ಮಲ್ಪೆಯಲ್ಲಿ ಕಡಲು ಪ್ರಕ್ಷುಬ್ಬ, ಬೋಟುಗಳು ಮುಳುಗಡೆ: ಮೀನುಗಾರರ ರಕ್ಷಣೆ

ಉಡುಪಿ, ಆಗಸ್ಟ್.12: ಕಡಲು ಪ್ರಕ್ಷುಬ್ದವಾದ ಹಿನ್ನಲೆಯಲ್ಲಿ ಭಟ್ಕಳ-ಗಂಗೊಳ್ಳಿ ನಡುವೆ ಎರಡು ಬೋಟುಗಳು ಮುಳುಗಡೆಯಾಗಿವೆ. ಶನಿವಾರ ಬೆಳಗ್ಗೆ ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಶಿವಗಣೇಶ ಬೋಟು ಸಂಜೆ ಮರಳುವಾಗ ಮುಳುಗಡೆಯಾಗಿದೆ.

ಬೋಟಿನಲ್ಲಿ ತೂತು‌ ಬಿದ್ದಿದ್ದರಿಂದ ಇಂದು ಭಾನುವಾರ ಬೆಳಗ್ಗೆ ಮಲ್ಪೆಗೆ ಮರಳುತ್ತಿದ್ದ ಪದ್ಮದಾಸ್ ಬೋಟು ಕೂಡ ಮುಳುಗಡೆಯಾಗಿದೆ. ಮೀನುಗಾರರ ಮಾಹಿತಿ ಮೇರೆಗೆ ರಕ್ಷಣೆಗೆ ಸ್ಥಳಕ್ಕೆ ಬೋಟುಗಳು ತೆರಳಿ, ಇದೀಗ ಮೀನುಗಾರರ ರಕ್ಷಣೆ ಮಾಡಲಾಗಿದೆ.

ಶನಿವಾರ ಸಂಜೆ ಮುಳುಗುತ್ತಿದ್ದ ಶಿವಗಣೇಶ್ ಬೋಟಿನಲ್ಲಿದ್ದ 8 ಮಂದಿಯನ್ನು ಮಲ್ಪೆಯ ಬೇರೊಂದು ಬೋಟು ರಕ್ಷಣೆ ಮಾಡಿದ್ದು, ಇಂದು ಭಾನುವಾರ ಬೆಳಗ್ಗೆ ಮುಳುಗುತ್ತಿದ್ದ ಪದ್ಮದಾಸ್ ಬೋಟಿನಲ್ಲಿದ್ದ 8 ಮಂದಿಯನ್ನು ಭಜರಂಗಿ ಬೋಟಿನ ಮೀನುಗಾರರು ರಕ್ಷಿಸಿದ್ದಾರೆ.

Two boats are drowned between Bhatkal-Gangolli in the Marine turmoil

ಶನಿವಾರ ಸಂಜೆ‌ ಹಾಗೂ ಇಂದು ಭಾನುವಾರ ಬೆಳಗ್ಗೆ ಪ್ರತ್ಯೇಕ ಬೋಟು ಮುಳುಗಡೆಯಲ್ಲಿ 16ಮಂದಿ ಮೀನುಗಾರರ ರಕ್ಷಣೆ ಮಾಡಲಾಗಿದೆ. ಗಾಳಿ ಮಳೆ‌ ಹೆಚ್ಚಾಗಿ‌ ಕಡಲು ಪ್ರಕ್ಷ್ಯುಬ್ದವಾದ ಹಿನ್ನಲೆಯಲ್ಲಿ ಈ ಅವಘಡ ಸಂಭವಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+