ಮಲ್ಪೆ ಬೀಚ್ ನಲ್ಲಿ ಎರಡು ದೋಣಿಗಳ ಪರಸ್ಪರ ಡಿಕ್ಕಿ

By: ಉಡುಪಿ ಪ್ರತಿನಿಧಿ
Subscribe to Oneindia Kannada
ಉಡುಪಿ, ಫೆಬ್ರವರಿ. 15 : ಮೀನುಗಾರಿಕೆಗೆ ತೆರಳಿದ್ದ 'ಸೀ- ಪರ್ಲ್' ಎಂಬ ಹೆಸರಿನ ದೋಣಿಗೆ 'ಅಲ್-ರಮೀಜ್' ಎಂಬ ಹೆಸರಿನ ಮತ್ತೊಂದು ದೋಣಿ ಡಿಕ್ಕಿ ಹೊಡೆದ ಘಟನೆ ಮಂಗಳವಾರ ತಡರಾತ್ರಿ ಮಲ್ಪೆಯಿಂದ ಸುಮಾರು 21 ನಾಟಿಕಲ್ ದೂರದಲ್ಲಿ ನಡೆದಿದೆ.

ಇದರಿಂದ 'ಸೀ- ಪರ್ಲ್ ' ಬೊಟ್ ಭಾಗಶಃ ಹಾನಿಯಾಗಿದ್ದು, ಇದರಲ್ಲಿದ್ದ ಆರು ಮಂದಿ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ. ಉಳ್ಳಾಲ ಅಕ್ಕರೆಕೆರೆಯ ರಿಯಾಜ್ ಅಹ್ಮದ್ ಎಂಬವರಿಗೆ ಸೇರಿದ 'ಸೀ - ಪರ್ಲ್' ಬೋಟ್ ಈ ಅವಘಡಕ್ಕೀಡಾಗಿದೆ.

Two boats clash together at malpe beach Udupi

'ಅಲ್- ರಮೀಜ್' ಬೋಟ್ ಡಿಕ್ಕಿ ಹೊಡೆದ ಪರಿಣಾಮ 'ಸೀ-ಪರ್ಲ್' ಬೋಟ್ ಒಳಗೆ ನೀರು ನುಗ್ಗಿತ್ತು. ಅಪಾಯದ ಮುನ್ಸೂಚನೆ ಅರಿತ ತಕ್ಷಣ 'ಅಲ್ ರಮೀಜ್ ' ಬೋಟ್ ನವರು 'ಸೀ-ಪರ್ಲ್' ಬೋಟ್ ನಲ್ಲಿದ್ದವರನ್ನು ರಕ್ಷಿದ್ದಾರೆ.

ಅಲ್ಲದೆ ಸುಮಾರು ಒಂದು ಗಂಟೆಗಳ ಕಾಲ 'ಸೀ-ಪರ್ಲ್' ಬೋಟನ್ನು ಎಳೆದು ಸಮುದ್ರದ ದಡ ಸೇರಿಸಲು ಪ್ರಯತ್ನಿಸಿದರು. ಆದರೆ, ಹಗ್ಗ ತುಂಡಾದ ಪರಿಣಾಮ ಬೋಟನ್ನು ಎಳೆದು ದಡ ಸೇರಿಸುವ ಪ್ರಯತ್ನ ಕೈಗೂಡಲಿಲ್ಲ ಎನ್ನಲಾಗಿದೆ. 'ಸೀ-ಪರ್ಲ್' ಬೋಟ್ ನಲ್ಲಿದ್ದವರನ್ನು ಸುರಕ್ಷಿತವಾಗಿ ಮಂಗಳೂರು ಧಕ್ಕೆಗೆ ಸೇರಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two boasts clash together at Malpe beach, Udupi at Tuesday midnight. Fishermen's are escaped from death and were rescued by All- Ramij crew members.
Please Wait while comments are loading...