ಹಿಜಾಬ್ ಬೇಕೆನ್ನುವವರಿಗೆ ಶಾಸಕ ರಘುಪತಿ ಭಟ್ ಸಲಹೆ
ಉಡುಪಿ, ಜನವರಿ 26: ಇಲ್ಲಿನ ಮಹಿಳಾ ಸರ್ಕಾರಿ ಕಾಲೇಜಿನ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಮುಖಂಡರು ಸಭೆ ನಡೆಸಿದ್ದಾರೆ. ಇನ್ನೊಂದೆಡೆ ಈ ವಿವಾದ ಕುರಿತಂತೆ ಉಡುಪಿ ಶಾಸಕ ರಘುಪತಿ ಭಟ್ ತಮ್ಮ ಪ್ರತಿಕ್ರಿಯೆ ನೀಡಿದ್ದು, ಹಿಜಾಬ್ ಬೇಕೆನ್ನುವವರಿಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು, ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ಕರ್ನಾಟಕ ಸರಕಾರ ಉನ್ನತಾಧಿಕಾರ ಸಮಿತಿ ಮೂಲಕ ಹಿಜಾಬ್ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದೆ, ಆದರೆ ಸಮಿತಿಯು ಸರಕಾರಕ್ಕೆ ವರದಿ ಸಲ್ಲಿಸುವವರೆಗೆ ಮಹಿಳಾ ಸರಕಾರಿ ಪಿಯುನಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕಾಗುತ್ತದೆ.
ವಿದ್ಯಾರ್ಥಿನಿಯರಿಗೆ ಆನ್ ಲೈನ್ ಕ್ಲಾಸ್
ಹಿಜಾಬ್ ಬೇಕೆನ್ನುವ ಆರು ವಿದ್ಯಾರ್ಥಿನಿಯರಿಗೆ ಆನ್‌ಲೈನ್ ಕ್ಲಾಸ್ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು, ಒಂದು ತಿಂಗಳು ಆನ್ ಲೈನ್ ತರಗತಿ ನಡೆಸಿ ಪರೀಕ್ಷೆ ಬರೆಯಲು ಅವಕಾಶ ಸಿಗಲಿದೆ. ಮುಂದಿನ ವರ್ಷ ಬೇಕಾದ ಕಾಲೇಜು ಆಯ್ಕೆ ಮಾಡಬಹುದು ಎಂದರು.

ಮುಸ್ಲಿಂ ಮುಖಂಡರ ಸಭೆ
ಹಿಜಾಬ್ ವಿವಾದ ಕುರಿತಂತೆ ಮುಸ್ಲಿಂ ಮುಖಂಡರ ಸಭೆ ನಡೆದಿದೆ. ಮುಸ್ಲಿಂ ಮುಖಂಡ ಜಿ.ಎ ಭಾವ ಅವರ ಜೊತೆ ಬೆಂಗಳೂರಿನಿಂದ ಬಂದಿದ್ದ ಮುಸ್ಲಿಂ ಮುಖಂಡರು ಚರ್ಚಿಸಿದ್ದಾರೆ. ಸರ್ಕಾರದ ವರದಿ ನಂತರ ಶಾಲಾಭಿವೃದ್ಧಿ ಸಮಿತಿ ನಿರ್ಧಾರ ಕೈಗೊಳ್ಳಲಿದೆ.
ಸಣ್ಣ ವಿಚಾರ ದೊಡ್ಡದು ಮಾಡಬಾರದು ಎಂದು ಮುಸ್ಲಿಂ ಮುಖಂಡರಲ್ಲಿ ವಿನಂತಿ ಮಾಡಿದ್ದೇವೆ. ಈ ಬಗ್ಗೆ ಪೋಷಕರು ವಿದ್ಯಾರ್ಥಿಗಳ ಜೊತೆ ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಜಿ.ಎ ಭಾವ ಹೇಳಿದರು.
ಇನ್ನು ಒಂದು ತಿಂಗಳಷ್ಟೇ ತರಗತಿ ಇದೆ ಆ ಬಳಿಕ ಪರೀಕ್ಷೆ, ಅಲ್ಲಿಯವರೆಗ ಹಿಜಾಬ್ ಹಾಕಿ ಬರಲು ಅವಕಾಶ ಇಲ್ಲ, ಆನ್ ಲೈನ್ ತರಗತಿಯಲ್ಲಿ ಪಾಲ್ಗೊಳ್ಳಲು ಅವಕಾಶ ಇದೆ. ಯಾರದ್ದೋ ಕುಮ್ಮಕ್ಕಿನಿಂದ ವಿದ್ಯಾರ್ಥಿನಿಯರ ಭವಿಷ್ಯ ಹಾಳಾಗಬಾರದು ಎಂದು ಪೋಷಕರಲ್ಲಿ ಶಾಸಕ ರಘುಪತಿ ಭಟ್ ಮನವಿ ಮಾಡಿಕೊಂಡರು.
ವಸ್ತ್ರಾಸಂಹಿತೆ ಬೇಕೇ ಬೇಡವೆ ಅನ್ನುವ ಬಗ್ಗೆ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸುತ್ತೆ. ಕೋರ್ಟ್ ಆರ್ಡರ್ ಹಾಗೂ ಅನ್ಯ ರಾಜ್ಯದ ವಸ್ತ್ರ ನಿಯಮ ನೋಡಿ ಉನ್ನತ ಸಮಿತಿ ವರದಿ ಕೊಡುತ್ತೆ. ಅಲ್ಲಿಯವರೆಗೆ ವಿದ್ಯಾರ್ಥಿನಿಯರು ಹಿಜಾಬ್ ಹಾಕದೆ ತರಗತಿಯಲ್ಲಿ ಕೂರಬೇಕು. ಎಲ್ಲಾ ಕಾಲೇಜಿನಲ್ಲಿ ಹಿಜಾಬ್ ತರಗತಿ ಯಲ್ಲಿ ಅವಕಾಶ ಇಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದರು.












Click it and Unblock the Notifications