವಾರರಿಗೂ ರಕ್ಷಣೆ ಮಾಡಿದಂತಾಗಿದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದರು.

Youths tie reflective collars on street dogs to avoid accidents

ನಾಯಿಗಳು ಬೈಕ್ ಸವಾರರ ಬೆನ್ನಟ್ಟಿ ಹೋಗುವ ಕರಣ, ಎಷ್ಟೋ ಸವಾರರು ಗಡಿಯಿಂದ ಬಿದ್ದು ಆಸ್ಪತ್ರೆಯಲ್ಲಿ ಧಾಖಲಾದದ್ದು ಇದೆ, ಈ ಕಾರಣದಿಂದ ಸವಾರರನ್ನು ಹಾಗು ನಾಯಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಇಂತ ಒಂದು ಪ್ರಯತ್ನಕ್ಕೆ ಕೈ ಜೈಜೋಡಿಸಿದೆವು ಎನ್ನುತ್ತಾರೆ ವಿನಯ್.

ಇನ್ನು ಈ ಪ್ರಯತ್ನ ಯೆಶಸ್ವಿಯಾದಲ್ಲಿ , ಉಡುಪಿಯ ಅನೇಕ ನಾಯಿಗಳ ಸಂಖ್ಯೆ ಹೆಚ್ಚಿರುವ ಸ್ಥಳಗಳಲ್ಲಿ ಈ ಬೆಲ್ಟ್ ಗಳನ್ನೂ ಅಳವಡಿಸಲಾಗುವುದು ಎಂದು ಹೇಳಿದರು.

English summary
To protect dogs from coming under the wheels of speeding vehicles and to alert the drivers, a group of youth at Sasthan tied reflection belt to a street dog. The experiment, if successful will be implemented on other street dogs as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X